Headlines

ಇಂದಿನಿಂದ ಮೂರು ದಿನಗಳ ಕಾಲ ಮಡಗಾಂವ್‌ – ಮಂಗಳೂರು ಜಂಕ್ಷನ್ ನಡುವೆ ಮೇಮು ರೈಲು ಸಂಚಾರ

ಮಂಗಳೂರು: ಮಡಗಾಂವ್‌ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಇಂದಿನಿಂದ ಮೂರು ದಿನಗಳ ಕಾಲ ಮೀಸಲು ರಹಿತ ವಿಶೇಷ ಮೇಮು ರೈಲನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ. ಮೇಮು ರೈಲು ಜು.20, 21, 22ರಂದು ಎರಡು ಕೇಂದ್ರಗಳ ನಡುವೆ ಸಂಚರಿಸಲಿದೆ. ಇಂದು ಬೆಳಗ್ಗೆ 6ಗಂಟೆಗೆ ಮಡಗಾಂವ್ ಜಂಕ್ಷನ್‌ನಿಂದ ಹೊರಟಿರುವ ಮೆಮು ರೈಲು ಮಧ್ಯಾಹ್ನ 12:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮರು ಪ್ರಯಾಣದಲ್ಲಿ 12:40ಕ್ಕೆ ಮಂಗಳೂರು ಜಂಕ್ಷನ್ ನಿಂದ ಹೊರಡುವ ರೈಲು ಸಂಜೆ 7ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ….

Read More

ಕಾರ್ಕಳ: ನಾಯಿಯ ಶವವನ್ನು ಸ್ಕೂಟರ್ ಗೆ ಕಟ್ಟಿ ಎಳೆದುಕೊಂಡ ಹೊದ ವ್ಯಕ್ತಿ- ಅಮಾನವೀಯ ಘಟನೆಯ ದೃಶ್ಯ ವೈರಲ್

ಕಾರ್ಕಳ: ವ್ಯಕ್ತಿಯೊಬ್ಬ ಸತ್ತ ನಾಯಿಯನ್ನು ಸ್ಕೂಟರ್ ಗೆ ಕಟ್ಟಿಕೊಂಡು ಎಳೆದೊಯ್ದ ಘಟನೆ ಶಿರ್ವ ಮುಖ್ಯ ರಸ್ತೆಯಲ್ಲಿ ನಡೆದಿದ್ದು, ಇದೀಗ ಘಟನೆಯ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಮಾನವೀಯ ಕೃತ್ಯ ನಡೆಸಿದ ವ್ಯಕ್ತಿ ಕೊಂಬಗುಡ್ಡೆಯ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದ್ದು ಶಿರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರಾಣಿ ದಯಾಸಂಘದವರು ಕೇಸು ದಾಖಲಿಸುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗಿದೆ.

Read More

ಅಂಕೋಲಾ ಗುಡ್ಡ ಕುಸಿತ, ಮೃತದೇಹಗಳ ಪತ್ತೆಗೆ ಕೋಸ್ಟ್ ಗಾರ್ಡ್ ಸಹಾಯ ಕೇಳಿದ ಜಿಲ್ಲಾಡಳಿತ..!

ಅಂಕೋಲಾ: ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಶಿರೂರು ಗುಡ್ಡ ಕುಸಿತದಿಂದ ಅವಶೇಷಗಳಡಿ ಸಿಲುಕಿರುವ ಮೃತದೇಹಗಳ ಪತ್ತೆಗೆ ಜಿಲ್ಲಾಡಳಿತ ಕೋಸ್ಟ್ ಗಾರ್ಡ್ ಮೊರೆ ಹೋಗಿದೆ. ಗುಡ್ಡ ಕುಸಿತದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ಕಳೆದ 5 ದಿನಗಳಿಂದ ಸಮರೋಪದಿಯಲ್ಲಿ ನಡೆಯುತ್ತಿದ್ದರೂ ಹೆಚ್ಚಿನ ಪ್ರಗತಿಯಾಗಿಲ್ಲ. ಕಠಿಣ ಭೂಪ್ರದೇಶ ಮತ್ತು ಭಾರೀ ಮಳೆಯು ರಕ್ಷಣಾ ತಂಡಕ್ಕೆ ಪ್ರಮುಖ ಅಡಚಣೆಯಾಗಿದೆ. ಆದರೂ ಭಾರಿ ಮಳೆ ಮಧ್ಯೆ ಮಣ್ಣನ್ನು ತೆರವುಗೊಳಿಸುವ ಮತ್ತು ಕಾಣೆಯಾದವರ ಹುಡುಕಾಟದ ಕೆಲಸ ಸ್ಥಳೀಯ ರಕ್ಷನಾ ತಂಡಗಳು ಮುಂದುವರೆಸಿವೆ. ದುರ್ಗಮ ಪ್ರದೇಶ, ಪ್ರತಿಕೂಲ…

