Headlines

ಶುಂಠಿ ಸಿಪ್ಪೆಯನ್ನು ಎಸೆಯಬೇಡಿ ಈ ಕೆಲಸಕ್ಕೆ ಬಳಕೆಯಾಗುತ್ತೆ..!

ಶುಂಠಿ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಎಸೆಯುತ್ತೇವೆ. ಆದರೆ ಅದರಲ್ಲೂ ಕೂಡ ಔಷಧೀಯ ಅಂಶಗಳು ಅಡಗಿವೆ. ಹಾಗಾಗಿ ಶುಂಠಿ ಸಿಪ್ಪೆಯನ್ನು ಎಸೆಯುವ ಬದಲು ಈ ಸಮಸ್ಯೆಗಳ ನಿವಾರಣೆಗೆ ಬಳಸಿಕೊಳ್ಳಿ. *ಇದನ್ನು ಕೆಮ್ಮು ನಿವಾರಣೆಗೆ ಬಳಸಬಹುದು. ಶುಂಠಿ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಅದನ್ನು ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ. *ಇದರಲ್ಲಿ ರಂಜಕ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅದನ್ನು ಎಸೆಯುವ ಬದಲು ಗಿಡಗಳಿಗೆ ಗೊಬ್ಬರವಾಗಿ ಬಳಸಿ. ಇದರಿಂದ ಚೆನ್ನಾಗಿ ಹೂ ಬಿಡುತ್ತದೆ….

Read More

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನು ಬಂಧಿಸದಂತೆ ಹೈಕೋರ್ಟ್ ಆದೇಶ

ಬೆಂಗಳೂರು : ಪೋಕ್ಸೋ ಪ್ರಕರಣದಲ್ಲಿ ಬಿ.ಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್ ನೀಡಿದ್ದು, ಬಂಧಿಸದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ ಹೈಕೋರ್ಟ್ ಬಿಎಸ್ವೈ ಅವರನ್ನು ಬಂಧಿಸದಂತೆ ಸಿಐಡಿಗೆ ಹೈಕೋರ್ಟ್ ಸೂಚನೆ ನೀಡಿದೆ.ಅಂತೆಯೇ ಜೂ.17 ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ…

Read More

ಡಾ.ರೊನಾಲ್ಡ್ ಕೊಲಾಸೊ, ಡಾ.ತುಂಬೆ ಮೊಯ್ದಿನ್, ಪ್ರಕಾಶ್ ಶೆಟ್ಟಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

ಮಂಗಳೂರು: ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಡಾ.ರೊನಾಲ್ಡ್ ಕೊಲಾಸೊ, ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಯ್ದಿನ್ ಹಾಗೂ ಎಂ.ಆರ್.ಜಿ. ಗ್ರೂಪ್ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿಯವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಈ ಬಾರಿಯ ಗೌರವ ಡಾಕ್ಟರೇಟ್​ ಘೋಷಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವವು ಜೂ.15ರಂದು ಮಧ್ಯಾಹ್ನ 12.15 ಕ್ಕೆ ವಿವಿ ಆವರಣದಲ್ಲಿ ನಡೆಯಲಿದ್ದು ಈ ವೇಳೆ ಈ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುವುದು ಎಂದು ವಿವಿಯ ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.ಮಂಗಳೂರಿನ ವಿವಿ ಕಾಲೇಜಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ…

Read More

ಆಧಾರ್‌-ರೇಷನ್‌ ಕಾರ್ಡ್‌ ಜೋಡಣೆ ಗಡುವು ವಿಸ್ತರಣೆ..!

ಆಧಾರ್‌ ಕಾರ್ಡ್‌-ರೇಷನ್‌ ಕಾರ್ಡ್‌ ಲಿಂಕ್‌ ಮಾಡಲು ಇದ್ದ ಜೂ.30ರ ಗಡುವನ್ನು ಮತ್ತೆ ಕೇಂದ್ರ ಸರ್ಕಾರ 3 ತಿಂಗಳ ಕಾಲ ವಿಸ್ತರಣೆ ಮಾಡಿದೆ. ಹೀಗಾಗಿ, ಲಿಂಕ್‌ಗೆ ಸೆಪ್ಟೆಂಬರ್‌ 30ರ ಹೊಸ ಗಡುವು ನೀಡಲಾಗಿದೆ ಎಂದು ಆಹಾರ ಇಲಾಖೆ ಹೇಳಿದೆ. ಕೊನೇ ದಿನಾಂಕಕ್ಕೂ ಮುನ್ನ ಅಗತ್ಯ ದಾಖಲೆಗಳೊಂದಿಗೆ ಆಧಾರ್‌ಗೆ ರೇಷನ್‌ ಕಾರ್ಡ್‌ ಲಿಂಕ್‌ ಮಾಡಿಸಿಕೊಳ್ಳುವಂತೆ ಸೂಚಿಸಿದೆ.

