
ಬಿಜೆಪಿ ಮುಂದೆ ಆರ್‌ಎಸ್‌ಎಸ್ ಅನ್ನು ಸಹ ‘ನಕಲಿ’ ಎನ್ನಬಹುದು: ಮೋದಿ ಹೇಳಿಕೆಗೆ ಉದ್ಧವ್ ಠಾಕ್ರೆ ಖಡಕ್ ರಿಪ್ಲೈ
ಯಾವತ್ತು ಶಿವಸೇನೆಯು ಕಾಂಗ್ರೆಸ್ ಆಗುತ್ತದೋ ಅಂದು ಶಿವಸೇನೆಯನ್ನು ಕೊನೆಗೊಳಿಸುತ್ತೇನೆ ಎಂದು ಶಿವಸೇನೆ ಸ್ಥಾಪಕಾಧ್ಯಕ್ಷ ಬಾಳಾ ಠಾಕ್ರೆ ಅವರು ಹೇಳಿದ್ದರು. ಆದರೆ ಇಂದಿನ ಶಿವಸೇನೆಗೆ(ಉದ್ಧವ್ ಬಣ) ಯಾವುದೇ ಕುರುಹು ಇಲ್ಲದಾಗಿದ್ದು ಇದು ನಕಲಿ ಶಿವಸೇನೆ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಉದ್ಧವ್ ಠಾಕ್ರೆ, ನಾಳೆ ಮೋದಿ ಆರೆಸ್ಸೆಸ್ ಅನ್ನು ಸಹ ನಕಲಿ ಎಂದು ಕರೆದಲ್ಲಿ ಅಚ್ಚರಿ ಇಲ್ಲ. ಚುನಾವಣೆ ಬಳಿಕ ಯಾರು ಅಸಲಿ, ಯಾರು ನಕಲಿ ಎಂದು ತಿಳಿಯಲಿದೆ ಎಂದು ಸವಾಲು ಹಾಕಿದ್ದಾರೆ….