Read More

ಚಾರ್ಮಾಡಿ ಘಾಟ್ ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ..!

ರಾಜ್ಯದ ಮಲೆನಾಡು, ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ಚಾರ್ಮಾಡಿ ಘಾಟ್ ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಷ್ಟವ್ಯಸ್ತಗೊಂಡಿದೆ. ಅತಿಯಾದ ಮಳೆಯ ಕಾರಣ ಸಂಪಾಚೆ ಘಾಟ್, ಶಿರಾಡಿ ಘಾಟ್ ಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಚಾರ್ಮಾಡಿ ಘಾಟ್ ಮೇಲೆ ಹೆಚ್ಚಿನ ಸಂಚಾರ ಒತ್ತಡ ಇರುವುದರಿಂದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ…

Read More

ಭಕ್ತಾದಿಗಳ ಗಮನಕ್ಕೆ: ಆ.15ರಿಂದ ‘ಶೃಂಗೇರಿ ಶಾರದಾಂಬೆ’ ದೇಗುಲದಲ್ಲಿ ವಸ್ತ್ರ ಸಂಹಿತೆ ಜಾರಿ, ಈ ಉಡುಪು ಕಡ್ಡಾಯ

 ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದು ಶೃಂಗೇರಿಯ ಶಾರಾಂಬೆಯ ಶ್ರೀಮಠ. ಆಗಸ್ಟ್.15ರಿಂದ ಇಲ್ಲಿಗೆ ಭೇಟಿ ನೀಡುವಂತ ಪ್ರವಾಸಿಗರು, ಯಾತ್ರಾರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಅವುಗಳ ಹೊರತಾಗಿ ಬೇರೆ ಉಡುಪು ಧರಿಸಿ ಬಂದ್ರೆ ಶ್ರೀಮಠಕ್ಕೆ ಎಂಟ್ರಿ ಇರೋದಿಲ್ಲ. ಈ ಬಗ್ಗೆ ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀಶಾರದಾ ಪೀಠದ ಆಡಳಿತಾಧಿಕಾರಿ ಮತ್ತು ಸಿಇಓ ಪಿ.ಎ ಮುರಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶ್ರೀಮಠ ಶೃಂಗೇರಿಗೆ ಆಗಮಿಸುವ ಎಲ್ಲಾ ಭಕ್ತರು, ಆಗಸ್ಟ್.15, 2024ರಿಂದ ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಲು ವಿನಂತಿಸಿದ್ದಾರೆ. ಶ್ರೀ ಶಾರದಾಂಬೆಯ…

Read More

ಜು.20: ದ.ಕ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ದಿನಾಂಕ: 20-07-2024 ರಂದು ರಜೆಯನ್ನು ಘೋಷಿಸಲಾಗಿದೆ.

Read More

ಸಂಸದ ಬ್ರಿಜೇಶ್ ಚೌಟ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ: ಮಂಗಳೂರು – ಬೆಂಗಳೂರಿಗೆ ವಿಶೇಷ ರೈಲು ಸಂಚಾರ

ಮಂಗಳೂರು: ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕರಾವಳಿಯನ್ನು ಹೊರ ಜಿಲ್ಲೆಗಳ ಜತೆಗೆ ಬೆಸೆಯುವ ಎಲ್ಲ ಘಾಟಿ ರಸ್ತೆಗಳಲ್ಲಿ ಗುಡ್ಡ ಕುಸಿತ ಉಂಟಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ಮೈಸೂರು ಡಿಆರ್‌ಎಮ್ ಅವರಿಗೆ ಮಂಗಳೂರು- ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಪ್ರಾರಂಭಿಸುವಂತೆ ಪತ್ರ ಬರೆದು ವಿನಂತಿಸಿದ್ದಾರೆ. ಕರಾವಳಿಯ ಬಹಳಷ್ಟು ಜನ ಮಂಗಳೂರು-ಬೆಂಗಳೂರು ನಗರಗಳ ನಡುವೆ ನಿತ್ಯ ಪ್ರಯಾಣಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಯಾವುದೇ…

