Headlines

ಸ್ಪೀಕರ್ ಪೀಠದ ಪಕ್ಕ ನಿಂತು ಯು.ಟಿ ಖಾದರ್ ಜೊತೆ ಮಂಗಳೂರು ಕೈ ಮುಖಂಡರ ಫೋಟೋ ಶೂಟ್..! ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಬೆಂಗಳೂರು: ವಿಧಾನಸಭೆ ಸ್ಫೀಕರ್ ಪೀಠಕ್ಕೆ ಸಂಸದೀಯ ಪದ್ದತಿಯಲ್ಲಿ ಭಾರೀ ಮಹತ್ವವಿದೆ. ಆದರೆ ಸ್ಪೀಕರ್‌ ಪೀಠದ ಮುಂದೆ ನಿಂತು ಮಂಗಳೂರಿನ ಕಾಂಗ್ರೆಸ್ ನಾಯಕರು ಫೋಟೋ ಶೂಟ್ ನಡೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ವಿಧಾನಸಭೆಯ ನಿಯಮಾವಳಿಗಳ ಉಲ್ಲಂಘನೆಯಲ್ಲವೇ? ಹಾಗೂ ಸ್ಪೀಕರ್ ಪೀಠದ ಗೌರವದ ನಿಟ್ಟಿನಲ್ಲಿ ಇದು ಸರಿಯಾದ ಕ್ರಮವೇ ಎಂಬ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯದ ಮುಖಂಡರೂ ಹಾಗೂ ಕಾಂಗ್ರೆಸ್ ನಾಯಕ ಕೆ ಅಶ್ರಫ್ ಎಂಬುವವರು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಆಗಿದ್ದರು….

Read More

ಗುರುಪುರ ಸೇತುವೆಯಲ್ಲಿ ಅನಾಥ ಸ್ಥಿತಿಯಲ್ಲಿ ಸ್ಕೂಟರ್, ಚಪ್ಪಲಿ ಪತ್ತೆ, ನದಿಗೆ ಹಾರಿರುವ ಶಂಕೆ

ಮಂಗಳೂರು ಹೊರವಲಯದ ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರದ ಪಾಲ್ಗುಣಿ ನದಿಯ ಸೇತುವೆಯಲ್ಲಿ ಅನಾಥ ಸ್ಥಿತಿಯಲ್ಲಿ ಇಲೆಕ್ಟ್ರಿಕ್ ಸ್ಕೂಟರ್ ಮತ್ತು ಒಂದು ಜೊತೆ ಚಪ್ಪಲಿ ಪತ್ತೆಯಾಗಿದೆ. ಸ್ಕೂಟರ್ ವಾರೀಸುದಾರರು ಇದ್ದಲ್ಲಿ ತಿಳಿಸುವಂತೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈ ಮಧ್ಯೆ ಕಂಕನಾಡಿ ಠಾಣಾ ವ್ಯಾಪ್ತಿಯ ಅಳಪೆ ಗ್ರಾಮದ ಪಡೀಲ್ ನಿವಾಸಿ ಗಣೇಶ್(48)ಎಂಬವರು 22ರ ರಾತ್ರಿ 8 ಗಂಟೆಯಿಂದ KA19 HM 4598 ಸಂಖ್ಯೆಯ ಸ್ಕೂಟರ್ ಜೊತೆ ನಾಪತ್ತೆಯಾದ ಬಗ್ಗೆ ಪತ್ನಿ ಅಶ್ವಿತಾ ಎಂಬವರು ಕಂಕನಾಡಿ ಠಾಣೆಗೆ ದೂರು ನೀಡಿದ್ದಾರೆ….

