Headlines

ಧರ್ಮಸ್ಥಳ ಪ್ರಕರಣ : ‘SIT’ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್

 ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದಾರೆ ಎನ್ನಲಾದ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದ್ದ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. ಈ ಆದೇಶದಿಂದ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಮುಂದುವರೆಯಲಿದ್ದು, ಪಿತೂರಿ ನಡೆಸಿದ ಆರೋಪ ಎದುರಿಸುತ್ತಿದ್ದ ವಿಠಲಗೌಡ, ಗಿರೀಶ್ ಮಟ್ಟಣ್ಣವರ್, ಮಹೇಶ್ ತಿಮರೋಡಿ ಮತ್ತು ಟಿ. ಜಯಂತ್ ಅವರು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಿದೆ. ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು, ‘ಅರ್ಜಿದಾರರಿಗೆ ಈ ಹಿಂದೆ ಹಲವು ಬಾರಿ ನೋಟಿಸ್‌ ನೀಡಿರುವುದು 150 ತಾಸು…

Read More

ದೆಹಲಿ ಸ್ಫೋಟದ ಹಿಂದೆ ಡಾ. ಮುಝಮ್ಮಿಲ್ ಕೈವಾಡ? 15 ದಿನ ರಜೆ ಹಾಕಿ ಕಿರಿಯರನ್ನು ಬ್ರೈನ್ ವಾಶ್ ಮಾಡಿದ್ದ ವೈದ್ಯೆ!

ಕಳೆದ ಮೂರು ವರ್ಷಗಳಿಂದ ಫರಿದಾಬಾದ್ ನ ಧೌಜ್ ನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದ ಮುಜಮ್ಮಿಲ್ ಶಕೀಲ್ ನ್ನು 12 ದಿನಗಳ ಹಿಂದೆ ಬಂಧಿಸಲಾಗಿತ್ತು. ಇತ್ತೀಚೆಗಷ್ಟೇ 15 ದಿನಗಳ ರಜೆಯಲ್ಲಿ ಪುಲ್ವಾಮಾಕ್ಕೆ ಭೇಟಿ ನೀಡಿದ್ದ. ತನಿಖಾಧಿಕಾರಿಗಳ ಪ್ರಕಾರ, ಡಾ.ಮುಜಮ್ಮಿಲ್ ತಮ್ಮ ಪ್ರವಾಸದ ಸಮಯದಲ್ಲಿ ಹಲವಾರು ಪರಿಚಯಸ್ಥರನ್ನು ಭೇಟಿಯಾದ ಮತ್ತು ಸ್ಫೋಟಕಗಳನ್ನು ಸಂಗ್ರಹಿಸಿದ ಎಂದು ಆರೋಪಿಸಲಾಗಿದೆ. Jagran.com ವರದಿಯ ಪ್ರಕಾರ, ಡಾ.ಮುಜಮ್ಮಿಲ್ ಫತೇಪುರ ಟಗಾದಲ್ಲಿ ಮತ್ತೊಂದು ಮನೆಯನ್ನು ಬಾಡಿಗೆಗೆ ಪಡೆಯಲು ಯೋಜಿಸುತ್ತಿದ್ದ ಮತ್ತು ಪ್ರದೇಶದ ಇಮಾಮ್ ಸೇರಿದಂತೆ…

Read More

ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಂಟ್ವಾಳದ ಸಾನ್ವಿ.ಕೆ ಪ್ರಥಮ

ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 17ರ ವಯೋಮಿತಿಯ ಬಾಲಕಿಯರ ಕರಾಟೆ ಸ್ಪರ್ದೆಯಲ್ಲಿ ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿಧ್ಯಾರ್ಥಿನಿ ಸಾನ್ವಿ.ಕೆ. ಪ್ರಥಮ ಸ್ಥಾನದೊಂದಿಗೆ ಸ್ವರ್ಣಪದಕ ಮತ್ತು ಪ್ರಮಾಣ ಪತ್ರ ಪಡೆದಿರುತ್ತಾರೆ. ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ರ್ಟಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರು ರಾಜ್ಯಗುಪ್ತ ವಾರ್ತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಕೃಷ್ಣ ಕುಲಾಲ್ ಮತ್ತು ಅಶ್ವಿನಿ ದಂಪತಿ ಪುತ್ರಿ ಹಾಗೂ ಅಶೋಕ್…

