Headlines

ಮಂಗಳೂರು: ಕಾರ್ಗೊ ಶಿಪ್‌ಗೆ ಬೆಂಕಿ- ತೈಲ ಸೋರಿಕೆ ಭೀತಿ..!

ಮಂಗಳೂರು: ಗುಜರಾತಿನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಗೆ ಅತ್ಯಂತ ದಹನಕಾರಿ ತೈಲ ಹಾಗೂ ಘನ ವಸ್ತುವನ್ನು ಗುಜರಾತ್‌ನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಗೆ ಒಯ್ಯುತ್ತಿದ್ದ ಬೃಹತ್ ಸರಕು ಹಡಗಿನಲ್ಲಿ (ಕಾರ್ಗೋ ಕಂಟೈನರ್) ಗೋವಾ -ಕಾರವಾರ ನಡುವೆ ಅರಬಿ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಸ್ತುತ, ಹಡಗು ಮಂಗಳೂರಿನ ಎನ್‌ಎಂಪಿಟಿಗೆ ಸಮೀಪವಿರುವ ಸುರತ್ಕಲ್ ಬಳಿ ಸಮುದ್ರದ ಮಧ್ಯದಲ್ಲಿ ಲಂಗರು ಹಾಕಿದೆ. ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಾಗೂ ಮಲ್ಪೆ ಕರಾವಳಿ ಕಾವಲು ಪಡೆ ಎಸ್ಪಿ ಮಿಥುನ್ ಎಚ್.ಎನ್ ಅವರು ಜೂ.19ರಂದು ಸಂಭವಿಸಿದ…

Read More

ಶಿಕ್ಷಣ ಇಲಾಖೆಯಲ್ಲಿ 1.62 ಕೋಟಿ ರೂ. ಅಕ್ರಮ; DSERT ನಿರ್ದೇಶಕಿ ಸುಮಂಗಲಾ ಅಮಾನತು!

ಬೆಂಗಳೂರು: ರಾಜ್ಯದಲ್ಲಿ ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳು ಭಾರಿ ಸುದ್ದಿಯಾಗುತ್ತಿರುವ ಬೆನ್ನಲ್ಲೇ ರಾಜ್ಯ ಶಿಕ್ಷಣ ಇಲಾಖೆಯಲ್ಲೂ ಅಕ್ರಮ ನಡೆದಿರುವುದು ಬಯಲಾಗಿದೆ. ರಾಜ್ಯ ಶಿಕ್ಷಣ ಇಲಾಖೆ ಅಧೀನದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (DSERT) ಇ-ತ್ಯಾಜ್ಯ ವಿಲೇವಾರಿ ಟೆಂಡರ್‌ನಲ್ಲಿ ಸುಮಾರು 1.62 ಕೋಟಿ ರೂ.ಅಕ್ರಮ ನಡೆದಿರುವುದು ಸಾಬೀತಾದ ಕಾರಣ ಡಿಎಸ್‌ಇಆರ್‌ಟಿ ನಿರ್ದೇಶಕಿ ವಿ. ಸುಮಂಗಲಾ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು…

Read More

ಮಂಗಳೂರು: ಮದ್ಯದ ನಶೆಯಲ್ಲಿ ಮೋರಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು

ಮಂಗಳೂರು: ಮದ್ಯದ ನಶೆಯಲ್ಲಿ ಮೋರಿಗೆ ಬಿದ್ದ ಕುಡುಕನೋರ್ವನನ್ನು ಸಂಚಾರಿ ಪೊಲೀಸರಿಬ್ಬರು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಮಂಗಳೂರಿನ ಪಂಪ್‌ವೆಲ್ ಬಳಿ ಇಂದು ಬೆಳಗ್ಗೆ ನಡೆದಿದೆ. ಆರೇಳು ಅಡಿ ಆಳವಿದ್ದ ಈ ಮೋರಿಯಲ್ಲಿ ಮಳೆಯ ಕಾರಣ ನೀರು ರಭಸವಾಗಿ ಹರಿಯುತ್ತಿತ್ತು. ಕೊಂಚ ಹೆಚ್ಚು ಕಡಿಮೆಯಾದರೂ ಮೋರಿಗೆ ಬಿದ್ದ ವ್ಯಕ್ತಿ ನೀರಿನಲ್ಲಿ ಕೊಚ್ಚಿಹೋಗುವ ಸಾಧ್ಯತೆಯಿತ್ತು. ಇದನ್ನು ಗಮನಿಸಿದ ಮಂಗಳೂರು ನಗರ ಜೆಪ್ಪಿನಮೊಗರು ಸಂಚಾರಿ ಠಾಣೆಯ ಹೆಡ್ ಕಾನ್‌ಸ್ಟೇಬಲ್ ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿ ವಿಲ್ಸನ್ ಫೆರ್ನಾಂಡಿಸ್ ಅವರು ಸ್ವತಃ ಮೋರಿಗಿಳಿದು ಹರಸಾಹಪಟ್ಟು ಮೇಲಕ್ಕೆತ್ತಿ ವ್ಯಕ್ತಿಯನ್ನು…

