ಮಕ್ಕಳನ್ನು ಮಾರುವುದು, ಕೊಳ್ಳುವುದು ಅಪರಾಧ, 5 ವರ್ಷ ಜೈಲು ಫಿಕ್ಸ್
ಬೆಂಗಳೂರು: ಮಕ್ಕಳ ರಕ್ಷಣಾ ನಿರ್ದೇಶನಾಲಯದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಕೂಡ ನವೆಂಬರ್-2025ರ ಮಾಹೆಯನ್ನು ಅಂತರಾಷ್ಟ್ರೀಯ ದತ್ತು ಮಾಸಾಚರಣೆಯಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಪೋಷಕತ್ವ ಯೋಜನೆ, ಕಾನೂನು ಬದ್ಧ ದತ್ತು ಹಾಗೂ ಕಾನೂನು ಬಾಹಿರ ದತ್ತು ಪ್ರಕ್ರಿಯೆ ಅಪರಾಧ , ಮಕ್ಕಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, “ಮಕ್ಕಳನ್ನು ಮಾರುವವರಿಗೂ ಹಾಗೂ ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ-2015 ಸೆಕ್ಷನ್ 80 ಮತ್ತು 81ರ ಅನ್ವಯ 5 ವರ್ಷಗಳವರೆಗೂ ಸೆರೆಮನೆ ವಾಸದೊಂದಿಗೆ ರೂ.1.00 ಲಕ್ಷಗಳವರೆಗೆ ದಂಡ ವಿಧಿಸಲಾಗುವುದು. ಈ…

