Headlines

ವಕೀಲರಾಗಿ 7 ವರ್ಷಗಳ ವೃತ್ತಿ ಹೊಂದಿರುವ ನ್ಯಾಯಾಂಗ ಅಧಿಕಾರಿಗಳು ಜಿಲ್ಲಾ ನ್ಯಾಯಾಧೀಶರಾಗಲು ಅರ್ಹರು: ಸುಪ್ರೀಂ ಕೋರ್ಟ್

ಈಗಾಗಲೇ 7 ವರ್ಷಗಳ ವಕೀಲರ ವೃತ್ತಿ ಪೂರ್ಣಗೊಳಿಸಿರುವ ನ್ಯಾಯಾಂಗ ಅಧಿಕಾರಿಗಳು ಬಾರ್ ಕೋಟಾದಡಿ ಜಿಲ್ಲಾ ನ್ಯಾಯಾಧೀಶರಾಗಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ. ನ್ಯಾಯಾಂಗ ಅಧಿಕಾರಿಗಳು ಈಗಾಗಲೇ ಏಳು ವರ್ಷಗಳನ್ನು ಬಾರ್ ನಲ್ಲಿ ಸೇವೆಗೆ ಒಳಪಡಿಸುವ ಮೊದಲು ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ” ಎಂದು ಐವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹೇಳಿದರು. ಸಂವಿಧಾನದ ವ್ಯಾಖ್ಯಾನವು “ಸಾವಯವ” ಆಗಿರಬೇಕು ಮತ್ತು “ವಿದ್ವಾಂಸ” ಅಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಜಿಲ್ಲಾ…

Read More

ಮಂಗಳೂರು ಉತ್ತರ ವಿಧಾನ ಸಭಾ ಕುಲಾಲ ಕುಂಬಾರ ವೇದಿಕೆಯ ನೂತನ ಅಧ್ಯಕ್ಷರಾಗಿ ಚೆನ್ನಕೇಶವ ಕುಳಾಯಿ ಆವಿರೋಧ ಆಯ್ಕೆ

ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆ ಗಳ ಒಕ್ಕೂಟ (ರಿ ) ಇದರ ಮಂಗಳೂರು ಉತ್ತರ (ಸುರತ್ಕಲ್) ವಿಧಾನ ಸಭೆಯ ನೂತನ ಅಧ್ಯಕ್ಷರಾಗಿ ಶ್ರೀ ಚೆನ್ನಕೇಶವ ಕುಳಾಯಿ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಚೇತನ್ ತಡಂಬೈಲ್ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.

Read More

ಗಾಜಾ ಕದನ ವಿರಾಮಕ್ಕೆ ಇಸ್ರೇಲ್–ಹಮಾಸ್ ಒಪ್ಪಿಗೆ; ಶೀಘ್ರದಲ್ಲೇ ಒತ್ತೆಯಾಳುಗಳ ಬಿಡುಗಡೆ

ಮಧ್ಯಪ್ರಾಚ್ಯದಲ್ಲಿ ಶಾಂತಿಯತ್ತ ಮಹತ್ವದ ಹೆಜ್ಜೆಯಾಗಿ, ಇಸ್ರೇಲ್ ಮತ್ತು ಹಮಾಸ್ ಗಾಝಾ ಕದನ ವಿರಾಮ ಯೋಜನೆಯ ಮೊದಲ ಹಂತಕ್ಕೆ ಒಪ್ಪಂದ ಮಾಡಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ. ಟ್ರಂಪ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿರುವ ಪೋಸ್ಟ್ ನಲ್ಲಿ, “ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಝಾದ ಕದನ ವಿರಾಮದ ಮೊದಲ ಹಂತಕ್ಕೆ ಒಪ್ಪಂದ ತಲುಪಿದೆ. ಇದು ಶಾಂತಿಯ ಪ್ರಾರಂಭದ ಹೊಸ ಅಧ್ಯಾಯವಾಗಿದೆ” ಎಂದು ಹೇಳಿದ್ದಾರೆ. ಈ ವಾರಾಂತ್ಯದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲು…

Read More

ಬಂಟ್ವಾಳ: ಸ್ವಚ್ಛವಿಲ್ಲದ ಟಾಯ್ಲೆಟ್, ಮುರಿದು ಬಿದ್ದ ಬಾಗಿಲು-ಮಿನಿ ವಿಧಾನಸೌಧ ಅವ್ಯವಸ್ಥೆ!

