ಮಂಗಳೂರು-ಅಯೋಧ್ಯೆ ಮಧ್ಯೆ ನೇರ ರೈಲು ಸಂಪರ್ಕ ಒದಗಿಸಲು ರೈಲ್ವೆ ಸಚಿವರಿಗೆ ಕ್ಯಾ. ಚೌಟ ಮನವಿ
ಮಂಗಳೂರು : ಮುಖ್ಯವಾಗಿ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ಅನುಕೂಲವಾಗುವಂತೆ ಮಂಗಳೂರು ಮತ್ತು ಅಯೋಧ್ಯೆ ನಡವೆ ನೇರ ರೈಲು ಸಂಪರ್ಕ ಒದಗಿಸುವಂತೆ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ದ.ಕ. ಉಡುಪಿ ಪ್ರದೇಶವು ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿ ಶ್ರೀಮಂತವಾದ ಪರಂಪರೆ ಹೊಂದಿದೆ. ಶ್ರದ್ಧೆ ಭಕ್ತಿಗೆ ಹೆಸರಾಗಿರುವ ಈ ನಾಡಿನಲ್ಲಿ ಭಜನಾ ಕಾರ್ಯಕ್ರಮ, ದೇವಾಲಯಗಳಲ್ಲಿ ಶ್ರೀರಾಮನನ್ನು ಭಜಿಸಲಾಗುತ್ತದೆ. ಅಯೋಧ್ಯೆಯ ಬಗ್ಗೆಯೂ ಇಲ್ಲಿನ ಜನರಿಗೆ ಅಪಾರ ಶ್ರದ್ದೆಯಿದೆ. ಆದ್ದರಿಂದ…

