IPL 2024 ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಐಪಿಎಲ್‌ಗೆ ಲಖನೌ ವಿದಾಯ; 5 ಬಾರಿಯ ಚಾಂಪಿಯನ್‌ಗೆ ಕೊನೆ ಸ್ಥಾನ
ಮೊದಲು ಬ್ಯಾಟ್ ಮಾಡಿದ ಲಖನೌ 6 ವಿಕೆಟ್‌ಗೆ 214 ರನ್ ಕಲೆಹಾಕಿತು. ನಿಕೋಲಸ್ ಪೂರನ್ 29 ಎಸೆತಗಳಲ್ಲಿ 75 ರನ್ ಚಚ್ಚಿದರೆ, ಕೆ.ಎಲ್.ರಾಹುಲ್ 55 ರನ್ ಸಿಡಿಸಿದರು. ಚಾವ್ಲಾ 3 ವಿಕೆಟ್ ಕಬಳಿಸಿದರು. ಮುಂಬೈ: 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್‌ಗಳಿಂದ ಗೆಲ್ಲುವುದರೊಂದಿಗೆ 17ನೇ ಆವೃತ್ತಿ ಐಪಿಎಲ್‌ಗೆ ಲಖನೌ ಸೂಪರ್ ಜೈಂಟ್ಸ್ ವಿದಾಯ ಹೇಳಿದೆ. ಈ ಗೆಲುವಿನೊಂದಿಗೆ ಲಖನೌ 14 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಿಯಾದರೆ, ಮುಂಬೈ 10ನೇ ಸೋಲಿನೊಂದಿಗೆ…