ಬಂಟ್ವಾಳ: ಮುರಿದು ಬಿದ್ದ ಬಾಗಿಲು, ಸ್ವಚ್ಛವಿಲ್ಲದ ಟಾಯ್ಲೆಟ್, ಪಾನ್ ಪರಾಗ್ ತಿಂದು ಉಗುಳಿದ ಗೋಡೆಗಳು, ತುಕ್ಕು ಹಿಡಿದ ಆಡಳಿತ ಯಂತ್ರಗಳು ಒಟ್ಟಾರೆಯಾಗಿ ಜಡತ್ವದ ಚೌಕಟ್ಟಿನಲ್ಲಿರುವ ಬಂಟ್ವಾಳ ಆಡಳಿತ ಸೌಧದ ಕಚೇರಿಯ ಅವ್ಯವಸ್ಥೆಯ ಬಗ್ಗೆ ಹೇಳಿದಷ್ಟು ಕಡಿಮೆಯೇ. ಜನಪ್ರತಿನಿಧಿಗಳು ಹಾಗೂ  ಸಂಬಂಧಿಸಿದ ಮೇಲಾಧಿಕಾರಿಗಳು ಒಮ್ಮೆ ಭೇಟಿ ಕೊಡಿ ಎಂಬ ಒತ್ತಾಯಗಳು ಸಾರ್ವಜನಿಕರಿಂದ ಕೇಳಿ ಬಂದಿವೆ. ಆಡಳಿತ ಸೌಧದ ಕಚೇರಿಗೆ ಪ್ರವೇಶ ಮಾಡಿದ ನಂತರ ಒಂದನೇ ಮತ್ತು ಎರಡನೇ ಮಹಡಿಗೆ  ಮೆಟ್ಟಿಲುಗಳ ಮೇಲೆ ಹತ್ತಿಕೊಂಡು ಹೋಗಬೇಕಾದರೆ ನಿಮ್ಮನ್ನು ಕೆಂಪು ಬಣ್ಣ…

Read More

ಉಳ್ಳಾಲ: ಮಾನವನ ಅಸ್ಥಿಪಂಜರ ಪತ್ತೆ ಪ್ರಕರಣ- ಕುರುಹು ಪತ್ತೆ ಹಚ್ಚಿದ ಪೊಲೀಸರು

ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ದೇವಿಪುರದ ಅಕ್ಷಯ ಫಾರ್ಮ್‌ನಲ್ಲಿ ಮಂಗಳವಾರ (ಅ.8) ಬೆಳಿಗ್ಗೆ ಬೆಳಕಿಗೆ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾನವನ ಅಸ್ಥಿಪಂಜರ ಬಿಹಾರ ಮೂಲದಿಂದ ಬಂದು ಮಂಜೇಶ್ವರದಲ್ಲಿ ನೆಲೆಸಿದ್ದ ವ್ಯಕ್ತಿಯದ್ದಿರಬಹುದೆಂದು ಪೊಲೀಸರು ಸಿಕ್ಕ ದಾಖಲೆಗಳ ಆಧಾರದಲ್ಲಿ ಶಂಕಿಸಿದ್ದಾರೆ. ಬಿಹಾರ ಮೂಲದ ರಾಹುಲ್ ಕುಮಾರ್ ಎಂಬಾತ ಎರಡು ತಿಂಗಳ ಹಿಂದೆ ಕೇರಳದಲ್ಲಿ ನಾಪತ್ತೆಯಾದ ಕುರಿತು ಮಂಜೇಶ್ವರ ಠಾಣೆಯಲ್ಲಿ ಆಗಸ್ಟ್ 7ರಂದು ಪ್ರಕರಣ ದಾಖಲಾಗಿತ್ತು. ಆದರೆ ಈತ ಎಲ್ಲಿಗೆ ಹೋಗಿದ್ದಾನೆ ಎಂಬ ಯಾವ ಸುಳಿವೂ ಸಿಕ್ಕಿರಲಿಲ್ಲ. ಈತನ್ಮಧ್ಯೆ ಅ.8ರಂದು…

