ಮಂಗಳೂರು : PWD ಗುತ್ತಿಗೆದಾರ ಸೇರಿ ಮನೆಯ ಸದಸ್ಯರನ್ನು ಕಟ್ಟಿ ಹಾಕಿ, ನಗ ನಗದು ದರೋಡೆ

ಮಂಗಳೂರು: ನಗರದ ಹೊರವಲಯದಲ್ಲಿರುವ ಉಳಾಯಿಬೆಟ್ಟು ಎಂಬಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರ ಮನೆಗೆ ನುಗ್ಗಿದ ದರೋಡೆಕೋರರ ತಂಡವೊಂದು ಮನೆಗೆ ನುಗ್ಗಿ ಚಾಕು ತೋರಿಸಿ ಮನೆಮಂದಿಯನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ನಗ ನಗದನ್ನು ದೋಚಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಉಳಾಯಿಬೆಟ್ಟಿ ನಲ್ಲಿರುವ ಪಿಡಬ್ಲ್ಯುಡಿ ಕಂಟ್ರಾಕ್ಟರ್ ಪದ್ಮನಾಭ ಕೋಟ್ಯಾನ್ ಎಂಬವರ ಫಾರ್ಮ್ ಹೌಸ್ ಮನೆಗೆ ಸುಮಾರು ಏಳು ಎಂಟು ಮಂದಿ ದರೋಡೆಕೋರರ ತಂಡ ಶುಕ್ರವಾರ ರಾತ್ರಿ ಸುಮಾರು ಎಂಟು ಗಂಟೆಯ ಸುಮಾರಿಗೆ ಮನೆಯೊಳಗೆ ಪ್ರವೇಶಿಸಿ ಮನೆ ಮಂದಿಗೆ ಚಾಕು ತೋರಿಸಿ ಬೆದರಿಸಿ ಬಳಿಕ…

Read More

ರಾಜ್ಯ ಸರ್ಕಾರದಿಂದ ಟ್ರಕ್ಕಿಂಗ್‌ ಪ್ರಿಯರಿಗೆ ಶಾಕ್‌ : ಪ್ರಸಿದ್ಧ ಮುಳ್ಳಯ್ಯನಗಿರಿ, ಎತ್ತಿನಭುಜದಲ್ಲಿ ʻಟ್ರಿಕ್ಕಿಂಗ್‌ʼ ನಿಷೇಧ

ಚಿಕ್ಕಮಗಳೂರು : ಟ್ರಕ್ಕಿಂಗ್‌ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್‌ ನೀಡಿದ್ದು, ಪ್ರಸಿದ್ಧ ಪ್ರವಾಸಿತಾಣಗಳಾದ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಎತ್ತಿನಭುಜ ಪ್ರದೇಶಗಳಲ್ಲಿ ಟ್ರಕ್ಕಿಂಗ್‌ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಮುಳ್ಳಯ್ಯನಗಿರಿ ಹಾಗೂ ಎತ್ತಿನಭುಜ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತವಾಗಿ ಟ್ರೆಕ್ಕಿಂಗ್‌ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುನ್ನೆಚ್ಚರಿಕೆಯಿಂದ ಟ್ರಕ್ಕಿಂಗ್ ಹೋಗುವ ಮರ್ಗದಲ್ಲಿ ಪ್ರವಾಸಿಗರ ಸುರಕ್ಷತಾ ಕಾಮಗಾರಿಗೆ ಇಲಾಖೆ ಮುಂದಾಗಿದೆ. ಕಾಮಗಾರಿ ಅನುಷ್ಠಾನಗೊಳ್ಳಲಿರುವ ಕಾರಣ ಎತ್ತಿನ ಭುಜಕ್ಕೆ ಮುಂದಿನ ಆದೇಶದವರೆಗೂ ಅರಣ್ಯ ಇಲಾಖೆ ಪ್ರವಾಸಿಗರಿಗೆ…

