Headlines

ಅನರ್ಹತೆ ಬಳಿಕ ಕುಸ್ತಿಗೆ ವಿದಾಯ ಘೋಷಿಸಿದ ವಿನೇಶ್​ ಫೋಗಟ್: ಎಕ್ಸ್​​​​​​ ಪೋಸ್ಟ್​ ಮೂಲಕ ಭಾವನಾತ್ಮಕ ಸಂದೇಶ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇನ್ನೇನು ಚಿನ್ನದ ಪದಕದ ಬೇಟೆಗೆ ಸಿದ್ಧರಾಗಿದ್ದ ಭಾರತದ ಗಟ್ಟಿಗಿತ್ತಿ ವಿನೇಶ್ ಫೋಗಾಟ್‌ ರವರನ್ನು ಪಂದ್ಯದಿಂದ ಅನರ್ಹಗೊಳಿಸಿದ್ದರು. ಈ ಬೆನ್ನಲ್ಲೇ ವಿನೇಶ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್‌ ಹಾಕುವುದರ ಮೂಲಕ ಕುಸ್ತಿ ಪಂದ್ಯಕ್ಕೆ ವಿದಾಯ ಹೇಳಿದ್ದಾರೆ.  ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ ಭಾವುಕ ಸಂದೇಶ ಪ್ರಕಟಿಸಿರುವ ಅವರು ‘ಅಮ್ಮಾ ನನ್ನ ವಿರುದ್ದ ಕುಸ್ತಿ ಗೆದ್ದಿದೆ, ನಾನು ಸೋಲನ್ನು ಅನುಭವಿಸಿದ್ದೇನೆ” ಎಂದಿದ್ದಾರೆ.ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ನಲ್ಲಿ ಭಾರತದ ಮಹಿಳೆ ಕುಸ್ತಿ ಪಂದ್ಯದಲ್ಲಿ ಫೈನಲ್‌ಗೆ ತಲುಪಿರುವುದು. ಆದರೆ…

Read More

ಮಂಗಳೂರು: ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ..!

ಮಂಗಳೂರು ನಗರದ ತೊಕ್ಕೊಟ್ಟು ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿದ್ದ ತಾಯಿ ಹಾಗೂ ಮಕ್ಕಳಿಬ್ಬರು ನಾಪತ್ತೆಯಾದ ಘಟನೆ ನಡೆದಿದೆ. ಸ್ಕೈಹೈಟ್ಸ್‌ ಅಪಾರ್ಟ್‌ಮೆಂಟ್‌ ನಿವಾಸಿ ಮಂಜುಳಾ (31) ಮತ್ತು ಅವರ ಮಕ್ಕಳಾದ ಕೃಷ್ಣ (8) ಹಾಗೂ ಖುಷಿ (6) ನಾಪತ್ತೆಯಾದವರು. ಮಂಜುಳಾ ಅವರು ಜು. 29ರಂದು ಬೆಳಗ್ಗೆ 10 ಗಂಟೆಗೆ ಫ್ಲ್ಯಾಟ್‌ನಿಂದ ಹೊರಟಿದ್ದು, ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗಿದ್ದಾರೆ. ಅವರ ಪತಿ ದ್ಯಾಮಣ್ಣ ಮೇಟಿ ಅವರು ಆ. 3ರಂದು ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಅವರು ಪತ್ತೆಯಾದಲ್ಲಿ ಉಳ್ಳಾಲ…

Read More

ಮಂಗಳೂರು: 13 ವರ್ಷದ ಬಾಲಕಿ ಕೊಲೆ ಪ್ರಕರಣ- ಅತ್ಯಾಚಾರಗೈದು ಕೊಲೆ, ಆರೋಪಿಯ ಬಂಧನ..!