Read More

‘ಒಂದು ಗ್ರಾಂ ಡ್ರಗ್ಸ್ ಕೂಡ ಭಾರತಕ್ಕೆ ಬರಲು ಸರ್ಕಾರ ಬಿಡುವುದಿಲ್ಲ’ – ಅಮಿತ್ ಶಾ ಎಚ್ಚರಿಕೆ

ನವದೆಹಲಿ :ಒಂದು ಗ್ರಾಂ ಡ್ರಗ್ಸ್ ಅನ್ನು ದೇಶಕ್ಕೆ ಪ್ರವೇಶಿಸಲು ಸರ್ಕಾರ ಅನುಮತಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ವಿಜ್ಞಾನ ಭವನದಲ್ಲಿ ಗುರುವಾರ ನಡೆದ 7ನೇ ಅಪೆಕ್ಸ್ ಲೆವೆಲ್ ನಾರ್ಕೋ-ಕೋಆರ್ಡಿನೇಷನ್ ಸೆಂಟರ್ (ಎನ್‌ಸಿಒಆರ್‌ಡಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತವನ್ನು ಮಾದಕವಸ್ತುಗಳಿಂದ ಮುಕ್ತಗೊಳಿಸುವುದಾಗಿ ಪ್ರತಿಜ್ಞೆ ಮಾಡಿದರು. ಪೂರೈಕೆ ಸರಪಳಿಗಳನ್ನು ಕಿತ್ತುಹಾಕಲು ನಿರ್ದಯ ವಿಧಾನವನ್ನು ಅನುಸರಿಸಲು ಮಾದಕ ದ್ರವ್ಯ ವಿರೋಧಿ ಏಜೆನ್ಸಿಗಳಿಗೆ ಸಲಹೆ ನೀಡಿದರು. ಇಡೀ ಡ್ರಗ್ ವ್ಯವಹಾರವು ಈಗ ನಾರ್ಕೋ-ಭಯೋತ್ಪಾದನೆಯೊಂದಿಗೆ ಸಂಬಂಧ ಹೊಂದಿದೆ…

Read More

ಮಂಗಳೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಿ.ಎ ವಿದ್ಯಾರ್ಥಿನಿ ಸಾವು..!

ಮಂಗಳೂರು: ಗದ್ದೆಯಲ್ಲಿ ದನ ಕಟ್ಟಿ ಹಾಕಲು ಮನೆಯಿಂದ ತೆರಳಿದ್ದ ವೇಳೆ ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಿ. ಎ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತಪಟ್ಟ ಸಿ. ಎ ವಿದ್ಯಾರ್ಥಿನಿ ಆಶ್ನಿ (21) ಎಂದು ಗುರುತಿಸಲಾಗಿದೆ. ತಂದೆಯೊಂದಿಗೆ ಗದ್ದೆಗೆ ಹೋಗಿದ್ದ ಆಶ್ನಿ ಜೊತೆಗೆ ಮನೆಯ ಸಾಕು ನಾಯಿ ಕೂಡಾ ತೆರಳಿದ್ದು, ನಾಯಿಗೆ ಮೊದಲು ವಿದ್ಯುತ್ ಶಾಕ್ ತಗುಲಿದೆ. ಶಾಕ್ ಹೊಡೆದಿದ್ದರಿಂದ ನಾಯಿ ಗದ್ದೆಯಲ್ಲಿ ಬಿದ್ದು ಹೊರಳಾಡುವುದನ್ನು ನೋಡಿ ಆಶ್ನಿ ನಾಯಿಯ ರಕ್ಷಣೆಗೆ ಮುಂದಾಗಿದ್ದು…

Read More

ಬೆಳ್ಳಂಬೆಳಗ್ಗೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ..!

ಮಂಗಳೂರು: ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿದೆಡೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಅದರಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಮನೆ, ಕಚೇರಿಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಅವರ ಮನೆಗೆ ಬೆಂಗಳೂರಿನ ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿ ದಾಖಲೆಗಳ ತಪಾಸಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Read More