ಇಂದಿನಿಂದ GST ಸ್ಲ್ಯಾಬ್ ಜಾರಿ: ಯಾವ ವಸ್ತುಗಳು ಅಗ್ಗ, ಯಾವುದು ದುಬಾರಿ?
ಇಂದಿನಿಂದ GST ಸ್ಲ್ಯಾಬ್ ಜಾರಿ, ಯಾವ ವಸ್ತುಗಳು ಅಗ್ಗ, ಯಾವುದು ದುಬಾರಿಯಾಗಲಿದೆ ಎಂಬ ಮಾಹಿತಿ ಇಲ್ಲಿದೆ. ಔಷಧಿಗಳು, ಆಟೋಮೊಬೈಲ್ ಮತ್ತು ಉಪಕರಣಗಳು ಸೇರಿದಂತೆ ಸುಮಾರು 375 ವಸ್ತುಗಳ ಮೇಲೆ ಹೊಸ ಜಿಎಸ್‌ಟಿ ದರ ಇಂದಿನಿಂದ (ಸೆ. 22) ಜಾರಿಗೆ ಬರಲಿದೆ. ಈ ಹಿನ್ನೆಲೆ ಅಡುಗೆ ಸಾಮಗ್ರಿಗಳ ಬೆಲೆಗಳು ಸೋಮವಾರದಿಂದ ಅಗ್ಗವಾಗಲಿವೆ. ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡ ಜಿಎಸ್‌ಟಿ ಮಂಡಳಿಯು ನವರಾತ್ರಿಯ ಮೊದಲ ದಿನವಾದ ಸೆಪ್ಟಂಬರ್ 22 ರಿಂದ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ದರಗಳನ್ನು ಕಡಿಮೆ…

