Headlines

ಮಂಗಳೂರು: ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಮಸಾಜ್ ದಂಧೆ, ಹಲ್ಲೆ, ಲೈಂಗಿಕ ಕಿರುಕುಳ- ಸಂತ್ರಸ್ತ ಮಹಿಳೆ ಆರೋಪ 

ಮಂಗಳೂರು: ನಗರದ ಬ್ಯೂಟಿಪಾರ್ಲ‌್ರನ ಮಾಲಕಿ ತನ್ನ ಮೇಲೆ ಹಲ್ಲೆ ನಡೆಸಿ, ತನ್ನ ಬೆತ್ತಲೆ ವೀಡಿಯೋ ಮಾಡಿ ಬೆದರಿಕೆ ಮಾಡಿರುವುದಾಗಿ ಸಂತ್ರಸ್ತ ಮಹಿಳೆಯೊಬ್ಬರು ಮಾಧ್ಯಮದೆದುರು ಆರೋಪ ಮಾಡಿದ್ದಾರೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಈ ಆರೋಪ ಮಾಡಿರುವ ಮಹಿಳೆ, ಕಳೆದ ಒಂದೂವರೆ ತಿಂಗಳ ಹಿಂದೆ ನಗರದ ಹಂಪನಕಟ್ಟೆ ಮತ್ತು ಜ್ಯೋತಿ ಸರ್ಕಲ್ ನಡುವಿನ ಯುನಿಸೆಕ್ಸ್ ಬ್ಯೂಟಿಪಾರ್ಲ‌್ರನಲ್ಲಿ ಬ್ಯೂಟಿಶಿಯನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾಗಿ ಹೇಳಿದರು. ಬ್ಯೂಟಿಶಿಯನ್ ಕೋರ್ಸ್ ಮಾಡಿಕೊಂಡಿರುವ ತಾನು ಕೆಲಸಕ್ಕೆ ಸೇರುವ ಸಂದರ್ಭ ಆ ಬ್ಯೂಟಿಪಾರ್ಲ‌್ರನ ಮಾಲಕರು, ಬರುವ ಗ್ರಾಹಕರೊಂದಿಗೆ…

Read More

ಪುತ್ತೂರು: ಅಂತರರಾಜ್ಯ ಕ್ರಿಮಿನಲ್ ಇಲಿಯಾಸ್‌ ಬಂಧನ..!

ಪುತ್ತೂರು:ಡಿವೈಎಸ್ಪಿ ಪುತ್ತೂರು ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸ್‌ ಉಪನಿರೀಕ್ಷಕ ಕೌಶಿಕ್ ರವರ ನೇತೃತ್ವದಲ್ಲಿ ರಚಿಸಿದ ವಿಶೇಷ ತಂಡವು ಕೇರಳ ಹಾಗೂ ಕರ್ನಾಟಕಕ್ಕೆ ಬೇಕಾಗಿದ್ದ ಅಂತರರಾಜ್ಯ ಅಪರಾಧಿ ಇಲಿಯಾಸ್ ಪಿ.ಎ. , ತ್ರಿಶೂ‌ರ್ ಜಿಲ್ಲೆಯ ವಿಯ್ಯುರು ಮೂಲದವನನ್ನು ಬಂಧಿಸಿ ಮಾನ್ಯ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಸಿಬ್ಬಂದಿಗಳಾದ ಹೆಚ್.ಸಿ. 685 ಪ್ರಶಾಂತ್ ರೈ, ಹೆಚ್.ಸಿ. 1028 ಗಣೇಶ್, ಸಿಪಿಸಿ 1944 ಮ್ಯಾಥ್ಯ ವರ್ಗೀಸ್, ಸಿಪಿಸಿ 2283 ಶ್ರೀಶೈಲ ಎಂ.ಕೆ. ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇಲಿಯಾಸ್ ಪಿ.ಎ. ವಿರುದ್ಧ ಪುತ್ತೂರು…

