Headlines

ಮಂಗಳೂರು : ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ..!

ಮಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು ಮಂಗಳೂರು, ಮೈಸೂರು ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಿತು. ಇತ್ತ ಮಂಗಳೂರಿನಲ್ಲಿ ಬಿಜೆಪಿ ಘಟನೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲು ಯತ್ನ ನಡೆಸಿದ ಘಟನೆ ನಡೆಯಿತು. ಮೆರವಣಿಗೆ ಮೂಲಕ ತೆರಳಿ ಡಿಸಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಈ…

Read More

ಮಂಗಳೂರು:ನಿರ್ಮಾಣ ಹಂತದ ಕಟ್ಟಡದ ಬಳಿ ಗುಡ್ಡ ಕುಸಿತ..! ಕಾರ್ಕಳದಲ್ಲಿ ಕುಸಿದ ಮನೆಯಂಗಳದಲ್ಲಿದ್ದ ಬಾವಿ

ಮಂಗಳೂರಿನ ಕಾವೂರು ಸೂಜಿಕಲ್ ನಲ್ಲಿ ಗುಡ್ದ ಕುಸಿದು ಬಿದ್ದಿದ್ದು, 6 ಮನೆಗಳಿಗಳಿಗೆ ಅಪಾಯ ತಂದೊಡ್ಡಿದೆ. ನಿರ್ಮಾಣ ಹಂತದ ಕಟ್ಟಡದ ಬಳಿ ಗುಡ್ಡ ಕುಸಿತಗೊಂಡಿದ್ದು, 6 ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಖಾಸಗಿ ಕಟ್ಟಡ ನಿರ್ಮಾಣಕ್ಕಾಗಿ ಗುಡ್ಡ ಅಗೆಯಲಾಗಿತ್ತು ಎನ್ನಲಾಗಿದ್ದು, ಇದೀಗ ಸಂಪೂರ್ಣ ಗುಡ್ಡ ಕುಸಿದಿದ್ದು, ಸುತ್ತಮುತ್ತಲಿನ ಮನೆಗಳಿಗೆ ಅಪಾಯವುಂಟಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುರುಗನ್ ಭೇಟಿ ನೀಡಿದ್ದು, ಮುಂಜಾಗೃತಾ ಕ್ರಮವಾಗಿ 6 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು, ಕಟ್ಟಡ…

Read More

ಮಂಗಳೂರು: ಅಪಾಯದಲ್ಲಿರುವ ಮನೆಗಳು- ನಿವಾಸಿಗಳ ಸ್ಥಳಾಂತರಕ್ಕೆ ಡಿಸಿ ಸೂಚನೆ

ಮಂಗಳೂರು: ನಗರದ ಕಾವೂರು ಸೂಜಿಕಲ್ ಗುಡ್ಡೆ ಎಂಬಲ್ಲಿ ಭೂಕುಸಿತದಿಂದ ಕೆಲವು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ತಕ್ಷಣವೇ ಅಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ. ಮಂಗಳೂರು ತಾಲೂಕಿನ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಮುಲ್ಲೈ ಮುಹಿಲನ್ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಕಾವೂರು ಸೂಜಿಕಲ್ ಗುಡ್ಡೆಯಲ್ಲಿ ಖಾಸಗಿ ಮನೆ ಕಟ್ಟಡ ನಿರ್ಮಿಸಲು ಅಗೆಯಲಾದ ಮಣ್ಣಿನಿಂದ ಎತ್ತರದ ಪ್ರದೇಶದಲ್ಲಿರುವ ಮನೆಗಳು ಕೆಳಗೆ ಬೀಳುವ ಸ್ಥಿತಿಯಲ್ಲಿವೆ. ಈ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳನ್ನು ಬೇರೆಡೆ ಬಾಡಿಗೆ ಮನೆಗಳಿಗೆ…

Read More

ಮಳೆಯ ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಸೆ.15ರವರೆಗೆ ಭಾರೀ ವಾಹನಗಳ ಸಂಚಾರ ನಿಷೇಧ

