ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317ಡಿ ವತಿಯಿಂದ ಸೆ. 21 ರಂದು ಪುರಭವನದಲ್ಲಿ ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆ
ಮಂಗಳೂರು: ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317 ಡಿ ಇದರ ಆಶ್ರಯದಲ್ಲಿ “ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ ಸೆಪ್ಟೆಂಬರ್ 21 ರಂದು ಭಾನುವಾರ ಬೆಳಿಗ್ಗೆ 8.30 ಕ್ಕೆ ಕುದ್ಮಲ್ ರಂಗರಾವ್ ಪುರಭವನ ಮಂಗಳೂರಿನಲ್ಲಿ ನಡೆಯಲಿದೆ ಎಂದು ಲಯನ್ ರಾಜೇಶ್ ಶೆಟ್ಟಿ ಶಬರಿ ತಿಳಿಸಿದರು. ಅವರು ನಗರದ ಲಯನ್ ಅಶೋಕದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸುಮಾರು 25 ತಂಡಗಳು ಭಾಗವಹಿಸಲಿದ್ದು, ಸೆಟ್ಟಿಂಗ್ ಸೇರಿ ಒಂದು ತಂಡಕ್ಕೆ 20 ನಿಮಿಷಗಳ ಕಾಲಾವಧಿ…

