ಬಂಟ್ವಾಳ: ದನ ಕಳ್ಳತನ ಪ್ರಕರಣದ ಆರೋಪಿಯ ಬಂಧನ..!
ಬಂಟ್ವಾಳ: ಇರಾ ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ವರದಿಯಾದ ದನ ಕಳ್ಳತನ ಪ್ರಕರಣವನ್ನು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಗಳೂರಿನ ಆಜಾದ್ ನಗರದ ಆರೋಪಿ ಇರ್ಷಾದ್ ಎಂದು ಗುರುತಿಸಲಾಗಿದೆ. ಮಾರ್ಚ್ 23 ರಂದು ಸುಮಾರು 12,000 ರೂ. ಮೌಲ್ಯದ ಹಸು ಕಾಣೆಯಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ನಂತರ, ಪೊಲೀಸರು ಮಂಗಳೂರಿನ ಆಜಾದ್ ನಗರದ ಆರೋಪಿ ಇರ್ಷಾದ್ ನನ್ನು ಬಂಧಿಸಿದರು. ಆರೋಪಿಯು ದಕ್ಷಿಣ ಕನ್ನಡ ಮತ್ತು ಇತರ ಹಲವಾರು ಜಿಲ್ಲೆಗಳಲ್ಲಿ…

