Rishab Shetty: ಶೃಂಗೇರಿ ಶಾರದಾ ಮಠದಲ್ಲಿ ರಿಷಬ್ ಶೆಟ್ಟಿ ಕುಟುಂಬ, ಮಗಳ ಅಕ್ಷರಾಭ್ಯಾಸದ ಸಂಭ್ರಮ!
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಮಠಕ್ಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಕುಟಂಬ ಭೇಟಿ ನೀಡಿದೆ. ಕಾಂತಾರ ಹೀರೋ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ. ಕುಟುಂಬ ಸಮೇತ ಶೃಂಗೇರಿ ಶಾರದಾಂಬೆ ದರ್ಶನ ಪಡೆದು ರಿಷಬ್ ಶೆಟ್ಟಿ ಅವರು ದೇವಿ ಆಶೀರ್ವಾದ ಪಡೆದಿದ್ದಾರೆ. ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ನಮ್ಮ ಪುಟ್ಟ ರಾಧ್ಯಾಳ ಅಕ್ಷರ ಅಭ್ಯಾಸದ ಕ್ಷಣ ಎಂದು ನಟ ರಿಷಬ್ ಶೆಟ್ಟಿ ಟ್ವಿಟ್ಟರ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಪುಟ್ಟ ಹೆಜ್ಜೆಗಳಿಂದ ಪುಟ್ಟ ಪದಗಳವರೆಗೆ, ಶ್ರೀ ಶಾರದಾಂಬೆಯ ಕೃಪೆಯಿಂದ…