Read More

ಬಂಟ್ವಾಳ ಕುಲಾಲ ಸುಧಾರಕ ಸಂಘ ಹೊಸಳ್ಳಿ ಇದರ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ರವರಿಗೆ ಸನ್ಮಾನ

ಬಂಟ್ವಾಳ ಕುಲಾಲ ಸುಧಾರಕ ಸಂಘ ಹೊಸಳ್ಳಿ ಇದರ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ರವರಿಗೆ ಸನ್ಮಾನಿಸಿದರು. ಬಂಟ್ವಾಳ ಕುಲಾಲ ಸುಧಾರಕ ಸಂಘ ಹೊಸಳ್ಳಿ ಇದರ ನಿಕಟ ಪೂರ್ವಾಧ್ಯಕ್ಷರಾದ ಮಚೇಂದ್ರನಾಥ ಸಾಲಿಯಾನ್ , ರಾಧಾಕೃಷ್ಣ ಬಂಟ್ವಾಳ ,ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲ್ ,ಪದಾಧಿಕಾರಿಗಳಾದ ಸತೀಶ್ ಸಂಪಾಜೆ , ಸೋಮನಾಥ ಸಾಲ್ಯಾನ್ , ಮಾಧವ ಬಿ ಸಿ ರೋಡ್ , ಜಯಂತ್ ಅಗ್ರಬೈಲ್ , ಪ್ರೇಮ ಜನಾರ್ಧನ , ಆಶಾ ಗಿರಿಧರ್ , ಮೀನಾಕ್ಷಿ…

Read More

ದೆಹಲಿ ಕಾರು ಸ್ಪೋಟ ಕೇಸ್: NIA ತನಿಖೆಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ

ನವದೆಹಲಿ: ದೆಹಲಿ ಕಾರು ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency -NIA)ಗೆ ಹಸ್ತಾಂತರಿಸಿದ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ದೆಹಲಿಯ ಕೆಂಪುಕೋಟೆ ಸಮೀಪದ ಮೆಟ್ರೋ ರೈಲು ಗೇಟ್ ಬಳಿಯಲ್ಲಿ ಕಾರು ಸ್ಪೋಟಗೊಂಡು 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಘಟನೆ ನಿನ್ನೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವಂತ ಕೇಂದ್ರ ಸರ್ಕಾರವು ರಾಷ್ಟ್ರೀ ತನಿಖಾ ದಳದಿಂದ (NIA) ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ. ನಿನ್ನೆ ದೆಹಲಿಯ ಕೆಂಪುಕೋಟೆ ಬಳಿಯಲ್ಲಿನ ಮೆಟ್ರೋ ನಿಲ್ದಾಣದ ಗೇಟ್ ಬಳಿಯಲ್ಲೇ…