Read More

‘ಕಾರ್ಗಿಲ್ ವಿಜಯ ದಿವಸ’ಕ್ಕೆ 25 ವರ್ಷ – ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಇಂದು ಪ್ರಧಾನಿ ಮೋದಿ ಭೇಟಿ

ಕಾರ್ಗಿಲ್ ವಿಜಯವು ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ತಿರುವು ತಂದುಕೊಟ್ಟ ಕ್ಷಣವಾಗಿದೆ. 1999ರ ಜುಲೈ 26 ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಸ್ಮರಿಸುವ ದಿನ. ಕಾರ್ಗಿಲ್, ಲಡಾಖ್‌ನಲ್ಲಿ ಈ ಹಿಂದೆ ಪಾಕಿಸ್ತಾನಿ ಪಡೆಗಳಿಂದ ವಶಪಡಿಸಿಕೊಂಡಿದ್ದ ಆಯಕಟ್ಟಿನ ಪ್ರಮುಖ ಪ್ರದೇಶವನ್ನು ಭಾರತೀಯ ಸೇನೆಯು ಪುನಃ ಪಡೆದುಕೊಂಡ ದಿನ. ಈ ದಿನವು ದೇಶದ ಸಾರ್ವಭೌಮತ್ವವನ್ನು ಶೌರ್ಯದಿಂದ ರಕ್ಷಿಸಿದ ಭಾರತೀಯ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು, ಅವರ ಬಲಿದಾನವನ್ನು ಕೊಂಡಾಡುವ, ಭಾರತೀಯರೆಲ್ಲರೂ ಹೆಮ್ಮೆಯಿಂದ ಸ್ಮರಿಸುವ ದಿನ. ಪಾಕ್ ಹಾಗೂ…

Read More

ಉಡುಪಿ: ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದ ಸಂಸದ ಕೋಟ

ಉಡುಪಿ: ಕರಾವಳಿ ಮಲೆನಾಡಿನ ರೈಲ್ವೆ ಇಲಾಖೆಯ ಸುಧಾರಣೆ ನಿಟ್ಟಿನಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಕೇಂದ್ರ ರೈಲ್ವೆ ಇಲಾಖೆಯ ಸಚಿವ ಅಶ್ವಿನಿ ವೈಷ್ಣವ್‌ರವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈಗಿನ ಪಂಚಗಂಗಾ ರೈಲಿನ ಬಳಕೆದಾರರನ್ನು ಹೊರತುಪಡಿಸಿ ತಡರಾತ್ರಿ ಉಡುಪಿ ಕುಂದಾಪುರ ಕಾರವಾರ ಕಡೆ ಪ್ರಯಾಣ ಬೆಳೆಸುವ ಅಸಂಖ್ಯಾತ ರೈಲು ಬಳಕೆದಾರರಿಗಾಗಿ ಪಡೀಲ್ ಬೈಪಾಸ್ ಮೂಲಕ ಹೊಸ ಬೆಂಗಳೂರು ಕಾರವಾರ ನಡುವೆ ರೈಲಿಗೆ ಮನವಿ ಮಾಡಿದರು.ಈಗಾಗಲೇ ಬರುತ್ತಿರುವ ಎರ್ನಾಕುಲಂ ನಿಜಾಮುದ್ದೀನ್ ರೈಲನ್ನು ಕುಂದಾಪುರದಲ್ಲಿ ನಿಲ್ಲಿಸುವಂತೆ…

