Headlines

ಹಲಸಿನ ಹಣ್ಣಿನ ಬೀಜದಿಂದ ಅನೇಕ ಆರೋಗ್ಯ ಲಾಭಗಳಿವೆ ಗೊತ್ತಾ..?

ಹಲಸಿನ ಹಣ್ಣಿನ ಬೀಜದಲ್ಲೂ ಸಾಕಷ್ಟು ಪೋಷಕಾಂಶಗಳಿವೆ. ಆರೋಗ್ಯದ ಲಾಭಗಳಿವೆ. ಹಲಸಿನ ಹಣ್ಣು ವಿಟಮಿನ್‌ ಬಿ ಹಾಗೂ ಪೊಟಾಶಿಯಂನಿಂದ ಸಮೃದ್ಧವಾಗಿದ್ದರೆ, ಅದರ ಬೀಜಗಳಲ್ಲಿ ಥೈಮೀನ್‌, ರೈಬೋಫ್ಲೇವಿನ್‌ ಕಣ್ಣು, ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ಬಹಳ ಉತ್ತಮ. ಬೀಜಗಳಲ್ಲಿ ಝಿಂಕ್‌, ಕಬ್ಬಿಣಾಂಶ, ಕ್ಯಾಲ್ಶಿಯಂ, ತಾಮ್ರ, ಪೊಟಾಶಿಯಂ ಹಾಗೂ ಮೆಗ್ನೀಶಿಯಂ ಮತ್ತಿತರ ಖನಿಜ ಲವಣಗಳಿಂದ ಸಮೃದ್ಧವಾಗಿದೆ. ಇವು ಬ್ಯಾಕ್ಟೀರಿಯಾಗಳಿಂದಾಗುವ ಸಮಸ್ಯೆಗಳಿಗೆ ಉತ್ತಮ ಆಹಾರವಾಗಿದ್ದು, ಇವುಗಳಿಂದಾಗುವ ಸಮಸ್ಯೆಗಳನ್ನು ಕಡಿಮೆ ಮಾಡುವ ತಾಕತ್ತನ್ನು ಹೊಂದಿದೆ. ಚರ್ಮದಲ್ಲಿ ಸುಕ್ಕಿನ ಸಮಸ್ಯೆಯೇ. ಸಣ್ಣ ವಯಸ್ಸಿನಲ್ಲಿಯೇ ವಯಸ್ಸಿಗೆ ಮೀರಿದ…

Read More

ಪುಸ್ತಕಗಳನ್ನು ಬೆಂಕಿಯಲ್ಲಿ ಸುಡಬಹುದು, ಆದರೆ ಬೆಂಕಿಯ ಜ್ವಾಲೆಗಳು ಜ್ಞಾನವನ್ನು ಅಳಿಸಲು ಸಾಧ್ಯವಿಲ್ಲ : ಪ್ರಧಾನಿ ಮೋದಿ

ನವದೆಹಲಿ : ಬಿಹಾರದ ರಾಜ್ಗಿರ್ನಲ್ಲಿ ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ವಿಶ್ವ ಪರಂಪರೆಯ ತಾಣವಾದ ಪ್ರಾಚೀನ “ನಳಂದ ಮಹಾವಿಹಾರ” ತಾಣಕ್ಕೆ ಹತ್ತಿರದಲ್ಲಿದೆ. ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಿದ ನಂತರ, ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.”ನಾನು ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ಮೊದಲ 10 ದಿನಗಳಲ್ಲಿ ನಳಂದಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿದೆ. ನನ್ನ ಅದೃಷ್ಟದ ಹೊರತಾಗಿ, ನಾನು ಇದನ್ನು ಭಾರತದ…

Read More

ಇನ್ಮುಂದೆ ರಾಜ್ಯದಲ್ಲಿ ಎಲ್ಲ ವಾಹನಗಳಿಗೆ ಈ ರೀತಿ ಹೆಡ್ ಲೈಟ್ ಕಡ್ಡಾಯ..!

ಬೆಂಗಳೂರು : ಎಲ್ಲಾ ವಾಹನಗಳಿಗೆ ಸಿಎಂವಿ ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡದಂತೆ ಎಲ್‌ಇಡಿ ದೀಪಗಳನ್ನು ಅಳವಡಿಸುವ ಕುರಿತಂತೆ ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಆಲೋಕ್‌ ಕುಮಾರ್‌ ಸೂಚಿಸಿದ್ದಾರೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಇತ್ತೀಚಿನ ದಿನಗಳಲ್ಲಿ ಹಲವಾರು ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ದೀಪಗಳನ್ನು ಅಳವಡಿಸುತ್ತಿದ್ದು ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವು ತೊಂದರೆಯುಂಟಾಗುತ್ತಿದ್ದು ಇದರಿಂದ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಕಂಡು ಬಂದಿರುತ್ತದೆ. ಈ ಪೈಕಿ ಪ್ರಮುಖವಾಗಿ…