Read More

ನವೆಂಬರ್ 23ರಂದು ಮಂಗಳೂರಿನ “ಕುಲಾಲ್ ಭವನ” ಲೋಕಾರ್ಪಣೆ

ಮಂಗಳೂರಿನ ಮಂಗಳಾದೇವಿ ಸಮೀಪ ಮುಂಬಯಿ ಕುಲಾಲ ಸಂಘದ ಒಡೆತನದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕುಲಾಲ ಭವನವು ನವೆಂಬರ್ 23ರಂದು ಲೋಕಾರ್ಪಣೆಗೊಳ್ಳಲಿದೆ ಇದರ ಉದ್ಘಾಟನಾ ಸಮಾರಂಭಕ್ಕೆ ಅಧ್ಯಕ್ಷರಾದ ರಘು ಎ.ಕುಲಾಲ್, ಗೌರವ ಅಧ್ಯಕ್ಷರಾದ ದೇವದಾಸ್ ಎಲ್. ಕುಲಾಲ್, ಉಪಾಧ್ಯಕ್ಷ ಡಿ.ಐ.ಮೂಲ್ಯ, ಗೌ.ಪ್ರಧಾನ ಕಾರ್ಯದರ್ಶಿ ಕರುಣಾಕರ್ ಬಿ ಸಾಲಿಯಾನ್, ಗೌ.ಕೋಶಾಧಿಕಾರಿ ಜಯ ಎಸ್. ಅಂಚನ್, ಕಟ್ಟಡ ನಿರ್ಮಾಣ ಸಮಿತಿ ಕಾರ್ಯಧ್ಯಕ್ಷರು, ಗಿರೀಶ್ ಬಿ ಸಾಲಿಯಾನ್, ಕಟ್ಟಡ ನಿರ್ಮಾಣ ಸಮಿತಿ ಉಪಕಾರ್ಯಧ್ಯಕ್ಷರು ಸುನಿಲ್ ಆರ್ ಸಾಲಿಯಾನ್, ಮಹಿಳಾ ವಿಭಾಗ ಕಾರ್ಯಧ್ಯಕ್ಷ ಸುಚಿತಾ…

Read More

ದೆಹಲಿ ಸ್ಫೋಟ ಶಂಕಿತ ವ್ಯಕ್ತಿಯ ಮೊದಲ ಫೋಟೋ ಬಿಡುಗಡೆ, ಕೆಂಪುಕೋಟೆ ಬಳಿ 3 ಗಂಟೆಗಳ ಕಾಲ ನಿಲ್ಲಿಸಿದ್ದ ಕಾರು

ನವದೆಹಲಿ : ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದ ಪ್ರಮುಖ ಆರೋಪಿ ಡಾ. ಮೊಹಮ್ಮದ್ ಉಮರ್ ನ ಮೊದಲ ಫೋಟೋವನ್ನ ಏಜೆನ್ಸಿಗಳು ಬಿಡುಗಡೆ ಮಾಡಿವೆ. ದೆಹಲಿಯ ಕೆಂಪುಕೋಟೆಯ ಬಳಿ ಸೋಮವಾರ ಸಂಜೆ ಸ್ಫೋಟಗೊಂಡ ಹ್ಯುಂಡೈ ಐ 20 ಕಾರು ಆಘಾತಕಾರಿ ತೀವ್ರತೆಯ ಸ್ಫೋಟದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 20 ಜನರನ್ನು ಗಾಯಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಕೆಲವೇ ನಿಮಿಷಗಳ ಹಿಂದೆ ಹರಿಯಾಣದ ಗುರುಗ್ರಾಮದ ಪೊಲೀಸರು ಐ20 ಕಾರಿನ ಮೂಲ ಮಾಲೀಕ ಮೊಹಮ್ಮದ್ ಸಲ್ಮಾನ್ ಎಂಬಾತನನ್ನು…

Read More

ಉಡುಪಿ: ನಕಲಿ ಚಿನ್ನ ಅಡವಿಟ್ಟು ವಂಚಿಸಿದ ಪ್ರಕರಣ – ಐವರು ಆರೋಪಿಗಳ ಬಂಧನ

ಉಡುಪಿ: ಬ್ಯಾಂಕುಗಳಲ್ಲಿ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ನಂಬಿಸಿ ಅಡಮಾನ ಇಟ್ಟು ಸಾಲ ಪಡೆದ ವಂಚನೆ ಪ್ರಕರಣದಲ್ಲಿ ಉಡುಪಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಅಂಬಪಾಡಿ ಕಪ್ಪಟ್ಟು ನಿವಾಸಿ ಪುನೀತ್ ಆನಂದ ಕೋಟ್ಯಾನ್, ತೆಂಕನಿಡಿಯೂರು ಲಕ್ಷ್ಮೀನಗರ ನಿವಾಸಿ ಸುದೀಪ್, ಏಣಗುಡ್ಡೆ ನಿವಾಸಿ ರಂಜನ್ ಕುಮಾರ್, ಪೆರ್ಡೂರು ನಿವಾಸಿ ಸರ್ವಜಿತ್ ಹೆಚ್ ಕೆ ಮತ್ತು ಮಹಾರಾಷ್ಟ್ರ ಪುಣೆ ನಿವಾಸಿ ರಾಜೇಶ್ ದಿಲೀಪ್ ಪಾಟೀಲ್ ಎಂದು ಗುರುತಿಸಲಾಗಿದೆ. ದಿನಾಂಕ 30-10-2025 ರಂದು, ಕರ್ನಾಟಕ ಬ್ಯಾಂಕ್ ಕಟ್ಟಿಂಗೇರಿ ಶಾಖಾ…