Read More

ಉದ್ಯೋಗಾಕಾಂಕ್ಷಿಗಳಿಗೆ ʻKSRTCʼ ಗುಡ್‌ ನ್ಯೂಸ್‌ : 1,260 ಚಾಲಕರ ನೇಮಕಾತಿ

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆಎಸ್‌ ಆರ್‌ ಟಿಸಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಹೊರಗುತ್ತಿಗೆ ಆಧಾರದಲ್ಲಿ 1,260 ಚಾಲಕರ ನೇಮಕಕ್ಕೆ ಮುಂದಾಗಿದೆ. ಚಾಲಕರ ಕೊರತೆ ಹಿನ್ನಲೆಯಲ್ಲಿ 2 ಸಾವಿರಕ್ಕೂ ಹೆಚ್ಚಿನ ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲು ಕೆಎಸ್‌ ಆರ್‌ ಟಿಸಿ ಪ್ರಕ್ರಿಯೆ ಆರಂಭಿಸಿದ್ದು, ಈ ನಡುವೆ ಹೊರಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಾತಿಗೂ ಮುಂದಾಗಿದೆ. ಕಳೆದ ವರ್ಷ ಕೆಎಸ್‌ ಆರ್‌ ಟಿಸಿ 1,700 ಚಾಲಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಇದೀಗ 2,200 ಚಾಲಕ ಕಂ ನಿರ್ವಾಹಕರ ನೇಮಕಕ್ಕೆ…

Read More

ಮಥುರಾ ದೇವಸ್ಥಾನದ ಮೆಟ್ಟಿಲು ಬಳಿ ಮಾಂಸ ಬೇಯಿಸುತ್ತಿದ್ದವನ ಬಂಧನ..!

ಮಥುರಾ: ಇಲ್ಲಿನ ಬರ್ಸಾನಾ ಪ್ರದೇಶದ ರಾಧಾ ರಾಣಿ ದೇವಾಲಯದ ಮೆಟ್ಟಿಲು ಬಳಿ ಮಾಂಸ ಬೇಯಿಸುತ್ತಿದ್ದ ವ್ಯಕ್ತಿಯನ್ನು ಹಿಡಿದ ಸ್ಥಳೀಯರು ಆತನನ್ನು ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದೇವಾಲಯದ ಆವರಣದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ. ಪೂಜಾಸ್ಥಳ ಅಪವಿತ್ರಗೊಳಿಸಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಸಂಜೆ ದೇಗುಲದ ಮೆಟ್ಟಿಲುಗಳ ಬಳಿ ಮಾಂಸಾಹಾರ ಬೇಯಿಸುತ್ತಿದ್ದ ಎಂದು ಸಂಜಯ್‌ಗೆ ಸ್ಥಳದಲ್ಲಿದ್ದ ಕೆಲವು ಭಕ್ತರು ಥಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು,…

Read More

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ : ಮಾರ್ಗಸೂಚಿ ರಿಲೀಸ್, ಇನ್ಮುಂದೆ ‘ನಕಲಿ ಕರೆ, ಸಂದೇಶ’ಗಳಿಂದ ಮುಕ್ತಿ

ನವದೆಹಲಿ : ನಕಲಿ ಕರೆಗಳು ಮತ್ತು ಸಂದೇಶಗಳನ್ನ ನಿಗ್ರಹಿಸಲು ಮೋದಿ ಸರ್ಕಾರ ಸಂಪೂರ್ಣ ಸಿದ್ಧತೆಗಳನ್ನ ಮಾಡಿದೆ. ಇದಕ್ಕಾಗಿ ಸರ್ಕಾರ ಮಾರ್ಗಸೂಚಿಗಳನ್ನ ರೂಪಿಸಿದ್ದು, ಜುಲೈ 21ರೊಳಗೆ ಸಾರ್ವಜನಿಕ ಅಭಿಪ್ರಾಯಗಳನ್ನ ಕೋರಿದೆ. ಸಾರ್ವಜನಿಕ ಅಭಿಪ್ರಾಯಗಳು ಮತ್ತು ಪ್ರತಿಕ್ರಿಯೆಯ ನಂತರ, ಮಸೂದೆಯನ್ನ ಪರಿಚಯಿಸಲಾಗುವುದು ಮತ್ತು ಜಾರಿಗೆ ತರಲಾಗುವುದು. ಕಳೆದ ಕೆಲವು ವರ್ಷಗಳಲ್ಲಿ, ನಕಲಿ ಕರೆಗಳು ಮತ್ತು ಸಂದೇಶಗಳ ಮೂಲಕ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಸರ್ಕಾರದ ಈ ಕ್ರಮವು ಸಾಮಾನ್ಯ ಜನರಿಗೆ ಪರಿಹಾರವನ್ನು ನೀಡಲಿದೆ. ಜುಲೈ 21ರೊಳಗೆ ಸಾರ್ವಜನಿಕ ಅಭಿಪ್ರಾಯ.!ವರದಿಯ ಪ್ರಕಾರ,…