ಆಗುಂಬೆ: ನಿರಂತರ ಮಳೆಯ ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಸೆ.15ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ. ಆಗುಂಬೆ ಘಾಟಿಯಲ್ಲಿ ಮಳೆಗಾಲದ ಅವಧಿಯಲ್ಲಿ ಭೂಕುಸಿತವಾಗುವ ಸಂಭವ ಇರುವುದರಿಂದ ಜೂ.27ರಿಂದ ಸೆ.15ರವರೆಗೆ ಭಾರೀ ವಾಹನ ಸಂಚರಿಸದಂತೆ ಆದೇಶಿಸಲಾಗಿದೆ. ತೀರ್ಥಹಳ್ಳಿಯಿಂದ ಉಡುಪಿಗೆ ಹೋಗುವ ಭಾರೀ ವಾಹನಗಳು ತೀರ್ಥಹಳ್ಳಿ -ಮಾಸ್ತಿಕಟ್ಟೆ- ಸಿದ್ದಾಪುರ-ಕುಂದಾಪುರ ಮೂಲಕ ಉಡುಪಿ ತಲುಪಬಹುದು. ಉಡುಪಿಯಿಂದ ತೀರ್ಥಹಳ್ಳಿ ಬರುವವರು ಉಡುಪಿ- ಕುಂದಾಪುರ- ಸಿದ್ದಾಪುರ- ಮಾಸ್ತಿಕಟ್ಟೆ ಮೂಲಕ ತೀರ್ಥಹಳ್ಳಿಗೆ ಸಂಚರಿಸಬಹುದು ಎಂದು ಪ್ರಕಟಣೆಯಲ್ಲಿ…

Read More

ಭಾರೀ ಮಳೆ ಹಿನ್ನಲೆ: ನಾಳೆಯೂ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ 

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಇಂದು ಭಾರೀ ಮಳೆಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇದೀಗ ನಾಳೆಯೂ ಮಳೆಯ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಆದೇಶ ಹೊರಡಿಸಿದ್ದು, ಹವಾಮಾನ ಇಲಾಖೆಯಿಂದ ನಾಳೆಯೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ನಾಳೆಯೂ ರಜೆ…

Read More

ಭಾರೀ ಮಳೆ : ಮಧೂರು ಸಿದ್ಧಿವಿನಾಯಕ ದೇವಸ್ಥಾನ ಜಲಾವೃತ..!

 ಕಾಸರಗೋಡು ಜಿಲ್ಲೆಯಾಧ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಪರಿಣಾಮ ಇಲ್ಲಿನ ಇತಿಹಾಸ ಪ್ರಸಿದ್ದ ಮಧೂರು ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನ ಜಲಾವೃತಗೊಂಡಿದೆ. ಬುಧವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಇಲ್ಲಿನ ಮಧುವಾಹಿನಿ ನದಿ ತುಂಬಿ ಹರಿಯುತ್ತಿದ್ದು ದೇವಸ್ಥಾನದ ಒಳಭಾಗ ಜಲಾವೃತಗೊಂಡಿದೆ. ಅಲ್ಲದೆ ತಗ್ಗು ಪ್ರದೇಶಗಳು ನೀರಿನಿಂದ ಆವೃತಗೊಂಡಿದೆ. ಪ್ರತೀ ವರ್ಷ ಮಳೆಗಾಲದ ಸಂದರ್ಭದಲ್ಲಿ ದೇವಸ್ಥಾನದ ಒಳಭಾಗಕ್ಕೆ ನೀರು ಬಂದು ದ್ವೀಪದಂತೆ ಗೋಚರಿಸುತ್ತದೆ.

Read More

ನ್ಯಾಯವಾದಿ ಜಯಪ್ರಕಾಶ್ ಹಾಗೂ ಪತ್ನಿಯ ಮೇಲೆ ಹಲ್ಲೆ ಖಂಡಿಸಿ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಜಿಲ್ಲಾಧಿಕಾರಿ ಭೇಟಿ

ಮಂಗಳೂರು ವಕೀಲರ ಸಂಘದ ಸದಸ್ಯರಾದ ಶ್ರೀ ಜಯಪ್ರಕಾಶ್ ಹಾಗೂ ಶ್ರೀಮತಿ ಸ್ವಾತಿ ಇವರ ಮೇಲೆ ವೆಲೇರಿಯನ್ ಮೆಂಡೋನ್ಸ ಎಂಬುವನು ಹಲ್ಲೆ ಮಾಡಿದ್ದು ಈಗಾಗಲೇ ಆತನ ಮೇಲೆ ಮಂಗಳೂರು ಕಂಕನಾಡಿ ನಗರ ಠಾಣೆಯಲ್ಲಿ ಜಾಮೀನು ರಹಿತ ದೂರು ದಾಖಲಾಗಿದ್ದು, ಆರೋಪಿಯ ಮುಲಾಜಿಗೆ ಪೊಲೀಸರು ಈವರೆಗೂ ಆತನ ಯಾವುದೇ ಕ್ರಮ ಕೈಗೊಳ್ಳದೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ(ರಿ) ಮಂಗಳೂರು ಇದರ ನಾಯಕರುಗಳು ಜಿಲ್ಲಾಧಿಕಾರಿಯವರನ್ನು ಮತ್ತು ಮಂಗಳೂರು ಪೋಲಿಸ್ ಆಯುಕ್ತರನ್ನು ಭೇಟಿ ಮಾಡಿ…