Read More

ಜುಲೈ.28 ರಂದು ಕುಲಾಲ ಸಂಘ (ರಿ) ಮೂಡಬಿದ್ರೆ ವತಿಯಿಂದ “ಆಟಿಡ್ ಒಂಜಿ ದಿನ”

ಕುಲಾಲ ಸಂಘ (ರಿ) ಮೂಡಬಿದ್ರೆ ವತಿಯಿಂದ ಸ್ವಜಾತಿ ಬಾಂಧವರಿಗಾಗಿ “ಆಟಿಡ್ ಒಂಜಿ ದಿನ ಕಾರ್ಯಕ್ರಮ” ದಿನಾಂಕ 28-೦7-2024,ಆದಿತ್ಯವಾರ ರಂದು ಕುಲಾಲ ಸಂಘದ ನಿವೇಶನದಲ್ಲಿ ನಡೆಯಲಿದೆ. ಸಮಯ ಬೆಳಿಗ್ಗೆ 10.00 ರಿಂದ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ ಸ್ಪರ್ಧೆಗಳ ವಿವರ- ಮಕ್ಕಳ ವಿಭಾಗ : ಲಿಂಬೆ ಚಮಚ ಓಟ ಸಂಗೀತ ಕುರ್ಚಿ ಸ್ಪರ್ಧೆ ಎಲೆಗಳ ಹೆಸರನ್ನು ಗುರುತಿಸಿ ಬರೆಯುವುದು ಚಿತ್ರಕಲೆ ವಿಷಯ : ಆಟಿ ತಿಂಗಳ ಆಚರಣೆಗಳು ಜ್ಞಾಪಕ ಶಕ್ತಿ ಪರೀಕ್ಷೆ ಪುರುಷರ ವಿಭಾಗಹಗ್ಗ- ಜಗ್ಗಾಟ ಮಹಿಳೆಯರ ವಿಭಾಗಹಗ್ಗ…

Read More

ಕರಾವಳಿ ಭಾಗಗಳಲ್ಲಿ BSNL ನೆಟ್ ವರ್ಕ್ ಸಮಸ್ಯೆ..! ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವಂತೆ ಮನವಿ

ಉಡುಪಿ: ಕರಾವಳಿಯ, ಮಲೆನಾಡು ಭಾಗದ ನೆಟ್‌ವರ್ಕ್‌ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಕರಾವಳಿಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕ್ಯಾ| ಬ್ರಿಜೇಶ್‌ ಚೌಟ ಅವರು ಹೊಸದಿಲ್ಲಿಯಲ್ಲಿ ಮಂಗಳವಾರ ಬಿಎಸ್‌ಎನ್‌ಎಲ್‌ ನಿಗಮದ ಆಡಳಿತ ನಿರ್ದೇಶಕ ಹಾಗೂ ಅಧ್ಯಕ್ಷ ರಾಬರ್ಟ್‌ ರವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಚಿಕ್ಕಮಗಳೂರಿನಲ್ಲಿ ದೂರವಾಣಿ ಸಂಪರ್ಕದ ಸಮಸ್ಯೆ ಇದೆ. ಈಗ ಇರುವ ಸುಮಾರು 400ಕ್ಕೂ ಹೆಚ್ಚು ಬಿಎಸ್‌ಎನ್‌ಎಲ್‌ ಟವರ್‌ಗಳು ಮೂಲಭೂತ ಸೌಕರ್ಯ ಕೊರತೆಯಿಂದಾಗಿ ಮೊಬೈಲ್‌ ಬಳಕೆದಾರರಿಗೆ ಸಂಪರ್ಕದ ಕೊರತೆ ಕಾಡುತ್ತಿದೆ. ಜಿಲ್ಲೆಯ ಎಲ್ಲ ಬಿಎಸ್‌ಎನ್‌ಎಲ್‌…

Read More

ಬಂಟ್ವಾಳ: ಗರ್ಭವತಿ ಮಾಡಿದ ಆರೋಪ; ಪ್ರಕರಣ ದಾಖಲು

ಬಂಟ್ವಾಳ: ವಿವಾಹಿತ ವ್ಯಕ್ತಿಯೋರ್ವ ಸಂಬಂಧಿ ಯುವತಿಯನ್ನು ಅಕ್ರಮವಾಗಿ, ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡು ಗರ್ಭವತಿ ಮಾಡಿದ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಮ್ಟಾಡಿ ನಿವಾಸಿ ಗುರುಪ್ರಸಾದ್ ಎಂಬಾತ ಸಂಬಂಧಿ ಯುವತಿಗೆ ಕಳೆದ ಒಂದು ವರ್ಷಗಳಿಂದ ಎರಡು ಬಾರಿ ಇಚ್ಚೆಗೆ ವಿರುದ್ದವಾಗಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಸಂತ್ರಸ್ತ ಯುವತಿ ಠಾಣೆಗೆ ದೂರು‌ ನೀಡಿದ್ದಾರೆ. ಆರೋಪಿಗೆ ಈಗಾಗಲೇ ‌ಮದುವೆಯಾಗಿದ್ದು, ಸಂತ್ರಸ್ತ ಯುವತಿಗೆ ಅನ್ಯಾಯ ಎಸಗಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಲ್ಲದೆ ನ್ಯಾಯ ಒದಗಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ಆರೋಪಿ…

