ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ!
ಬೆಳ್ತಂಗಡಿ : ಧರ್ಮಸ್ಥಳದಲ್ಲಿ ನಡೆದ ಬಹು ಅತ್ಯಾ೧ಚಾರ, ಕೊಲೆ ಮತ್ತು ಸಮಾಧಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಸೆ.6 ರಂದು ಬಂಗ್ಲೆಗುಡ್ಡೆಯಲ್ಲಿ ನಡೆಸಿದ ಸ್ಥಳ ಪರಿಶೀಲನೆ ವೇಳೆ ಮಾನವ ಅಸ್ಥಿಪಂಜರ ಅವಶೇಷಗಳನ್ನು ಪತ್ತೆಹಚ್ಚಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ‘ಬಂಗಲೆ ಗುಡ್ಡೆಯಲ್ಲಿ ನಡೆದ ಸ್ಥಳ ಮಹಜರ್ ಸಮಯದಲ್ಲಿ, ಎಸ್‌ಐಟಿ ಕನಿಷ್ಠ ಇಬ್ಬರು ವ್ಯಕ್ತಿಗಳ ಅಸ್ಥಿಪಂಜರ ಅವಶೇಷಗಳನ್ನು ವಶಪಡಿಸಿಕೊಂಡಿದೆ. ಇದು ತನಿಖಾ ತಂಡಕ್ಕೆ ಆಘಾತಕಾರಿ ಬೆಳವಣಿಗೆಯಾಗಿದೆ’ ಎಂದು ಹಿರಿಯ ಪೊಲೀಸ್ ಮೂಲವೊಂದು ತಿಳಿಸಿದೆ. ನಿರ್ಜನ ಸ್ಥಳದಲ್ಲಿ ಹೆಚ್ಚಿನ ಅಸ್ಥಿಪಂಜರಗಳನ್ನು ಹೂಳಿರಬಹುದು…