Read More

 ಧರ್ಮಸ್ಥಳ ಕೇಸ್: ದೂರುದಾರ ಎಷ್ಟೇ ಸ್ಥಳ ತೋರಿಸಿದರೂ GPR ಮೂಲಕ ಶೋಧಕ್ಕೆ SIT ತೀರ್ಮಾನ

ಧರ್ಮಸ್ಥಳ: ಇಲ್ಲಿನ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವುಗಳು ದೊರೆಯುತ್ತಿವೆ. 13ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಕ್ಕೆ ಜಿಪಿಆರ್ ಬಳಕೆಗೆ ಎಸ್ಐಟಿ ತೀರ್ಮಾನಿಸಿದೆ. ಇದಲ್ಲದೇ ಇನ್ಮುಂದೆ ದೂರುದಾರ ಎಷ್ಟೇ ಪಾಯಿಂಟ್ ತೋರಿಸಿದರೂ, ಅವುಗಳನ್ನೆಲ್ಲ ಜಿಪಿಆರ್ ಬಳಸಿ ಶೋಧ ಕಾರ್ಯ ಮಾಡಲು ನಿರ್ಧರಿಸಿದೆ. ಹೌದು 13ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಕ್ಕೆ ಎಸ್ಐಟಿ ಅಧಿಕಾರಿಗಳು ಜಿಪಿಆರ್ ಬಳಕೆ ಮಾಡಲು ನಿರ್ಧರಿಸಿದ್ದಾರೆ. ದೂರುದಾರ ಕೂಡ ಜಿಪಿಆರ್ ಬಳಕೆ ಮಾಡಿ ಶೋಧಕ್ಕೆ ಮನವಿ ಮಾಡಿದ್ದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂಬುದಾಗಿ…

Read More

ಮಂಗಳೂರು: ಮಾದಕ ವಸ್ತು ಮಾರಾಟ ಆರೋಪ- ನಾಲ್ಕು ಮಂದಿ ಅರೆಸ್ಟ್

ಮಂಗಳೂರು: ನಗರದ ಬಂಗ್ರಕುಳೂರು ಬಳಿ ಸಾರ್ವಜನಿಕರಿಗೆ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ಕು ಮಂದಿಯನ್ನು ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಉದ್ಯಾವರ ಸಂಪಿಗೆ ನಗರ ನಿವಾಸಿ ದೇವರಾಜ್ ಪೂಜಾರಿ (38), ಕಾಪು ಪಿಪಾರ್ ಪುದು ನಿವಾಸಿ ಜೀವನ್ ಅಮೀನ್ (32), ಮಂಗಳೂರು ತಿರುವೈಲು ನಿವಾಸಿ ಇಮ್ರಾನ್ (40), ದಂಬೆಲ್ ನಿವಾಸಿ ಹನೀಫ್ (56) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಆ.7ರಂದು ಸೆನ್ ಪೊಲೀಸ್ ಠಾಣೆಗೆ ಬಂದ ಮಾಹಿತಿಯಂತೆ ಪಡುಕೋಡಿ ಗ್ರಾಮದ ಬಂಗ್ರಕುಳೂರು…

Read More

ಪುತ್ತೂರು: ಮಹಿಳೆಯ ಶವ ಪತ್ತೆ ಪ್ರಕರಣ- ಪತಿಯ ಸಹೋದರನಿಂದ ಕೊಲೆ

ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದಾರುಣ ಘಟನೆಯಲ್ಲಿ ಬಂಟ್ವಾಳದ ಕೆದಿಲ ಗ್ರಾಮದ ಮಮತಾ ಎಂಬ ಮಹಿಳೆ ಹತ್ಯೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಮೃತ ಮಮತಾರವರ ಗಂಡ ಗಣಪತಿ @ ರಾಮಣ್ಣಗೌಡ (44) ನೀಡಿದ ದೂರಿನಂತೆ, ತಮ್ಮ ಸಹೋದರನಾದ ಬಂಟ್ವಾಳ ಕೆದಿಲ ನಿವಾಸಿ ಲೋಕಯ್ಯ @ ಸುಂದರ ಎಂಬಾತನು, ತನ್ನ ವಿವಾಹ ವಿಚ್ಛೇದನದ ಪರಿಹಾರ ಹಣದ ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ, ಆಗಸ್ಟ್ 6ರಂದು ಕೆದಿಲ ಗ್ರಾಮದ ವಳಕುಮೇರು ಎಂಬಲ್ಲಿ ಮಮತಾರವರ ಮೇಲೆ…

Read More

ಧರ್ಮಸ್ಥಳ: ಯೂಟ್ಯೂಬ‌ರ್ ಹಲ್ಲೆ ಪ್ರಕರಣ- ಸೋಮನಾಥ ಸಪಲ್ಯ ಬಂಧನ

ಬೆಳ್ತಂಗಡಿ : ಧರ್ಮಸ್ಥಳ ಕ್ಷೇತ್ರದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಕಾರಣಕ್ಕೆ ಆ.6 ರಂದು ಸಂಜೆ ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್ ನಲ್ಲಿ ನಾಲ್ಕು ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆಸಿ, ಅವರ ಕ್ಯಾಮರಾಗಳಿಗೆ ಹಾನಿ ಮಾಡಿ, ಜೀವ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ BNS 189(2), 191(2), 115(2), 324(5), 352, 307 8 190 0 ಅಡಿಯಲ್ಲಿ 15 ರಿಂದ 50 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ…

Read More

ಧರ್ಮಸ್ಥಳದಲ್ಲಿ ಹೊಡೆದಾಟ: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಗೆ ಕೊಲೆ ಬೆದರಿಕೆ.!

