ಮಂಗಳೂರು: ಚಿನ್ನದ ಸರ ಕಳ್ಳತನ ಪ್ರಕರಣ- ಉಳ್ಳಾಲ ಮೂಲದ ಮಹಿಳೆ ಮಿನ್ನತ್ ಅರೆಸ್ಟ್
ಮಂಗಳೂರು: ಉಳ್ಳಾಲದ ನಿವಾಸಿ ಶ್ರೀಮತಿ ಮಿನ್ನತ್ ಅವರನ್ನು ಚಿನ್ನದ ಸರ ಕಳ್ಳತನದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿತೆಯ ವಶದಿಂದ ಒಟ್ಟು 18 ಗ್ರಾಂ ತೂಕದ, ಸುಮಾರು ರೂ. 1.80 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಪ್ರಕಾರ, ಜೂನ್ 2, 2025ರಂದು ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ನಿವಾಸಿ ಶ್ರೀಮತಿ ರಹಮತ್ ಅವರು ತಮ್ಮ ಮಕ್ಕಳೊಂದಿಗೆ ತೊಕ್ಕೊಟ್ಟು ಗ್ರಾಮದಲ್ಲಿನ “ಸಾಗರ ಕಲೆಕ್ಷನ್” ಅಂಗಡಿಗೆ ಬಟ್ಟೆ ಖರೀದಿಸಲು ತೆರಳಿದ್ದರು. ಮಳೆಯ ಕಾರಣಕ್ಕೆ “ಸ್ಟ್ರೀಟ್ ಪ್ಯಾಲೇಸ್ ಬೇಕರಿ” ಎದುರು ನಿಂತಿದ್ದಾಗ,…