Read More

ಮುಸ್ಲಿಂ ರಾಷ್ಟ್ರವಾದ ತಜಿಕಿಸ್ತಾನದಲ್ಲಿ ಹಿಜಾಬ್ ಬ್ಯಾನ್​..!

ಭಾರತದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಬಗ್ಗೆ ಬಹಳ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ. ಕೆಲವು ರಾಜ್ಯಗಳು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಿದಾಗ, ವಿಷಯವು ನ್ಯಾಯಾಲಯದ ಮೆಟ್ಟಿಲೇರಿತು. ತಜಿಕಿಸ್ತಾನದಲ್ಲಿ ಹಿಜಾಬ್ ಧರಿಸುವುದು ಅಥವಾ ಗಡ್ಡವನ್ನು ಇಟ್ಟುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ತಜಿಕಿಸ್ತಾನ್ ಸಾಂವಿಧಾನಿಕವಾಗಿ ಜಾತ್ಯತೀತ ರಾಷ್ಟ್ರವಾಗಿದೆ, ಇದು ಮುಸ್ಲಿಂ ದೇಶವಾಗಿದ್ದು, ಇಲ್ಲಿನ ಸಂಸತ್ ಹಿಜಾಬ್ ಅನ್ನು ನಿಷೇಧಿಸುವ ಮಸೂದೆಯನ್ನು ಅನುಮೋದಿಸಿದೆ. ಶಾಲೆಗಳಲ್ಲಿ ಮಾತ್ರವಲ್ಲ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗುತ್ತಿದೆ. ಭಾರತದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಬಗ್ಗೆ ಬಹಳ ಹಿಂದಿನಿಂದಲೂ ಚರ್ಚೆ…

Read More

ಭ್ರೂಣ ಹತ್ಯೆ ಸುಳಿವು ಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನ!

ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಮುಂದಾಗಿರುವ ಆರೋಗ್ಯ ಇಲಾಖೆ ಭ್ರೂಣ ಹತ್ಯೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದೆ. ಯಾವುದೇ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ನಡೆಯುತ್ತಿರುವ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದವರಿಗೆ ಈ ಹಿಂದೆ 50 ಸಾವಿರ ರೂ. ಬಹುಮಾನ ನೀಡಲಾಗುತ್ತಿತ್ತು. ಈಗ ಈ ಮೊತ್ತವನ್ನು ಒಂದು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಗುಪ್ತ ಕಾರ್ಯಾಚರಣೆ ಬಗ್ಗೆ ನಿಖರ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 50 ಸಾವಿರ ರೂ….

Read More

ಪುತ್ತೂರಿನಲ್ಲಿ ತನಿಯ ಮೋಟಾರ್ಸ್ ನ ಪ್ಯೂರ್ ಇ ವಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಮಳಿಗೆ ಶುಭಾರಂಭ