Read More

ಅಯೋಧ್ಯೆ ರಾಮ ಮಂದಿರದಲ್ಲಿ ಗುಂಡಿನ ದಾಳಿ: ಯೋಧ ಸಾವು

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಎಸ್‌ಎಫ್ ಯೋಧ ಗುಂಡಿಗೆ ಬಲಿಯಾಗಿದ್ದಾರೆ. ಬುಧವಾರ ಬೆಳಗ್ಗೆ 5.25ಕ್ಕೆ ಈ ಘಟನೆ ನಡೆದಿದೆ. ಗುಂಡಿಗೆ ಬಲಿಯಾದ ಯೋಧ ಅಂಬೇಡ್ಕರ್ ನಗರದ ನಿವಾಸಿ ಶತ್ರುಘ್ನ ವಿಶ್ವಕರ್ಮ(೨೫) ಎಂದು ತಿಳಿದು ಬಂದಿದೆ. ಆವರಣದಲ್ಲಿ ಗುಂಡಿನ ಸದ್ದು ಕೇಳಿದ ಬಳಿಕ ಸಹ ಸಿಬ್ಬಂದಿ ಅಲ್ಲಿಗೆ ಓಡೋಡಿ ಬಂದಿದ್ದಾರೆ, ಅಷ್ಟರಲ್ಲಾಗಲೆ ಯೋಧ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಯೋಧನ ಸಾವು ಅಯೋಧ್ಯೆ ದೇಗುಲ ಸಂಕೀರ್ಣದಲ್ಲಿ…

Read More

ಉಪ್ಪಿನಂಗಡಿ: ಮಹಿಳೆಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್- ಬಾಲಕ ಬಂಧನ

ಉಪ್ಪಿನಂಗಡಿ ಸಮೀಪದ ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಎಂಬವರು ರವಿವಾರ ತಡರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇದೀಗ ಮೃತ ಮಹಿಳೆಯ ಸಂಬಂಧಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಹೇಮಾವತಿ ಅವರ ಮನೆಗೆ ಬಂದಿದ್ದ ಅವರ ಸಹೋದರಿಯ ಪುತ್ರ, ಎಸ್ಎಸ್ಎಲ್‌ಸಿ ವಿದ್ಯಾರ್ಥಿ ರವಿವಾರ ರಾತ್ರಿ ತಂಗಿದ್ದ. ತಡರಾತ್ರಿ ವೇಳೆ ಈ ಅಪ್ರಾಪ್ತ ಹೇಮಾವತಿ ಮಲಗಿದಲ್ಲಿಗೆ ಹೋಗಿ ದೇಹಸುಖ ಬಯಸಿದ್ದಾನೆ. ಇದಕ್ಕೆ ಹೇಮಾವತಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆರೋಪಿ ಬಾಲಕ…

Read More

ನಿಮ್ಮ ಖಾತೆಗೆ ʻಪಿಎಂ ಕಿಸಾನ್‌ʼ ಯೋಜನೆಯ ಹಣ ಬರದಿದ್ದರೆ ತಪ್ಪದೇ ಈ ಕೆಲಸ ಮಾಡಿ

ನವದೆಹಲಿ : ವಾರಣಾಸಿಯಲ್ಲಿ ನಡೆದ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17 ನೇ ಕಂತನ್ನು ಬಿಡುಗಡೆ ಮಾಡಿದರು. ಡಿಬಿಟಿ ಮೂಲಕ ದೇಶದ ಸುಮಾರು 9.26 ಕೋಟಿ ರೈತರ ಖಾತೆಗಳಿಗೆ 20,000 ಕೋಟಿ ರೂ. ಗಳನ್ನು ಖಾತೆಗೆ ಜಮಾ ಮಾಡಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17 ನೇ ಕಂತಿನ ಹಣವನ್ನು ಇನ್ನೂ ಸ್ವೀಕರಿಸದ ಅನೇಕ ರೈತರು ಇದ್ದಾರೆ. ಕಂತಿನ ಹಣ ನಿಮ್ಮ ಖಾತೆಗೆ ಬರದಿದ್ದರೆ,…

Read More

ಪುತ್ತೂರು : ಮನೆಯೊಂದರಲ್ಲಿ ಸ್ಪೋಟಗೊಂಡ ರೆಫ್ರಿಜರೇಟರ್..!

ಪುತ್ತೂರು : ನಗರದ ಹೊರವಲಯದ ಜಿಡೆಕಲ್ಲು ಕಾಲೇಜು ಸಮೀಪದ ಮನೆಯೊಂದರಲ್ಲಿ ರೆಫ್ರಿಜರೇಟರ್ ಸ್ಪೋಟಗೊಂಡ ಘಟನೆ ಸಂಭವಿಸಿದೆ. ಜಿಡೆಕಲ್ಲು ಕಾಲೇಜು ಸಮೀಪದ ಮೋನಪ್ಪ ಅವರ ಮನೆಯಲ್ಲಿ ಘಟನೆ‌ ನಡೆದಿದೆ. ರೆಫ್ರಿಜರೇಟರ್ ಸ್ಫೋಟಗೊಂಡ ಹಿನ್ನೆಲೆ ಅಗ್ನಿ ಅವಘಡ ಸಂಭವಿಸಿದ್ದು, ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಗ್ನಿಶಾಮಕ ದಳದವರೂ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ.

