ತುಳುನಾಡಿನಲ್ಲಿ ಮತ್ತೊಮ್ಮೆ ಕಾರಣಿಕ ಮೆರೆದ ಕಲ್ಲುರ್ಟಿ..!
ತುಳುನಾಡಿನಲ್ಲಿ ಅದೆಷ್ಟೋ ಸಾವಿರ ವರ್ಷಗಳಿಂದ ದೈವಾರಾಧನೆ ಎನ್ನುವುದು ಅವೈದಿಕ ಮೂಲದ ಪದ್ಧತಿಯ ಆಧಾರದ ಮೇಲೆ ನಡೆದುಕೊಂಡು ಬರುತ್ತಿದ್ದೆ. ಕಾಲ ಕ್ರಮೇಣ ಮೂಲ ಪದ್ಧತಿಗಳು ಮರೆಯಾಗುತ ಬರುತ್ತಿದ್ದೆ. ಕೊಂಬು ತೆಂಬರೆ ತಾಸೆ ಡೋಲು ನುಡಿಸುವಲ್ಲಿ ಚೆಂಡೆ ಶಬ್ದ ಕಿವಿಗೆ ಕೇಳುತ್ತಿದೆ! ಕೋಳಿ ಬಲಿ ನೀಡುವ ಜಾಗಕ್ಕೆ ಕುಂಬಳಕಾಯಿ ಕುಯ್ಯುತಿದ್ದಾರೆ , ಧೂಪದ ಜಾಗಕ್ಕೆ ಆರತಿ ಬಟ್ಟಲು ಬಂದಿದೆ , ಅವಲಕ್ಕಿ ಪನಿಯಾರ ಬಡಿಸುವಲ್ಲಿ ಪಂಚ ಕಜ್ಜಾಯ ಸಿಗುತ್ತಿದೆ , ಸಂಧಿ ಪಾರ್ಧನ ಕೇಳುವಲ್ಲಿ ಮಂತ್ರ ಶ್ಲೋಕಗಳ ಉಚ್ಛಾರಣೆ ನಡೆಯುತ್ತಿದೆ!…