Read More

ಶಿರೂರು ಗುಡ್ಡ ಕುಸಿತ: ಮತ್ತೋರ್ವ ಚಾಲಕ ನಾಪತ್ತೆ

ಶಿರೂರು ಬಳಿ ಗುಡ್ಡ ಕುಸಿತ ನಡೆದು ಇಂದಿಗೆ 10 ದಿನಗಳು ಕಳೆದಿದ್ದು, 8 ಜನರ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಮೂವರಿಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಜೊತೆಗೆ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಗಂಗಾವಳಿ ನದಿಯಲ್ಲಿ ಇರುವುದು ನಿನ್ನೆ ಖಚಿತವಾಗಿದ್ದು, ಬೂಮ್‌ ಫೋಕ್ಲೇನ್‌ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಇದೀಗ ಘಟನೆಯಲ್ಲಿ ಮತ್ತೋರ್ವ ತಮಿಳುನಾಡು ಮೂಲದ ಲಾರಿ ಚಾಲಕ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ.ಶರವಣ ನಾಪತ್ತೆ ಆದ ಬಗ್ಗೆ ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಆಗಿರುವ ಶರವಣ ಅವರ ಮಾವ ಸೆಂದೀಲ್‌…

Read More

ಇನ್ಮುಂದೆ ʻATMʼ ನಲ್ಲಿ ʻಕಾರ್ಡ್ʼ ಅಗತ್ಯವಿಲ್ಲ, ಈ ರೀತಿ ʻUPIʼ ಮೂಲಕ ಹಣ ಪಡೆಯಬಹುದು

ನವದೆಹಲಿ :ಎಟಿಎಂಗೆ ಹೋಗಿ ನಿಮ್ಮ ಪರ್ಸ್ ಮರೆತು ಸುಸ್ತಾಗಿದ್ದೀರಾ? ಚಿಂತಿಸಬೇಡಿ ನಿಮಗೆ ಬೇಕಾಗಿರುವುದು ಸ್ಮಾರ್ಟ್ ಫೋನ್. ಯುಪಿಐ ಎಟಿಎಂ ಕ್ಯಾಶ್ ವಿತ್ ಡ್ರಾ ವೈಶಿಷ್ಟ್ಯದೊಂದಿಗೆ, ನಿಮ್ಮ ಸ್ಮಾರ್ಟ್ ಫೋನ್ ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು. ಇಂಟರ್‌ಆಪರೇಬಲ್ ಕಾರ್ಡ್ಲೆಸ್ ಕ್ಯಾಶ್ ವಿತ್ ಡ್ರಾವಲ್ (ಐಸಿಸಿಡಬ್ಲ್ಯೂ) ಸೇವೆ ಎಂದೂ ಕರೆಯಲ್ಪಡುವ ಯುಪಿಐ-ಎಟಿಎಂ, ಗ್ರಾಹಕರು ತಮ್ಮ ಭೌತಿಕ ಕಾರ್ಡ್ ಅಗತ್ಯವಿಲ್ಲದೆ ವಿವಿಧ ಬ್ಯಾಂಕುಗಳ ಎಟಿಎಂಗಳಿಂದ ಅನುಕೂಲಕರವಾಗಿ ಹಣವನ್ನು ಹಿಂಪಡೆಯಲು ಸಹಾಯ ಮಾಡುತ್ತದೆ. ನೀವು ಹೊಂದಿರಬೇಕಾದ ಏಕೈಕ ವಿಷಯವೆಂದರೆ ನಿಮ್ಮ ಸ್ಮಾರ್ಟ್ಫೋನ್. ಹಣವನ್ನು…

Read More

ರಾಜ್ಯದ ಎಲ್ಲ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಿ: ಶರಣ್‌ ಪಂಪ್‌ವೆಲ್‌