Read More

ಮಂಗಳೂರು: ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಮಂಗಳೂರು ಇದರ ನೇತ್ರತ್ವದಲ್ಲಿ ಜುಲೈ 7 ರಂದು “ಬೃಹತ್ ವೈದ್ಯಕೀಯ ತಪಾಸಣೆ ಮತ್ತು ಸಲಹಾ ಶಿಬಿರ”

ಮಂಗಳೂರು: ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಮಂಗಳೂರು ಇದರ ನೇತ್ರತ್ವದಲ್ಲಿ 25 ನೇ ವರ್ಷದ ಸೇವಾ ಸವಿ ನೆನಪು ಹಾಗೂ ವೈದ್ಯರ ದಿನದ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘ(ರಿ.) ಮಂಗಳೂರು, ಕೆನರಾ ಅರ್ಥೋಪೆಡಿಕ್ ಸೊಸೈಟಿ (ರಿ.) ಮಂಗಳೂರು ಮತ್ತು ಕುಟುಂಬ ವೈದ್ಯರ ಸಂಘ (ರಿ.) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ತಜ್ಞ ವೈದ್ಯರಿಂದ ಬೃಹತ್ ವೈದ್ಯಕೀಯ ತಪಾಸಣೆ ಮತ್ತು ಸಲಹಾ ಶಿಬಿರವು ದಿನಾಂಕ ಜುಲೈ 7 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ…

Read More

ಶಾಕಿಂಗ್‌ : ನಾಯಿಯ ಕುತ್ತಿಗೆಗೆ ಸುತ್ತಿಕೊಂಡ ವಿಷಕಾರಿ ಹಾವು!

ನೀವು ಪ್ರಪಂಚದಾದ್ಯಂತ ಅನೇಕ ಹಾವುಗಳನ್ನು ನೋಡಿರಬಹುದು. ಆದರೆ ಕೆಲವು ಹಾವುಗಳು ನೋಡಲು ಭಯಾನಕವಾಗಿವೆ. ಅನೇಕವು ತುಂಬಾ ವಿಷಕಾರಿಯಾಗಿವೆ, ಅವುಗಳ ವಿಷವು ಕಚ್ಚಿದಾಗ ಸಹ ಹೊರಬರುವುದಿಲ್ಲ. ಈ ನಡುವೆ ಹಾವು ನಾಯಿ ಕುತ್ತಿಗೆಗೆ ಸುತ್ತಿಕೊಂಡಿರುವ ವಿಡಿಯೋವೊಂದು ವೈರಲ್‌ ಆಗಿದೆ. ವೈರಲ್‌ ವಿಡಿಯೋದಲ್ಲಿ ಹಾವು ನಾಯಿಯನ್ನು ಹಿಡಿಯುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ತನ್ನನ್ನು ಮುಕ್ತಗೊಳಿಸಲು ಪ್ರಯತ್ನಿಸುತ್ತದೆ, ಆದರೆ ಅದನ್ನು ತೊಡೆದುಹಾಕಲು ನಾಯಿಗೆ ಸಾಧ್ಯವಾಗುವುದಿಲ್ಲ. ವೀಡಿಯೊದಲ್ಲಿ, ವಿಷಕಾರಿ ಹಾವು ನಾಯಿಯ ಕುತ್ತಿಗೆ ಮತ್ತು ಹೊಟ್ಟೆಯನ್ನು ಹೇಗೆ ಹಿಡಿದಿದೆ ಎಂಬುದನ್ನು ನೀವು ನೋಡಬಹುದು. ಅದೇ…

Read More

ನಟ ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ವಿಷ ಸೇವಿಸಿ ಆತ್ಮಹತ್ಯೆ..!

ಬೆಂಗಳೂರು : ಕಾಣೆಯಾಗಿದ್ದ ನಟ ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ಶ್ರೀಧರ್‌ ಎಂಬಾತನ ಶವ ಪತ್ತೆಯಾಗಿದ್ದು,‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ನಟ ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ಶ್ರೀಧರ್‌ (35) ವಿಷ ಸೇವಿಸಿ ಏಪ್ರಿಲ್‌ 17 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಬರೆದಿಟ್ಟಿರುವ ಡೆತ್‌ ನೋಟ್‌ ಕೂಡ ಪತ್ತೆಯಾಗಿದೆ. ಕೀಟನಾಶಕ ಸೇವನೆ ಮಾಡಿ ಶ್ರೀಧರ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಆತ ಸಾಯುವ ಮುನ್ನ ಬರೆದಿಟ್ಟಿದ್ದು, ಇದೀಗ…

Read More