ಪುತ್ತೂರಿನ ದಾರಂದಕುಕ್ಕುವಿನಲ್ಲಿರುವ ಡಿ.ಕೆ ಕಾಂಪ್ಲೆಕ್ಸ್ ನಲ್ಲಿ ತನಿಯ ಮೋಟಾರ್ಸ್ ನ ಪ್ಯೂರ್ ಇ ವಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಳಿಗೆ ಜೂ.20 ರಂದು ಶುಭಾರಂಭಗೊಂಡಿತು. ಪ್ಯೂರ್ ಇ ವಿ ಕಂಪನಿಯು ಸ್ವದೇಶಿ ಕಂಪನಿಯಾಗಿದ್ದು,ಇದರ ಉತ್ಪಾದನಾ ಘಟಕವು ಹೈದರಾಬಾದಿನಲ್ಲಿದೆ. ಈ ಶೋರೂಮ್ ನಲ್ಲಿ ಇ-ಟ್ರಾನ್ಸ್, ಈ-ಪ್ಲುಟೊ ಎಂಬ ಎರಡು ಶ್ರೇಣಿಯ ಸ್ಕೂಟರ್ ಗಳಿದ್ದು, ವಿಶೇಷವಾಗಿ 200 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯವನ್ನು ಹೊಂದಿಕೊಂಡು ಗ್ರಾಹಕರಿಗೆ ಕೈಗೆಟುಕುವ ಅತ್ಯಾಕರ್ಷಕ ಬೆಲೆಯೊಂದಿಗೆ ಲಭ್ಯವಿದೆ. ಇಕೋ ಡ್ರಿಫ್ಟ್ ಮತ್ತು ಇ-ಟ್ರಿಸ್ಟ್ ಎಂಬ ಎರಡು…

Read More

ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ – ಶ್ರೀನಗರದಲ್ಲಿ 6 ಸಾವಿರ ಜನರೊಂದಿಗೆ ಪ್ರಧಾನಿ ಮೋದಿ ಯೋಗ

ಶ್ರೀನಗರ : ಮನಸ್ಸು ಮತ್ತು ದೇಹದ ನಡುವೆ ಏಕತೆಯನ್ನು ಸ್ಥಾಪಿಸುವ ಪ್ರಾಚೀನ ಭಾರತೀಯ ಶಿಸ್ತಾಗಿರುವ ಯೋಗವು ಅಧಿಕೃತವಾಗಿ ವಿಶ್ವ ರಂಗವನ್ನು ಪ್ರವೇಶಿಸಿ ಹತ್ತನೇ ವರ್ಷವಾಗಿದೆ. ಇಂದು ವಿಶ್ವದಾದ್ಯಂತ 10ನೇ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಇಂದು ವಿಶ್ವದಾದ್ಯಂತ 170 ಕ್ಕೂ ಹೆಚ್ಚು ದೇಶಗಳು ಮತ್ತು ದೊಡ್ಡ ಸಂಸ್ಥೆಗಳು ಮತ್ತು ಕಚೇರಿಗಳಲ್ಲಿ ಶತಕೋಟಿ ಜನರು ಯೋಗ ಮಾಡಲಿದ್ದಾರೆ. ಶ್ರೀನಗರದ ದಾಲ್ ಸರೋವರದ ದಡದಲ್ಲಿರುವ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ ನಲ್ಲಿ ಬೆಳಿಗ್ಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಯೋಗ…

Read More

ಮಂಗಳೂರು: ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ ಕರೆ..!

ಮಂಗಳೂರು: ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದೆ. ಜೂ.18ರಂದು ಮಧ್ಯಾಹ್ನ 12:43ಕ್ಕೆ ವಿಮಾನ ನಿಲ್ದಾಣದ ಇ- ಮೇಲ್‌ಗೆ ಬೆದರಿಕೆ ಸಂದೇಶ ರವಾನೆಯಾಗಿದೆ. ಕೆಲವೇ ಕ್ಷಣಗಳಲ್ಲಿ ಬಾಂಬ್ ಸ್ಪೋಟಗೊಳ್ಳಲಿದೆ ಎಂದು ಸಂದೇಶ ರವಾನೆಯಾಗಿತ್ತು. ಆದ್ದರಿಂದ ವಿಮಾನ ನಿಲ್ದಾಣದ ಮುಖ್ಯ ಭದ್ರತಾ ಅಧಿಕಾರಿ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ‌‌ ಭದ್ರತಾ ಅಧಿಕಾರಿಗಳು ವಿಮಾನ ನಿಲ್ದಾಣದ ಆವರಣದಲ್ಲಿ ತಪಾಸಣೆ ನಡೆಸಿ, ಯಾವುದೇ ಆತಂಕವಿಲ್ಲ ಎಂದು ದೃಢಪಡಿಸಿದ್ದಾರೆ. ದೇಶದ…

Read More