Read More

ಉಳ್ಳಾಲ: ಮಾನವ ಅಸ್ಥಿಪಂಜರ ಪತ್ತೆ- ಆತ್ಮಹತ್ಯೆ ಶಂಕೆ

ಮಂಗಳೂರು : ಮರದ ರೆಂಬೆಗೆ ಹಗ್ಗದಿಂದ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಮಾನವನ ತಲೆ ಬುರುಡೆ, ಅಸ್ಥಿಪಂಜರ ಮತ್ತು ಇತರೆ ಅವಶೇಷಗಳು ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ದೇವಿಪುರದ ಅಕ್ಷಯ ಫಾರ್ಮ್ ನೊಳಗಡೆ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ಅಕ್ಷಯ ಫಾರ್ಮ್ ಒಳಗಡೆಯ ಮರದ ಕೆಳಗಡೆ ಮಾನವನ ಅಸ್ಥಿ ತಲೆಬುರುಡೆ ಮತ್ತು ಅವಶೇಷಗಳು ಪತ್ತೆಯಾಗಿವೆ. ಫಾರ್ಮ್ ನೊಳಗಡೆ ತೋಟದ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರಿಗೆ ಇಂದು ಬೆಳಗ್ಗೆ ಅಸ್ಥಿಗಳು ಕಾಣಸಿಕ್ಕಿವೆ. ಸ್ಥಳದಲ್ಲಿ ಹಸಿರು ಬರ್ಮುಡ ಚಡ್ಡಿ, ಹಸಿರು ಟೀ…

Read More

ಪುತ್ತೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅಪೂರ್ವ ಕೆ. ಭಟ್ ಚಿಕಿತ್ಸೆ ಫಲಕಾರಿಯಾಗದೆ ಸಾವು 

ಪುತ್ತೂರು: ಕೆಲ ತಿಂಗಳ ಹಿಂದೆ ಪುತ್ತೂರು ತಾಲೂಕಿನ ಮುರ ಎಂಬಲ್ಲಿನ ತಿರುವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕೆದಿಲ‌ ನಿವಾಸಿ ಅಪೂರ್ವ ಕೆ. ಭಟ್ (32) ಚಿಕಿತ್ಸೆ ಫಲಿಸದೆ ಮಂಗಳವಾರ ರಾತ್ರಿ ನಿಧನರಾದರು. ಮೇ 27ರಂದು ಪುತ್ತೂರಿನ ಹೊರವಲಯದ ಮುರ ಜಂಕ್ಷನ್ ಬಳಿ ಈ ದುರ್ಘಟನೆ ನಡೆದಿತ್ತು. ಮಾಣಿ-ಮೈಸೂರು ಹೆದ್ದಾರಿಯಲ್ಲಿ ಪುತ್ತೂರು ಪೇಟೆಯಿಂದ ತಮ್ಮ ತಂದೆ ಈಶ್ವ‌ರ್ ಭಟ್ ಅವರ ಜತೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ, ಪಡ್ನರಿಗೆ ತಿರುಗುವ ಒಳರಸ್ತೆಯಲ್ಲಿ…