ಬೆಂಗಳೂರು : ಧರ್ಮಸ್ಥಳದಲ್ಲಿ ಈಗಾಗಲೇ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ನಡೆಸುತ್ತಿದ್ದಾರೆ. ಅದರ ಬೆನ್ನಲ್ಲೇ ನಿನ್ನೆ ಯೂಟ್ಯೂಬರ್ಗಳ ಮೇಲೆ ಸ್ಥಳೀಯರು ಹಲ್ಲೆ ಮಾಡಿ ಗಲಾಟೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ ಈ ವೇಳೆ ಬಿಗ್ ಬಾಸ್ ಮಾಜಿ ಸ್ಪರ್ಧಿಸಿ ಕೂಡ ಅಲ್ಲಿಯೇ ಇದ್ದರು ಅವರ ಸಮ್ಮುಖದಲ್ಲಿ ಯೂಟ್ಯೂಬರ್ ಗಳ ಮೇಲೆ ಹಲ್ಲೆ ನಡೆದಿದೆ. ಇನ್ನು ಈ ವಿಚಾರವಾಗಿ ರಜತ್ ಕಿಶನ್ ನನಗೆ ಕೊಲೆ ಬೆದರಿಕೆ ಬರುತ್ತಿದೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ಕೊಲೆ…

Read More

ಉಡುಪಿ : ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಉಡುಪಿ : ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟಣೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರಿನಲ್ಲಿ ನಡೆದಿದೆ. ಕೊಡವೂರು ಗ್ರಾಮದ 17 ವರ್ಷ ಪ್ರಾಯದ ಮೇಘಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೇಘಾ ಕಿದಿಯೂರು ಶ್ಯಾಮಿಲಿ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈಕೆಗೆ ಕಳೆದ ಒಂದು ವರ್ಷದಿಂದ ಪೀಡ್ಸ್‌ ಖಾಯಿಲೆಯಿದ್ದು, ಈ ಬಗ್ಗೆ ಉಡುಪಿ ಮಿತ್ರಾ ಆಸ್ಪತ್ರೆ ಮತ್ತು ದೊಡ್ಡಣಗುಡ್ಡೆ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆಗಸ್ಟ್ 6…

Read More

ಧರ್ಮಸ್ಥಳ: ಯುವತಿ ನೇಣು ಬಿಗಿದು ಆತ್ಮಹತ್ಯೆ..!!

ಧರ್ಮಸ್ಥಳ: ಗ್ರಾಮದ ಮುಳಿಕ್ಕಾರು ನಿವಾಸಿ ವಿನುತ ಅವರು ಆಗಸ್ಟ್ 6 ರಂದು ರಾತ್ರಿ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನುತ ಅವರು ಧರ್ಮಸ್ಥಳದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನಷ್ಟೆ ಪತ್ತೆಯಾಗಬೇಕಾಗಿದೆ.ಮೃತರು ಪತಿ ಸಂದೇಶರನ್ನು ಅಗಲಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Read More

ಅಮೇರಿಕಾ ಅಧ್ಯಕ್ಷ ಟ್ರಂಪ್ ಗೆ ಈ ಖಡಕ್ ಸಂದೇಶ ಕೊಟ್ಟ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಸುಂಕ ಯುದ್ಧವನ್ನು ಹೆಚ್ಚಿಸಿದ ಮರುದಿನವೇ ಬಲವಾದ ಸಂದೇಶವನ್ನು ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತವು ತನ್ನ ಪಶುಸಂಗೋಪನಾ ಉದ್ಯಮ ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಒತ್ತಿ ಹೇಳಿದರು. “ಬೆಲೆ ತೆರಬೇಕಾಗುತ್ತದೆ” ಎಂದು ತಮಗೆ ತಿಳಿದಿದ್ದರೂ, ರೈತರಿಗಾಗಿ ಅದನ್ನು ಮಾಡಲು ಸಿದ್ಧ ಎಂದು ಪ್ರಧಾನಿ ಹೇಳಿದರು

Read More