ಯೋಗ ದಿನಕ್ಕಾಗಿ ಶ್ರೀನಗರಕ್ಕೆ ಹೊರಟ ಪ್ರಧಾನಿ ಮೋದಿ; ಈ ಬಾರಿ ಜಮ್ಮು-ಕಾಶ್ಮೀರದಲ್ಲಿ ಆಚರಣೆ ಏಕೆ?
ನವದೆಹಲಿ: ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಆದ ಬಳಿಕ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ನಾಳಿನ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಮೋದಿ ಅವರು ಶ್ರೀನಗರಕ್ಕೆ ತೆರಳಿದಿದ್ದಾರೆ. ಈ ಬಗ್ಗೆ ಖುದ್ದು ಮೋದಿ ಅವರೇ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಶ್ರೀನಗರಕ್ಕೆ ಹೊರಟೆ, ಅಲ್ಲಿ ನಾನು ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ ಎಂದು ತಿಳಿಸಿದ್ದಾರೆ. ತಮ್ಮ ಭೇಟಿ ವೇಳೆ ಮೋದಿ ಅವರು, 1500 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಪ್ರಮುಖ ಯೋಜನೆಗಳು ಉದ್ಘಾಟನೆ…