Read More

ಮಂಗಳೂರು: ಲಕ್ಷಾಂತರ ರೂ. ಮೌಲ್ಯದ ಇ-ಸಿಗರೇಟ್, ವಿದೇಶಿ ಸಿಗರೇಟ್ ವಶ: ಮೂವರ ಬಂಧನ

ಮಂಗಳೂರು: ನಗರದ ಲಾಲ್‌ಬಾಗ್‌ನಲ್ಲಿರುವ ವಾಣಿಜ್ಯ ಸಂಕೀರ್ಣವೊಂದರ ಅಂಗಡಿಯಲ್ಲಿ ಅಕ್ರಮವಾಗಿ ಇ-ಸಿಗರೇಟ್ ಹಾಗೂ ಪರವಾನಗಿ ರಹಿತ ವಿದೇಶಿ ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ನಗರ ಪೊಲೀಸರು ಭೇದಿಸಿದ್ದಾರೆ. ಸುಮಾರು ರೂ. 9,72,745/- ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡು, ಅಂಗಡಿಯ ಮಾಲಕ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸಂತೋಷ್ (32), ವಾಸ: ಗಣೇಶ್ ಕೋಡಿ ಹೌಸ್, ಬಂಟ್ವಾಳ ತಾಲೂಕು, ಇಬ್ರಾಹಿಂ ಇರ್ಷಾದ್ (33), ವಾಸ: ಜಾಮೀಯಾ ಮಸೀದಿ ಬಳಿ, ಕುದ್ರೋಳಿ, ಮಂಗಳೂರು ಮತ್ರು ಶಿವು ದೇಶಕೋಡಿ (ಶಾಪ್‌ನ ಮಾಲಕ)…

Read More

ಮಂಗಳೂರು: ಅಖಿಲ ಭಾರತ ಹೇರ್ & ಬ್ಯೂಟಿ ಅಸೋಸಿಯೇಷನ್, ಇದರ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಸಾಮಾನ್ಯ ಸಭೆ

ಮಂಗಳೂರು: ಅಖಿಲ ಭಾರತ ಹೇರ್ & ಬ್ಯೂಟಿ ಅಸೋಸಿಯೇಷನ್, ಇದರ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮವನ್ನು  ಮಂಗಳೂರಿನ ಲಯನ್ಸ್ ಅಶೋಕ್ ಭವನ ಕದ್ರಿ ಯಲ್ಲಿ ನಡೆಸಿದರು. ಅಧ್ಯಕ್ಷರಾದ ಲತಾ ಹರೀಶ್ ಇವರು ಬಂದಿರುವಂತಹ ಎಲ್ಲಾ ಅತಿಥಿಗಳನ್ನು ಹಾಗೂ ಸದಸ್ಯರನ್ನು ಸ್ವಾಗತಿಸಿದರು. ಮುಖ್ಯ ಅತಿಥಿ . ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಇದರ ಫೌಂಡರ್ ಟ್ರಸ್ಟಿ ಲಯನ್ ಅನಿಲ್ ದಾಸ್  ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.. ಬಳಿಕ ಸಂಸ್ಥೆಯ ಬಗ್ಗೆ ಸಂಘಟನಾ ವಿಚಾರಗಳ ಬಗ್ಗೆ ಮತ್ತು ನೂತನ…

Read More

ಜಾತಿಗಣತಿ ಸಮೀಕ್ಷೆ: ಅಕ್ಟೋಬರ್ 18ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ

ಬೆಂಗಳೂರು: ಜಾತಿಗಣತಿ ಸಮೀಕ್ಷೆ ಹಿನ್ನೆಲೆಯಲ್ಲಿ ದಸರಾ ರಜೆಯನ್ನು ಅ.18ರ ವರೆಗೆ ವಿಸ್ತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ದಿನಾಂಕ ವಿಸ್ತರಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಸಲಾಯಿತು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಿತು. ಸಮೀಕ್ಷೆ ಹಿನ್ನೆಲೆ ರಾಜ್ಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರಜೆ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ದಸರಾ ರಜೆಯಲ್ಲಿರುವ ಮಕ್ಕಳಿಗೆ ಹೆಚ್ಚುವರಿಯಾಗಿ ಇನ್ನೂ 10 ದಿನ ರಜೆ ಸಿಗಲಿದೆ. ಈ ಅವಧಿಯಲ್ಲಿ ಜಾತಿಗಣತಿ ಸರ್ವೇ…

Read More