Headlines

ಉಪ್ಪಿನಂಗಡಿ : ತಲೆಮರೆಸಿಕೊಂಡಿದ್ದ ಕುಖ್ಯಾತ ಕಳ್ಳನ ಬಂಧನ

ಉಪ್ಪಿನಂಗಡಿ : ಹಲವು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಾಸನ ಮೂಲದ ಆರೋಪಿ ಸೊಹೈಲ್ ಅಲಿಯಾಸ್ ಸೊಹಿಬ್‌ನನ್ನು (24) ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಒಟ್ಟು ಎಂಟು ಕಳ್ಳತನ ಪ್ರಕರಣಗಳಲ್ಲಿ ಸೊಹೈಲ್ ಭಾಗಿಯಾಗಿರುವುದನ್ನು ಪತ್ತೆಹಚ್ಚಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 2020 ಮತ್ತು 2022ರಲ್ಲಿ ಅವನ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. 2020ರಲ್ಲಿ ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. 2022ರಲ್ಲಿ ಕೇರಳದ ಕಣ್ಣಾಪುರ ಪೊಲೀಸ್…

Read More

SIT ಕಚೇರಿಗೆ ಮಾಹಿತಿ ನೀಡಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ ಜಯಂತ್

ಬೆಳ್ತಂಗಡಿ ಇಚಿಲಂಪಾಡಿ ನಿವಾಸಿ ಜಯಂತ್ ಎಂಬವರು ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆಗೆ ಸಂಬಂಧಿಸಿದಂತೆ, ದೂರು ನೀಡಲು ಎಸ್.ಐ.ಟಿ ಬೆಳ್ತಂಗಡಿ ಕಛೇರಿಗೆ ಹೋಗಿದ್ದು, ಈ ವೇಳೆ ಸದ್ರಿ ದೂರನ್ನು ಪರಿಶೀಲಿಸಿದ ಅಧಿಕಾರಿಗಳು, ದೂರನ್ನು ಸೂಕ್ತ ಕ್ರಮಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನೀಡುವಂತೆ ತಿಳಿಸಿರುತ್ತಾರೆ. ಅದರಂತೆ ದೂರುದಾರರು ದಿನಾಂಕ:04.08.2025 ರಂದು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರರ್ಜಿಯನ್ನು 200/DPS/2025 ರಂತೆ ಸ್ವೀಕರಿಸಿಕೊಂಡಿದ್ದು, ಸದ್ರಿ ದೂರರ್ಜಿಯ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.

Read More

ನೂರಾರೂ ಶವ ಹೂತಿಟ್ಟ ಪ್ರಕರಣ: ಬಂಗ್ಲಗುಡ್ಡದ ಕಾಡಿನಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆ

ಧರ್ಮಸ್ಥಳದ ಬಂಗ್ಲಗುಡ್ಡದ ದಟ್ಟ ಕಾಡಿನಲ್ಲಿ ನಡೆಯುತ್ತಿರುವ ಅಸ್ಥಿಪಂಜರ ಉತ್ಖನನ ಕಾರ್ಯವು ರಾಜ್ಯದಾದ್ಯಂತ ಭಾರೀ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ. ಅನಾಮಿಕ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪಿಸಿದ ಬಳಿಕ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಗಂಭೀರ ಪ್ರಕರಣದ ತನಿಖೆಯಲ್ಲಿ ತೀವ್ರವಾಗಿ ತೊಡಗಿದೆ. ಇದೀಗ ಈ ಉತ್ಖನ ಕಾರ್ಯದಲ್ಲಿ ಮತ್ತೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಬಂಗ್ಲಗುಡ್ಡದಲ್ಲಿ ನಡೆಯುತ್ತಿರುವ ಈ ಉತ್ಖನನ ಕಾರ್ಯವು ಊಟದ ಬ್ರೇಕ್‌ ಇಲ್ಲದೆ ತೀವ್ರಗತಿಯಲ್ಲಿ ನಡೆಯುತ್ತಿದೆ,…

Read More

ಧರ್ಮಸ್ಥಳ ಕೇಸ್ : ಪಾಯಿಂಟ್ 11 ರ ಬದಲು ಗುಡ್ಡದ ಮೇಲ್ಭಾಗಕ್ಕೆ ಕರೆದೊಯ್ದ ದೂರುದಾರ.!

