ಬೆಳ್ತಂಗಡಿ: ಅಕ್ರಮ ಗೋ ಸಾಗಾಟ- ಓರ್ವ ಸೆರೆ, ಪೊಲೀಸರಿಗೆ ಹಲ್ಲೆ ನಡೆಸಿ ಇಬ್ಬರು ಪರಾರಿ
ಬೆಳ್ತಂಗಡಿ : ಚಾರ್ಮಾಡಿ ಕಡೆಯಿಂದ ಅಕ್ರಮವಾಗಿ ಇನ್ನೋವಾ ಕಾರಿನಲ್ಲಿ ಮೂರು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿ ತೆಗೆದುಕೊಂಡು ಬರುತ್ತಿರುವ ವೇಳೆ ಪೊಲೀಸರು ತಡೆದು ನಿಲ್ಲಿಸಿದ ಘಟನೆ ಗುರುವಾಯನಕೆರೆಯ ವೃತ್ತದಲ್ಲಿ ಆ.13ರಂದು ಬೆಳಗ್ಗೆ ನಡೆದಿದೆ. ಚಾರ್ಮಾಡಿ ಕಡೆಯಿಂದ ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ಗುರುವಾಯನಕೆರೆಯಲ್ಲಿ ಮೂರು ಗಾಡಿಗಳಿಗೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಸ್ಥಳದಲ್ಲಿ ನಿಂತಿದ್ದ ಸಂಚಾರಿ ಠಾಣಾ ಪೊಲೀಸರು ತಕ್ಷಣ ಗಾಡಿಯನ್ನು ನಿಲ್ಲಿಸಿದ್ದಾರೆ. ಅದರಲ್ಲಿದ್ದ ಮೂವರಲ್ಲಿ ಇಬ್ಬರು ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಹೆಚ್ಚಿನ…