Read More

2024ರ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ ಗಳ ಪಟ್ಟಿ ಬಿಡುಗಡೆ

ನವದೆಹಲಿ:ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದಲ್ಲಿ ಭಾರತದ ಪಾಸ್ಪೋರ್ಟ್ 82 ನೇ ಸ್ಥಾನದಲ್ಲಿದೆ, ಇದು ಭಾರತೀಯರಿಗೆ 58 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಅನುಮತಿಸುತ್ತದೆ. ವಿಶ್ವಾದ್ಯಂತ ಪ್ರಯಾಣ ಮಾಹಿತಿಯ ಅತ್ಯಂತ ವ್ಯಾಪಕ ಮತ್ತು ನಿಖರವಾದ ಡೇಟಾಬೇಸ್ ಅನ್ನು ನಿರ್ವಹಿಸುವ ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ (ಐಎಟಿಎ) ದತ್ತಾಂಶವನ್ನು ಆಧರಿಸಿ ಶ್ರೇಯಾಂಕವನ್ನು ನೀಡಲಾಗಿದೆ. ಭಾರತದ ಪ್ರಸ್ತುತ ಶ್ರೇಯಾಂಕವು ಸೆನೆಗಲ್ ಮತ್ತು ತಜಕಿಸ್ತಾನದಂತಹ ರಾಷ್ಟ್ರಗಳೊಂದಿಗೆ ಸಂಬಂಧ ಹೊಂದಿದೆ. ಸಿಂಗಾಪುರ ಪಾಸ್ಪೋರ್ಟ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ ಎಂದು…

Read More

ಕೇರಳದಲ್ಲಿ ನಿಫಾ ಕೇಸ್ ಪತ್ತೆ: ದ.ಕ ಜಿಲ್ಲೆಯಲ್ಲಿ ಕಟ್ಟೆಚ್ಚರಕ್ಕೆ ಕ್ರಮ

ಮಂಗಳೂರು: ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್‌ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ನಿರ್ಧರ ಮಾಡಿದೆ.  ನಿಫಾ ವೈರಸ್‌ ಸೋಂಕಿಗೆ ತುತ್ತಾಗಿ ಕೇರಳದ ಮಲಪುರಂ ಜಿಲ್ಲೆಯ 14 ವರ್ಷದ ಬಾಲಕ ಇತ್ತೀಚೆಗೆ ಸಾವನ್ನಪ್ಪಿದ್ದ. ಹೀಗಾಗಿ ಕೇರಳಕ್ಕೆ ಹೊಂದಿಕೊಂಡಿರುವ ದ.ಕ. ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ದ.ಕ. ಜಿಲ್ಲೆಗೆ ಶಿಕ್ಷಣ, ಚಿಕಿತ್ಸೆ ಮುಂತಾದ ಕಾರಣಗಳಿಗಾಗಿ ಕೇರಳದಿಂದ ಅನೇಕ ಮಂದಿ ಆಗಮಿಸುತ್ತಾರೆ. ಹೀಗೆ ಆಗಮಿಸಿದವರಲ್ಲಿ ರೋಗ ಲಕ್ಷಣ ಕಂಡುಬಂದರೆ ಕೂಡಲೇ ಆರೋಗ್ಯ ಇಲಾಖೆಗೆ ತಿಳಿಸುವಂತೆ ಆರೋಗ್ಯ…

Read More

ಮಂಗಳೂರು: ಮನಪಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನ; ಸಿಪಿಎಂ ಮುಖಂಡರು, ಕಾರ್ಯಕರ್ತರ ಬಂಧನ

ಮಂಗಳೂರು: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತರನ್ನು ವಜಾಗೊಳಿಸಲು ಒತ್ತಾಯಿಸಿ ಮನಪಾ ಕಚೇರಿ ಮುಂದೆ ಸಿಪಿಐಎಂ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನೆ ನಡೆಸಿದ ಸಿಪಿಐಎಂ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಯಿತು.