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶೋಧ ಕಾರ್ಯಾಚರಣೆ ಶುರವಾದ ಬೆನ್ನಲ್ಲೇ ಇದೀಗ ದೂರುದಾರ 11 ನೇ ಪಾಯಿಂಟ್ ಬದಲಿಗೆ ಗುಡ್ಡದ ಮೇಲ್ಭಾಗಕ್ಕೆ ಎಸ್ ಐಟಿ ಅಧಿಕಾರಿಗಳನ್ನು ಕರೆದುಕೊಂಡು ಹೋಗಿದ್ದಾರೆ. ಧರ್ಮಸ್ಥಳದಲ್ಲಿ ದೂರುದಾರ ತೋರಿಸಿದ ಸ್ಥಳಗಳ ಪೈಕಿ ಶೋಧ ಆದ 10 ಪಾಯಿಂಟ್ ಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ. 10 ಪಾಯಿಂಟ್ ಗಳ ಪೈಕಿ ಮೂರು ಪಾಯಿಂಟ್ ಗಳಲ್ಲಿ ಗನ್ ಮ್ಯಾನ್ ನಿಯೋಜಿಸಲಾಗಿದೆ. ಅನಾಮಿಕ ಶವಗಳನ್ನು ಹೂಳಿದ್ದರ ಬಗ್ಗೆ ತಪ್ಪೊಪ್ಪಿಕೊಂಡ ನಂತ್ರ, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಎಸ್ಐಟಿಯಿಂದ…

Read More

ಮಂಗಳೂರು: ಗಣಿ ಅಧಿಕಾರಿ ಕೃಷ್ಣವೇಣಿ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ..!

ಮಂಗಳೂರು: ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಕೃಷ್ಣವೇಣಿ ಅವರ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮನೆ ಕಟ್ಟುವ ಸಂಬಂಧ ದೃಢೀಕರಣ ನೀಡಲು ಲಂಚ ಪಡೆದಿದ್ದರು ಎಂದು ಆರೋಪಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೃಷ್ಣವೇಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಮೇ 28 ರಂದು ಬಂಧಿಸಿದ್ದರು. ಇದರ ವಿರುದ್ಧ ಹೈಕೋರ್ಟ್‌ಗೆ ಸೂಕ್ತ ದಾಖಲೆಗಳೊಂದಿಗೆ ಕೃಷ್ಣವೇಣಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ…

Read More

ಪೂಜೆ- ಹೋಮ, ಹವನಾದಿಗಳಿಗೆ ಮಾತ್ರವಲ್ಲ ಈ ಗರಿಕೆ ಹುಲ್ಲು- ಅಧ್ಬುತ ಔಷಧೀಯ ಗುಣವು ಇದೆ

ಗರಿಕೆ ಹುಲ್ಲು ಅಥವಾ ದೂರ್ವೆ ಬಗ್ಗೆ ನಿಮಗೆ ತಿಳಿದಿರಬಹುದು. ಇದನ್ನು ಪೂಜೆ ಮಾಡುವಾಗ ಅಥವಾ ಹೋಮ- ಹವನಾದಿಗಳನ್ನು ಮಾಡುವಾಗ ಉಪಯೋಗಿಸಲಾಗುತ್ತದೆ. ಗಣಪನ ದೇವಸ್ಥಾನಗಳಲ್ಲಿ ಗರಿಕೆಯನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ಆದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯಾ? ಇದರ ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಕಳೆಯಂತೆ ಬೆಳೆಯುವ ಈ ಸಸಿಯು ನಿಮ್ಮ ಆರೋಗ್ಯ ಸಮಸ್ಯೆಗಳನ್ನು ಹೇಗೆ ನಿವಾರಣೆ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ. ವ್ಯಕ್ತಿಯ ದೇಹದಲ್ಲಿ ಉತ್ತಮವಾದ ರೋಗನಿರೋಧಕ ಶಕ್ತಿ ಇದ್ದರೆ ಸಾಕಷ್ಟು ಅನಾರೋಗ್ಯಗಳಿಂದ ದೂರ ಇರಬಹುದು….

Read More

ಮಂಗಳೂರು: ವಾಹನ ಸೈಡ್ ಕೊಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ

ಮಂಗಳೂರು; ವಾಹನಕ್ಕೆ ಸೈಡ್ ಕೋಡೋ ವಿಚಾರದಲ್ಲಿ ಆಟೋ ಚಾಲಕ  ಹಾಗೂ ಕಾರಿನ ಪ್ರಯಾಣಿಕರ ಮಧ್ಯೆ ಹೊಡದಾಟ ನಡೆದಿರುವ ಘಟನೆ ಮಂಗಳೂರಿನ ಪಂಪ್ವೆಲ್ ನಿಂದ ಕಂಕನಾಡಿ ಸಂಪರ್ಕಿಸುವ ರಸ್ತೆಯಲ್ಲಿ ನಡೆದಿದೆ. ವಾಹನಕ್ಕೆ ಸೈಡ್ ಕೊಡುವ ವಿಚಾರಕ್ಕೆ ಆಟೋ ಚಾಲಕ ಮತ್ತು ಕಾರು ಪ್ರಯಾಣಿಕರ ಮಧ್ಯೆ ಹೊಡೆದಾಟ ನಡೆದಿದೆ. ಇದೇ ವೇಳೆ ಅದೇ ಮಾರ್ಗವಾಗಿ ಬಂದ ಅಂಬ್ಯುಲೆನ್ಸ್ ಗೂ ದಾರಿ ನೀಡದೆ ಗುಂಪು ಹೊಡೆದಾಡಿಕೊಂಡಿದೆ ಎನ್ನಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಪೊಲೀಸರು ಅಗಸ್ಟ್ 1 ರಂದು ಸಂಜೆ 4…