Read More

ರಾಜ್ಯದಲ್ಲಿ ಪಾನಿಪುರಿಗೆ ಬಳಸುವ ಸಾಸ್‌, ಮೀಠಾ ನಿಷೇಧ..! ಕಾರಣ ನೋಡಿ

ಬೆಂಗಳೂರು : ಪಾನಿಯಲ್ಲಿ ಬಳಸುವ ಕೆಲವು ಪದಾರ್ಥಗಳಲ್ಲಿ ಕ್ಯಾನ್ಸರ್‌ ಕಾರಕ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಾನಿಪುರಿಗೆ ಬಳಸುವ ಸಾಸ್‌ ಮತ್ತು ಮೀಠಾ ನಿಷೇಧಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ ಈ ಕುರಿತು ಮಾಹಿತಿ ನೀಡಿದ್ದು, ಪಾನಿಪುರಿ 243 ಸ್ಯಾಂಪಲ್ಸ್‌ ಗಳನ್ನು ಟೆಸ್ಟ್‌ ಮಾಡಲಾಗಿದ್ದು, ಇದರಲ್ಲಿ 43 ಪರೀಕ್ಷೆಗಳಲ್ಲಿ ಇವುಗಳು ಅಸುರಕ್ಷಿತ ಎಂದು ವರದಿ ಬಂದಿದೆ. ಇದರಲ್ಲಿ ಐದು ಪಾದರ್ಥಗಳಲ್ಲಿ ಹೊಟ್ಟೆ ಕ್ಯಾನ್ಸರ್‌ ಗೆ ಕಾರಣವಾಗುವ…

Read More

ವಕೀಲ ದಂಪತಿ ಮೇಲೆ ಹಲ್ಲೆ ಖಂಡಿಸಿ: ಮಂಗಳೂರು ವಕೀಲರ ಸಂಘದ ಸದಸ್ಯರಿಂದ ಪ್ರತಿಭಟನೆ

ಮಂಗಳೂರು ವಕೀಲರ ಸಂಘದ ಸದಸ್ಯರಾದ ಶ್ರೀ ಜಯಪ್ರಕಾಶ್ ಹಾಗೂ ಶ್ರೀಮತಿ ಸ್ವಾತಿ ಇವರ ಮೇಲೆ ವೆಲೇರಿಯನ್ ಮೆಂಡೋನ್ಸ ಎಂಬುವನು ಹಲ್ಲೆ ಮಾಡಿದ್ದು ಈಗಾಗಲೇ ಆತನ ಮೇಲೆ ಮಂಗಳೂರು ಕಂಕನಾಡಿ ನಗರ ಠಾಣೆಯಲ್ಲಿ ಜಾಮೀನು ರಹಿತ ದೂರು ದಾಖಲಾಗಿದ್ದು, ಆರೋಪಿಯ ಮುಲಾಜಿಗೆ ಪೊಲೀಸರು ಈವರೆಗೂ ಆತನ ಯಾವುದೇ ಕ್ರಮ ಕೈಗೊಳ್ಳದೆ ಹಿನ್ನೆಲೆಯಲ್ಲಿ, ಮಂಗಳೂರು ವಕೀಲರ ಸಂಘದ ಸದಸ್ಯರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀ ಮೋನಪ್ಪ ಭಂಡಾರಿ, ಶ್ರೀ ಕೆ ಶಂಭುಶರ್ಮ,…

Read More

ಉದ್ಯೋಗ ವಾರ್ತೆ : ʻಫುಡ್ ಕಾರ್ಪೊರೇಷನ್ ಆಫ್ ಇಂಡಿಯಾʼದಲ್ಲಿ 5,000 ಕ್ಕೂ ಹೆಚ್ಚು ʻAGMʼ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ : ಭಾರತೀಯ ಆಹಾರ ನಿಗಮ (FCI) ವಾಚ್ಮನ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಮ್ಯಾನೇಜರ್, ಕ್ಲಾಸ್ 3 ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್ ಸಿಐ) ನೇಮಕಾತಿ 2024 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಭಾರತೀಯ ಆಹಾರ ನಿಗಮ ಇಲಾಖೆ ಎಫ್ ಸಿಐ ನೇಮಕಾತಿ 2024 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಫ್ಸಿಐ ನೇಮಕಾತಿ 2024 ಅರ್ಜಿ ನಮೂನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಎಫ್ ಸಿಐ ನೇಮಕಾತಿ ಅರ್ಜಿ ನಮೂನೆಯನ್ನು…

Read More