ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಲೆಕ್ಟ್ರಿಕ್ ಅಟೋರಿಕ್ಷಾಗಳ ಮುಕ್ತ ಸಂಚಾರಕ್ಕೆ ದ.ಕ. ಜಿಲ್ಲಾಧಿಕಾರಿ ಅನುಮತಿ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಲೆಕ್ಟ್ರಿಕ್ ಆಟೋರಿಕ್ಷಾಗಳು ಹಾಗೂ ಮೆಥನಾಲ್ ಮತ್ತು ಇಥೆನಾಲ್ ಬಳಸಿ ಸಂಚರಿಸುವ ಆಟೋರಿಕ್ಷಾಗಳಿಗೆ ಮುಕ್ತವಾಗಿ ಸಂಚರಿಸಲು ಅನುಮತಿ ನೀಡಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಆದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಆಟೋರಿಕ್ಷಾಗಳೊಂದಿಗೆ ಇ- ಆಟೋರಿಕ್ಷಾಗಳು ಹಾಗೂ ಮೆಥನಾಲ್ ಮತ್ತು ಇಥನಾಲ್ ಬಳಸಿ ಸಂಚರಿಸುವ ಆಟೋರಿಕ್ಷಾಗಳಿಗೆ ವಲಯ 1 ರಲ್ಲಿ ನೀಲಿ ಬಣ್ಣದ ಹಾಗೂ ವಲಯ 2 ರಲ್ಲಿ ಹಳದಿ ಬಣ್ಣದ ಸ್ಟಿಕ್ಕರ್ ಅಥವಾ ಗುರುತಿನ ಸಂಖ್ಯೆಗಳನ್ನು ಪೋಲೀಸ್ ಇಲಾಖೆಯಿಂದ ಪಡೆದು ಅಂಟಿಸಲು ಜಿಲ್ಲಾಧಿಕಾರಿಗಳ ದಿನಾಂಕ…