Read More

ಮಂಗಳೂರು: ತುರ್ತು ಸಂದರ್ಭಗಳಿಗಾಗಿ 2 ಹೊಸ ಸಹಾಯವಾಣಿ ಸಂಖ್ಯೆಗಳನ್ನ ಬಿಡುಗಡೆ ಮಾಡಿದ ಮೆಸ್ಕಾಂ

ಮಂಗಳೂರು: ಸಾರ್ವಜನಿಕರು ತಮ್ಮ ಗಂಭೀರ ಸಮಸ್ಯೆಗಳನ್ನು ತಿಳಿಸಲು ಹಾಗೂ ತುರ್ತು ಪರಿಸ್ಥಿತಿಗಳನ್ನು ತಿಳಿಸಲು ಸಹಾಯವಾಗುವ ನಿಟ್ಟಿನಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಮೆಸ್ಕಾಂ) ಎರಡು ಹೊಸ ದೂರವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಮೆಸ್ಕಾಂನ 8277883388 ಅಥವಾ 0824-2950953 ಸಂಖ್ಯೆಗೆ ಕರೆ ಮಾಡಬುದಾಗಿದೆ.ಈ ಸಂಖ್ಯೆಗಳನ್ನು ಗಂಭೀರ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಹಾಗೂ ಇತರ ಸಾಮಾನ್ಯ ಸೇವೆಗಳಿಗೆ, ಉಚಿತ ಸಹಾಯವಾಣಿ 1912 ಮತ್ತು ಸ್ಥಳೀಯ ಕಚೇರಿ ಸ್ಥಿರ ದೂರವಾಣಿ ಸಂಖ್ಯೆಗಳನ್ನು ಬಳಸಬೇಕು ಎಂದು ಮೆಸ್ಕಾಂನ ವ್ಯವಸ್ಥಾಪಕ…

Read More

ಇನ್ಮುಂದೆ ಪೊಲೀಸರು ರೀಲ್ಸ್‌ ಮಾಡುವಂತಿಲ್ಲ: ಇಲಾಖೆಯಿಂದ ಬಂತು ಖಡಕ್‌ ಎಚ್ಚರಿಕೆ

ಬೆಂಗಳೂರು: ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ನೀವು ಏನನ್ನು ನೋಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಬೆಳಗ್ಗಿನಿಂದ ಸಂಜೆಯವರೆಗೂ ವಿವಿಧ ರೀತಿಯ ವೀಡಿಯೋಗಳು ವೈರಲ್ ಆಗಿದ್ದು, ಇದರಲ್ಲಿ ಫೈಟಿಂಗ್, ಡ್ಯಾನ್ಸ್ ಮತ್ತು ವಿಚಿತ್ರ ಕೃತ್ಯಗಳನ್ನು ಮಾಡುವ ವೀಡಿಯೊಗಳು ಸೇರಿವೆ. ರೀಲ್ಸ್​​ ಮಾಡಬೇಕು ಹೆಚ್ಚಿನ ಜನರು ವೀಕ್ಷಣೆ ಮಾಡಬೇಕು ಬೇಗನೆ ಜನಪ್ರಿಯತೆ ಪಡೆಯಬೇಕು ಎಂದು ಹಕವರು ಹಂಬಲಿಸುತ್ತಿರುತ್ತಾರೆ. ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರಿಗೆ ಬೆಂಗಳೂರು ನಗರ ಕಮಿಷನರ್ ಬಿ.ದಯಾನಂದ ಅವರು ಬಿಸಿ ಮುಟ್ಟಿಸಿದ್ದಾರೆ. ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರಿಗೆ ಶಿಸ್ತು ಕ್ರಮದ ಎಚ್ಚರಿಕೆ…

Read More