ಮಂಗಳೂರು: ಶೃಂಗೇರಿ ದೇವಸ್ಥಾನದಂತೆ ರಾಜ್ಯದ ಎಲ್ಲ ದೇವಸ್ಥಾನಗಳಲ್ಲೂ ಧಾರ್ಮಿಕ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ವಿಶ್ವ ಹಿಂದೂ ಪರಿಷದ್ ನ ಸಹ ಕಾರ್ಯದರ್ಶಿ ಶರಣ್ ಕುಮಾರ್ ಪಂಪ್‌ವೆಲ್‌ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ರಾಜ್ಯ ಸರಕಾರಕ್ಕೆ ಮನವಿ ಮಾಡಿದ ಅವರು, ಇತ್ತೀಚಿಗೆ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರ ಶೃಂಗೇರಿ ಶ್ರೀ ಶಂಕರ ಮಠದವರು ವಸ್ತ್ರ ಸಂಹಿತೆ ಯನ್ನು ಜಾರಿ ಮಾಡ್ದಿದು ಕ್ಷೇತ್ರಕ್ಕೆ ಬರುವವರು ಹಿಂದೂ ಸಂಪ್ರದಾಯದಂತೆ ಉಡುಗೆ ತೊಡುಗೆ ಧರಿಸಿ ಬರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇವರ…

Read More

ಸುರತ್ಕಲ್: ಭಾರಿ ಮಳೆ ಗಾಳಿಗೆ ತಡೆಗೋಡೆ ಕುಸಿದು 17 ವರ್ಷದ ಬಾಲಕ ಮೃತ್ಯು

ಮಂಗಳೂರು: ಗಾಳಿ ಮಳೆಗೆ ಮನೆ ಕುಸಿದು ಬಾಲಕ ಸಾವನ್ನಪ್ಪಿದ ಘಟನೆ ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಜೋಕಟ್ಟೆ ಬಳಿ ನಡೆದಿದೆ.  ಮೃತ ದುರ್ದೈವಿಯನ್ನು ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮಂಗಳೂರು ಭಾಗದಲ್ಲಿ ಭಾರೀ ಗಾಳಿ ಮಳೆ ಸುರಿಯುತ್ತಿತ್ತು. ಭಾರೀ ಗಾಳಿ-ಮಳೆ ಪರಿಣಾಮ ಜೋಕಟ್ಟೆಯ ಮನೆಯೊಂದರ ಮೇಲೆ ತಡೆಗೋಡೆ ಕುಸಿದಿದೆ.ಗ್ರಹಚಾರದ ಅಥಿತಿಯಾಗಿದ್ದ ಬಾಲಕನ ಮೇಲೆ ಗೋಡೆ ಕುಸಿದು ಸಾವನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಬಂದಿದ್ದು ಬಾಲಕನ ಮೃತದೇಹವನ್ನು…

Read More

ಮಂಗಳೂರು: ಜೈಲಿನಲ್ಲಿ ಖೈದಿಗಳಿಗೆ ಪೊಲೀಸ್‌ ಶಾಕ್‌ ; 150 ಪೊಲೀಸರಿಂದ ಏಕಕಾಲದಲ್ಲಿ ರೇಡ್ –ಗಾಂಜಾ, ಡ್ರಗ್ಸ್ ಪತ್ತೆ

ಮಂಗಳೂರು:ನಗರದ  ಜೈಲು ಮೇಲೆ  ಮಂಗಳೂರು ಪೊಲೀಸ್ ಕಾರ್ಯಾಚರಣೆ ನಡೆಸಿದ್ದು ಈ  ವೇಳೆ ಅಲ್ಲಿ, ಗಾಂಜಾ ಮತ್ತು ಡ್ರಗ್ಸ್ ಪತ್ತೆಯಾದ ಆಘಾತಕಾರಿ ಘಟನೆ ನಡೆದಿದೆ. ಬುಧವಾರ ಮುಂಜಾನೆ ನಾಲ್ಕು ಗಂಟೆ ವೇಳೆಗೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಇಪ್ಪತ್ತೈದು ಮೊಬೈಲ್, ಒಂದು ಬ್ಲೂ ಟೂತ್ ಡಿವೈಸ್, ಐದು ಇಯರ್ ಪೋನ್, ಒಂದು ಪೆನ್ ಡ್ರೈವ್, ಐದು ಚಾರ್ಜರ್, ಒಂದು ಕತ್ತರಿ ಸೇರಿದಂತೆ ವಿವಿಧ ವಸ್ತುಗಳನ್ನು ಪೊಲೀಸರು  ವಶಕ್ಕೆ ಪಡೆದಿದ್ದಾರೆ . ಜತೆಗೆ ಜೈಲು ಖೈದಿಗಳ ಜೊತೆಗಿದ್ದ ಗಾಂಜಾ…

Read More