ಮಂಗಳೂರು: ಇಂಜಿನ್ ಬಂದ್ ಆಗಿ ಮೀನುಗಾರಿಕಾ ಬೋಟ್ ಪಲ್ಟಿ..!! ಅಪಾರ ನಷ್ಟ
ಮಂಗಳೂರು: ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ತೆರಳಿದ್ದ ಮೀನುಗಾರಿಕಾ ಬೋಟ್ ಎಂಜಿನ್ ವೈಫಲ್ಯದಿಂದ ಸಮುದ್ರ ತಟದ ಕಲ್ಲು ಬಂಡೆಗೆ ಬಡಿದು ಪಲ್ಟಿಯಾದ ಘಟನೆ ಮಂಗಳೂರು ಹೊರ ವಲಯದ ಉಳ್ಳಾಲ ಸೀಗ್ರೌಂಡ್‌ನಲ್ಲಿ ನಡೆದಿದೆ. ಬೋಟ್‌ನಲ್ಲಿದ್ದ 13 ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಅಶ್ಫಾಕ್ ಎಂಬವರ ಮಾಲಕತ್ವದ ಬುರಾಖ್ ಹೆಸರಿನ ಮೀನುಗಾರಿಕಾ ಬೋಟ್ ದುರಂತಕ್ಕೀಡಾಗಿದೆ. ಈ ಸಂದರ್ಭ ಚಾಲಕ ಸಹಿತ ಬೋಟ್‌ನಲ್ಲಿದ್ದ ಹದಿಮೂರು ಮಂದಿ ಮೀನುಗಾರರು ಈಜಿ ದಡ ಸೇರಿದ್ದಾರೆ. ಇಂದು ಮುಂಜಾನೆ 2.30 ಗಂಟೆಗೆ ಮಂಗಳೂರಿನ ಧಕ್ಕೆಯಿಂದ ಹದಿಮೂರು ಮಂದಿಯನ್ನು ಹೇರಿಕೊಂಡು…