Read More

ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಪೋಟ ಕೇಸ್ : ಕಾರಿನಲ್ಲಿದ್ದ ಶಂಕಿತನ ವೀಡಿಯೊ ಬಹಿರಂಗ 

ನವದೆಹಲಿ : ಸೋಮವಾರ ಸಂಜೆ ಕೆಂಪು ಕೋಟೆ ಬಳಿ ಸ್ಫೋಟಗೊಂಡು ಒಂಬತ್ತು ಜನರು ಸಾವನ್ನಪ್ಪಿ, 20 ಜನರು ಗಾಯಗೊಂಡಿದ್ದ ಬಿಳಿ ಹುಂಡೈ ಐ20 ಕಾರನ್ನು ತೋರಿಸುವ ಸಿಸಿಟಿವಿ ವಿಡಿಯೋ ಮತ್ತು ಚಿತ್ರಗಳು ಹೊರಬಂದಿವೆ. ಮೂಲಗಳ ಪ್ರಕಾರ, HR 26CE7674 ನಂಬರ್ ಪ್ಲೇಟ್ ಹೊಂದಿರುವ ವಾಹನವು ಕೋಟೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ನಿಂತಿತ್ತು, ಮಧ್ಯಾಹ್ನ 3:19 ಕ್ಕೆ ಪ್ರವೇಶಿಸಿ ಸಂಜೆ 6:30 ರ ಸುಮಾರಿಗೆ ಹೊರಟಿತ್ತು. ಬದರ್‌ಪುರ ಗಡಿಯನ್ನು ಪ್ರವೇಶಿಸುತ್ತಿರುವ ಕಾರು ಸುಮಾರು…

Read More

ಬಂಟ್ವಾಳ: ಮಹಿಳೆಗೆ ಡಿಜಿಟಲ್ ಅರೆಸ್ಟ್- 1.16 ಕೋಟಿ ರೂ. ವಂಚನೆ

ಬಂಟ್ವಾಳ : ವಾಟ್ಸ್ಆ್ಯಪ್ ಮೂಲಕ ಮಹಿಳೆಯೊಬ್ಬರಿಗೆ ವಿಡಿಯೋ ಕರೆ ಮಾಡಿ ಬೆದರಿಕೆ ಹಾಕಿ, ಡಿಜಿಟಲ್ ಅರೆಸ್ಟ್ ಮಾಡಿ ಬಳಿಕ ಸುಮಾರು 1.16 ಕೋಟಿ ರೂ. ಲಪಟಾಯಿಸಿದ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆ.24ರಂದು ಬೆಳಗ್ಗೆ ಮಹಿಳೆ ಮನೆಯಲ್ಲಿದ್ದ ಸಮಯ ವಾಟ್ಸ್ಆ್ಯಪ್ ಮೂಲಕ ವಿಡಿಯೊ ಕರೆ ಬಂದಿದ್ದು, ಟೆಲಿ ಕಮ್ಯುನಿಕೇಶನ್ ಡಿಪಾರ್ಟ್ಮೆಂಟ್ ದಿಲ್ಲಿಯಿಂದ ಮಾತನಾಡುವುದಾಗಿ ಹೇಳಿದ್ದರು. ನಿಮ್ಮ ಹೆಸರಿನಲ್ಲಿರುವ ಆಧಾರ್ ಕಾರ್ಡ್ ಮತ್ತು ಪಾನ್‌ ಕಾರ್ಡ್ ಬಳಸಿ ಮೊಬೈಲ್ ನಂಬರ್ ಖರೀದಿಸಿ ದಿಲ್ಲಿಯಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ…

Read More