Read More

ಕಾರು ಕಾಲುವೆಗೆ ಬಿದ್ದು 11ಮಂದಿ ಸಾವು..!!

ಉತ್ತರ ಪ್ರದೇಶದಇಲ್ಲಿನ ಸರಯೂ ಕಾಲುವೆಗೆ ಆಯತಪ್ಪಿ ಕಾರು ಬಿದ್ದು 11 ಮಂದಿ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಭೀಕರ ಘಟನೆ ಇಂದು (ಆ.3) ನಡೆದಿದೆ. ತೀವ್ರ ಅಸ್ವಸ್ಥವಾಗಿರುವ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಕೃಷ್ಣ ಗೋಪಾಲ್ ರೈ, ಮೃತರು ಸಿಹಗಾಂವ್ ಗ್ರಾಮದಿಂದ ಖರ್ಗುಪುರದ ಪೃಥ್ವಿನಾಥ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಬೆಲ್ವಾ ಬಹುತಾ ಬಳಿ ಅಪಘಾತ ಸಂಭವಿಸಿದೆ. ಎಸ್‌ಯುವಿ ಕಾರು ಕಾಲುವೆಗೆ ಆಯತಪ್ಪಿ ಬಿದ್ದಿದೆ. ಇದರಲ್ಲಿ…

Read More

ದ.ಕ ಜಿಲ್ಲಾ ಕುಲಾಲ ರ ಸಂಘ ಮೈಸೂರ್ (ರಿ) ಇದರ 28ನೇ ವರ್ಷದ ವಾರ್ಷಿಕೋತ್ಸ

ದಕ್ಷಿಣ ಕನ್ನಡ ಜಿಲ್ಲಾ ಕುಲಾಲ ರ ಸಂಘ ಮೈಸೂರ್ (ರಿ) ಇದರ 28ನೇ ವರ್ಷದ ವಾರ್ಷಿಕೋತ್ಸವು ಮೈಸೂರಿನ ನಿವೇದಿತಾ ನಗರ ಶ್ರೀ ರಂಗ ಸಮುದಾಯ ಭವನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಿವಕುಮಾರ್ ಕುಂಪಲ ಅಧ್ಯಕ್ಷರು ಮೈಸೂರು ಕುಲಾಲ ಸಂಘ.ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಲಯನ್ ಅನಿಲ್ ದಾಸ್ ( ಜಿಲ್ಲಾಧ್ಯಕ್ಷರು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ದ. ಕ. ಜಿಲ್ಲೆ ).ಶ್ರೀ ಗಿರೀಶ್.ಕೆ.ಎಚ್ ( ಛೇರ್ಮನ್ ಕುಂಭಶ್ರೀ ವಿದ್ಯಾ ಸಂಸ್ಥೆ ವೇಣೂರು ) ಶ್ರೀ…

Read More

ವಿಟ್ಲ: ಖಾಸಗಿ ಬಸ್ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ- ಪ್ರಕರಣ ದಾಖಲು..!

ವಿಟ್ಲ: ಖಾಸಗಿ ಬಸ್ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಕಾಂಪೌಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ ಪ್ರಯಾಣಿಕರು ಗಾಯಗೊಂಡ ಘಟನೆ ವಿಟ್ಲ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ.2-2025 ರಂದು ಸಂಜೆ, KA-19-AA-0195ನೇ ನೋಂದಣಿಯ ಖಾಸಗಿ ಬಸ್ಸಿನಲ್ಲಿ ಬಂಟ್ವಾಳ, ಕನ್ಯಾನ ನಿವಾಸಿ ವೀಣಾ ಡಿಸೋಜ (42) ರವರು ಇತರ ಪ್ರಯಾಣಿಕರೊಂದಿಗೆ, ಕಲ್ಲಡ್ಕ-ಕಾಞ್ಞಂಗಾಡ್‌ ಅಂತರ ರಾಜ್ಯ ಹೆದ್ದಾರಿಯಲ್ಲಿ, ವಿಟ್ಲ ಖಾಸಗಿ ಬಸ್ ನಿಲ್ದಾಣ ಕಡೆಯಿಂದ ಕನ್ಯಾನ…

Read More