ಸಂಜೆ ವಾಕಿಂಗ್ ಮಾಡಿದ್ರೆ, ಅನೇಕ ಪ್ರಯೋಜನ.. ಆ ಸಮಸ್ಯೆ ನಿವಾರಣೆ!
ವಾಕಿಂಗ್ ಎಂದರೆ ಬೆಳಗಿನ ನಡಿಗೆ ಎಂದು ಎಲ್ಲರೂ ಭಾವಿಸುತ್ತಾರೆ. ಆದ್ರೆ, ವಾಕಿಂಗ್ ಯಾವಾಗ ಬೇಕಾದ್ರೂ ಮಾಡಬಹುದು. ಸಂಜೆ ವಾಕಿಂಗ್ ಕೂಡ ಮಾಡಬಹುದು. ಈವ್ನಿಂಗ್ ವಾಕಿಂಗ್ ಕೂಡ ಅನೇಕ ಪ್ರಯೋಜನಗಳನ್ನ ಹೊಂದಿದೆ. ಪ್ರತಿದಿನ ವಾಕಿಂಗ್ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದರಿಂದ ದೇಹ ಫಿಟ್ ಆಗುತ್ತದೆ. ಬೆಳಗಿನ ವಾಕಿಂಗ್ ಮಾಡಲು ಸಾಧ್ಯವಾಗದವರು ಸಂಜೆ ವಾಕಿಂಗ್ ಮಾಡಬಹುದು. ಸಂಜೆಯ ನಡಿಗೆ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಂಜೆಯ ವಾಕಿಂಗ್ ತುಂಬಾ ಒಳ್ಳೆಯದು. ಅದೇ ರಾತ್ರಿ ಊಟ ಮಾಡಿ…