Read More

ಮಂಗಳೂರು: ಮರವೂರು ಹಳೆ ಸೇತುವೆ ಮೇಲೆ ವಾಹನ ಸಂಚಾರ ನಿಷೇಧ – ಜಿಲ್ಲಾಧಿಕಾರಿ ಆದೇಶ

ಮಂಗಳೂರು: ಮರವೂರು ಹಳೆ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ 67 ರಸ್ತೆಯು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಇಲ್ಲಿಗೆ ಸಂಪರ್ಕಿಸುವ ರಸ್ತೆಯಲ್ಲಿ ಹಲವಾರು ಘನವಾಹನಗಳು ಲಘುವಾಹನಗಳು ಹಳೇ ಸೇತುವೆ ಮೂಲಕ ಚಲಿಸುತ್ತಿರುವುದರಿಂದ ಸದ್ರಿ ಸೇತುವೆಯ ಎರಡನೇ ಪಿಯರ್ ನ ತಳಪಾಯವನ್ನು ಭದ್ರಪಡಿಸಿ ಸಂಪೂರ್ಣ ಸೇತುವೆ ದುರಸ್ತಿ ಪಡಿಸುವವರೆಗೆ ಮರವೂರು ಹಳೆಸೇತುವೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ ಹಳೆ ಸೇತುವೆಯಲ್ಲಿ ಸಂಚರಿಸುವ ವಾಹನಗಳು ಹೊಸ ಸೇತುವೆಯಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ…

Read More

ಬಿಜೆಪಿ ಯುವ ಮೋರ್ಚಾ ನಾಯಕರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು “ಸತ್ಯ ಧರ್ಮಕ್ಕೆ ಸಂದ ಜಯ” – ಹರೀಶ್ ಪೂಂಜ

ಬೆಳ್ತಂಗಡಿ: ರಾಜಕೀಯ ಪ್ರೇರಿತವಾಗಿ ಬಿಜೆಪಿ ಯುವ ಮೋರ್ಚಾ ನಾಯಕರಾದ ಶಶಿರಾಜ್ ಶೆಟ್ಟಿಮತ್ತು ಪ್ರಮೋದ್ ಮೇಲೆ ತಾಲೂಕು ಆಡಳಿತ ವ್ಯವಸ್ಥೆ ದಾಖಲಿಸಿದ್ದ ಸುಳ್ಳು ಪ್ರಕರಣಕ್ಕೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿರುವುದು ಸತ್ಯ ಧರ್ಮಕ್ಕೆ ಸಂದ ಜಯವೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿದ್ದಾರೆ. ರಾಜಕೀಯವಾಗಿ ಮುಂಚೂಣಿಗೆ ಬರುತ್ತಿರುವ ಉದಯೋನ್ಮಖ ನಾಯಕರ ಮನೋಸ್ಥೈರ್ಯವನ್ನು ಕುಗ್ಗಿಸುವ ದುರುದ್ದೇಶದಿಂದ ಕಾಂಗ್ರೆಸ್ ದ್ವೇಷ ರಾಜಕೀಯ ಪ್ರೇರಿತ ಬಂಧನದಿಂದ ಯಾರೂ ವಿಚಲಿತರಾಗುವ ಅಗತ್ಯವಿಲ್ಲ. ರಾತ್ರಿ ಕಳೆದ ಮೇಲೆ ಬೆಳಕು ಹರಿಯುವಂತೆ ಒಂದಲ್ಲ ಒಂದು ದಿನ…

Read More

ನಟ ದರ್ಶನ್​​ ನ ಕರಾಳ ಮುಖ ಬಿಚ್ಚಿಟ್ಟ ಕೂಲಿ ಕಾರ್ಮಿಕ

ಬೆಂಗಳೂರು: ನಟ ದರ್ಶನ್​​ ಕರಾಳ ಮುಖವನ್ನು ಅಲ್ಲೇ ಕೂಲಿ ಮಾಡಿದ್ದ, ಸದ್ಯ ಹಾಸಿಗೆ ಹಿಡಿದ ವ್ಯಕ್ತಿಯೊಬ್ಬರು ಬಿಚ್ಚಿಟ್ಟಿದ್ದಾರೆ. 8 ವರ್ಷದಿಂದ ಕೂಲಿ ಮಾಡಿ ಕೊನೆಗೆ ತೊಂದರೆ ಆದಾಗ ಸಹಾಯ ಮಾಡದೆ ನೋವು ಕೊಟ್ಟ ಕಾಟೇರನ ಇನ್ನೊಂದು ಮುಖವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಹೇಶ್​ ಎಂಬ ಕೂಲಿ ಕಾರ್ಮಿಕ ನಟ ದರ್ಶನ್​ ಬಗ್ಗೆ ಮಾತನಾಡಿದ್ದಾರೆ. “ಅಂದು ದರ್ಶನ್​ ಸಾಹೇಬ್ರು ಎತ್ತಿಗೆ ಲಾಲ ಕಟ್ಟಿಸಿಬಿಡಪ್ಪ ಎಂದು ಹೇಳಿ ಅವರ ಪಾಡಿಗೆ ಎಲ್ಲಿಗೆ ಹೋದ್ರು ಗೊತ್ತಿಲ್ಲ. ಬಳಿಕ ಎತ್ತು ಹಿಡಿಯಲು ಹೋದಾಗ ಅದರ…

