ಹಲಸಿನ ಹಣ್ಣು ತಿಂದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು..!
ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಅಧಿಕ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಮೇ-ಜೂನ್ ತಿಂಗಳು ಬಂತೆಂದರೆ ಹಳ್ಳಿ ಇರಲಿ ನಗರ ಮಾರುಕಟ್ಟೆ ಇರಲಿ ಇರಲಿ ಹಲಸುಗಳ ಘಮ ಗಮ್ಮೆಂದು ಬರುತ್ತಿರುತ್ತದೆ. ಆ ಹಳದಿ ತೊಳೆ ನೋಡುವಾಗ ಅದನ್ನು ಬಾಯಲ್ಲಿ ಜಗಿದು ತಿನ್ನುವ ಆಸೆ ಬಂದೇ ಬರುವುದು. ಇನ್ನು ಹಳ್ಳಿಗಳಲ್ಲಿ ಹಲಸಿನ ಹಣ್ಣಿನ ಮರ ಅಧಿಕ ಇರುವುದರಿಂದ ಸೀಸನ್ ಬಂತೆಂದರೆ ಇದರಿಂದ ಹಲಸಿನ ಹಿಟ್ಟು, ದೋಸೆ, ಇಡ್ಲಿ ಅಂತ ತರಾವರಿ ತಿಂಡಿಗಳನ್ನು ಮಾಡಿ ಸವಿಯುತ್ತಾರೆ….

