ಉಡುಪಿ :ಆನ್ ಲೈನ್ ನಲ್ಲಿ ವಿಡಿಯೋ ಕರೆ ಮಾಡಿ ವಂಚನೆ ಆರೋಪಿ ಹಾಗೂ ಸ್ವತ್ತು ವಶ
ದೂರುದಾರರಿಗೆ ಫೇಸ್ ಬುಕ್ ನಲ್ಲಿ ಯುವತಿಯ ಪರಿಚಯವಾಗಿ, ದೂರುದಾರರಿಗೆ ವಿಡಿಯೋ ಕಾಲ್ ಮಾಡಿದ್ದು ಪಿರ್ಯಾದಿದಾರರು ವಿಡಿಯೋ ಕರೆ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪಿರ್ಯಾದಿದಾರರ ಮುಖ ಇರುವ ಮಾರ್ಪಿಂಗ್ ಮಾಡಿದ ನಗ್ನ ವಿಡಿಯೋವನ್ನು ಪಿರ್ಯಾದಿದಾರರ ವಾಟ್ಯಾಪ್ ನಂಬರಿಗೆ ಕಳುಹಿಸಿ, ಅಪರಿಚಿತ ವ್ಯಕ್ತಿಗೆ ಹಣವನ್ನು ನೀಡದಿದ್ದರೆ ಪಿರ್ಯಾದಿದಾರರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡುವುದಾಗಿ ಪಿರ್ಯಾದಿದಾರರಿಗೆ ಬೆದರಿಸಿ ಪಿರ್ಯಾದಿದಾರರಿಂದ ಹಂತ-ಹಂತವಾಗಿ ಒಟ್ಟು 4,44,999.97/- ಹಣವನ್ನ ವರ್ಗಾಯಿಸಿಕೊಂಡು ಮೊಸ ಮಾಡಿರುತ್ತಾರೆ. ಪಿರ್ಯಾದಿದಾರರು ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ…