Read More

ತಿರುಪತಿ ಕ್ಷೇತ್ರದಲ್ಲಿ ನಮೋ ವೆಂಕಟೇಶಾಯ ಮಾತ್ರ ಕೇಳಿಸ್ಬೇಕು; ಸಿಎಂ ನಾಯ್ಡು

ತಿರುಮಲವನ್ನು ಕೆಲವರು ಹಣ ಗಳಿಸಿರುವ ಕೇಂದ್ರವನ್ನಾಗಿ ಮಾಡಿದ್ದರು. ಭಕ್ತರಿಂದ ಸುಲಿಗೆ ಮಾಡ್ತಿದ್ದರು, ಕಾಳಸಂತೆಯಲ್ಲಿ ಟಿಕೆಟ್ ಮಾರಾಟಕ್ಕೆ ಅವಕಾಶ ನೀಡಿದ್ದರು. ನಮ್ಮ ಸರ್ಕಾರದಲ್ಲಿ ಇವುಗಳು ಇರೋದಿಲ್ಲ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಆಂಧ್ರ ಪ್ರದೇಶ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಅವರು ತಿರುಮಲ ತಿರುಪತಿ ಕ್ಷೇತ್ರಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದುಕೊಂಡರು. ಅಲ್ಲದೇ ಸಿಎಂ ಆದ ಬಳಿಕ ತಿರುಮಲದಲ್ಲೇ ಮೊದಲ ಸುದ್ದಿಗೋಷ್ಠಿಯನ್ನು ನಡೆಸಿದರು. ಶ್ರೀ ವೆಂಕಟೇಶ್ವರ ನಮ್ಮ ಕುಲದೈವ, ಅವರಿಂದಲೇ ಕಾರ್ಯಕ್ರಮ ಆರಂಭವಾಗುತ್ತದೆ. ತಿಮ್ಮಪ್ಪನ…

Read More

ಸುಳ್ಯ: ಮಹಿಳೆ ಕೊಲೆ ಆರೋಪಿಗೆ ನ್ಯಾಯಾಂಗ ಬಂಧನ

ಸುಳ್ಯ: ಬೆಳ್ಳಾರೆಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಪಾಟಾಜೆಯ ಸುಂದರ ಅವರ ಪತ್ನಿ ನಳಿನಿ ಅವರನ್ನು ಜೂ. 9ರ ರಾತ್ರಿ ಕುಡಿದ ಮತ್ತಿನಲ್ಲಿ ಕಲ್ಮಡ್ಕದ ಜಯಕುಮಾರ್ ಎಂಬಾತ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಬೆಳಗ್ಗೆ ಪರಾರಿಯಾಗಿದ್ದ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ಮಂಗಳವಾರ ಬಂಧಿಸಿದ್ದರು. ಬಳಿಕ ಪೊಲೀಸರು ಆರೋಪಿಯ ಸ್ಥಳ ಮಹಜರು ನಡೆಸಿದ್ದರು. ಬುಧವಾರ ಆರೋಪಿಯನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Read More

ಪುರುಷರೇ ಗಮನಿಸಿ. ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ಸೇವಿಸೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ !?

ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ ನೆನೆಸಿದ ಒಣದ್ರಾಕ್ಷಿಯಲ್ಲಿ ಸಾಕಷ್ಟು ಫೈಬರ್ ಇರುತ್ತದೆ. ಕಳಪೆ ಜೀವನಶೈಲಿಯಿಂದಾಗಿ, ಅನೇಕ ಪುರುಷರು ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ನೆನೆಸಿದ ಒಣದ್ರಾಕ್ಷಿಗಳನ್ನು ಸೇವಿಸಬೇಕು. ಇದು ಕರುಳಿನ ಚಲನೆಯ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ ಒಣದ್ರಾಕ್ಷಿಯನ್ನು ಲೈಂಗಿಕ ಆರೋಗ್ಯ ವರ್ಧಕ ಎಂದು ಕರೆಯಲಾಗುತ್ತದೆ. ಇದು ಅರ್ಜಿನೈನ್ ಎಂಬ ಪ್ರೋಟೀನ್ ಅನ್ನು ಹೊಂದಿರುತ್ತದೆ. ಈ ಅಂಶವು ಪುರುಷರಲ್ಲಿ ಶಕ್ತಿ ಮತ್ತು ವೀರ್ಯ ಚಲನಶೀಲತೆಯನ್ನು…

Read More