ಮೊಬೈಲ್ ಬಳಕೆದಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್ : ಇನ್ಮುಂದೆ ಬರಲ್ಲ ʻಸಾಲ, ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ನಕಲಿ ಕರೆ, ಸಂದೇಶಗಳು!
ನವದೆಹಲಿ : ಮೊಬೈಲ್ ಬಳಸುವ ಗ್ರಾಹಕರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕೇಂದ್ರಸರ್ಕಾರವು ಹೊಸ ಕರಡು ಸಿದ್ದಪಡಿಸಿದ್ದು, ಇನ್ಮುಂದೆ ನಿಮ್ಮ ಫೋನ್ ಗೆ ಸಾಲ, ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ನಕಲಿ ಕರೆಗಳು, ಸಂದೇಶಗಳು ಬರುವುದಿಲ್ಲ. ಹೌದು, ಎಲ್ಲಾ ವಿಷಯಗಳ ಪ್ರಚಾರದ ಹೆಸರಿನಲ್ಲಿ ಪದೇ ಪದೇ ಬರುವ ಅನಗತ್ಯ ಕರೆಗಳು ಮತ್ತು ಸಂದೇಶಗಳನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಕರಡು ಸಿದ್ಧಪಡಿಸಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯ ಸಿದ್ಧಪಡಿಸಿದ ಕರಡಿನ ಪ್ರಕಾರ, ಯಾವುದೇ ವಸ್ತುವಿನ ವ್ಯಾಪಾರ ಪ್ರಚಾರ ಅಥವಾ ಮಾರಾಟಕ್ಕೆ…