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪಣಂಬೂರು ಜೋಕಟ್ಟೆಯಲ್ಲಿ ಮಂಗಳವಾರ  ನಡೆದಿದ್ದ ಬೆಳಗಾವಿ ಮೂಲದ ಬಾಲಕಿಯ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು,ಪ್ರಕರಣ ಹೊಸ ತಿರುವು ಪಡೆದಿದೆ. ಬೆಳಗಾವಿ ಜಿಲ್ಲೆಯ ಪ್ರಸ್ತುತ ಜೋಕಟ್ಟೆಯಲ್ಲಿ ವಾಸವಿದ್ದ ಫಕೀರಪ್ಪ ಬಂಧಿತ ಆರೋಪಿಯಾಗಿದ್ದು ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಕತ್ತು ಹಿಸುಕಿ ಕೊಲೆಗೈದ ಬಗ್ಗೆ ಪೊಲೀಸ್ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ.   ಜೋಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಹನುಮಂತಪ್ಪ ಎಂಬವರ ತಮ್ಮನ ಮಗಳು ಈಕೆಯಾಗಿದ್ದು  ಜಿಲ್ಲೆಯ ಹಾಸ್ಟೆಲ್‌ ವೊಂದರಲ್ಲಿ ಕಲಿಯುತ್ತಿದ್ದ ಈಕೆ ಬಿದ್ದು…

Read More

ಹೆಜಮಾಡಿ ಟೋಲ್ ನಲ್ಲಿ ದಾಂಧಲೆ : ಬಂಟ್ವಾಳದ ಯುವಕ ಅರೆಸ್ಟ್

ಪಡುಬಿದ್ರಿ: ಹೆಜಮಾಡಿಯ ಕೆ. ಆರ್ ಟೋಲ್ ಗೇಟ್‌ನಲ್ಲಿ ಮಂಗಳವಾರ ಬೆಳಿಗ್ಗೆ ದಾoಧಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ದಕ್ಷಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ ಸಲೀಂ ಎಂದು ಗುರುತಿಸಲಾಗಿದೆ. ಬೆಳಗ್ಗೆ 9.20ರ ವೇಳೆ ಬಂಟ್ವಾಳದಿಂದ ಸ್ನೇಹಿತರ ಜತೆ ಉಡುಪಿಗೆ ತೆರಳುತ್ತಿದ್ದ ಸಲೀಂ ಎಂಬಾತ ಹೆಜಮಾಡಿಯ ಟೋಲ್ ತಪ್ಪಿಸಲು ಮುಖ್ಯ ಟೋಲ್ ಬದಲು ಒಳ ರಸ್ತೆಯ ಟೋಲ್ನಲ್ಲಿ ತನ್ನ ವಾಹನ ತಂದ ಸಂದರ್ಭ ಟೋಲ್ ಸಿಬ್ಬಂದಿ ಅವನನ್ನು ತಡೆದಿದ್ದರು….

Read More

ಉಡುಪಿ ನಗರದಲ್ಲಿ ಹಾಡಹಗಲೇ ಕಾರಿನಲ್ಲಿ ರಾಸಲೀಲೆ..! ಸಾರ್ವಜನಿಕರಿಂದ ತರಾಟೆ

ಉಡುಪಿ: ನಗರದ ಕವಿ ಮುದ್ದಣ ಮಾರ್ಗದಿಂದ ಚಿತ್ತರಂಜನ್ ಸರ್ಕಲ್ ಸಂಪರ್ಕಿಸುವ ರಸ್ತೆಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು ಕಾರಿನಲ್ಲೇ ಜೋಡಿಯೊಂದು ಕಾಮದಾಟ ನಡೆಸಿ ಸಿಕ್ಕಿಬಿದ್ದಿದೆ. ಕಾರು ಪಾರ್ಕ್ ಮಾಡಿ ಹಾಡ ಹಗಲಿನಲ್ಲೇ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಯುವ ಜೋಡಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಬಳಿಕ ಪರಾರಿಯಾಗಿದೆ. ಕೆಂಬಣ್ಣದ ಕಾರಿನ ಗಾಜಿಗೆ ಒಳಭಾಗದಿಂದ ಕಪ್ಪು ಬಣ್ಣದ ಪರದೆ ಹಾಕಿಕೊಂಡಿದ್ದು ಕಾರಿನ ಅಲುಗಾಟ ಕಂಡು ಸಂಶಯಗೊಂಡ ಸ್ಥಳೀಯರು ಇಣುಕಿ ನೋಡಿದ್ದಾರೆ. ಈ ವೇಳೆ ಜೋಡಿಯ ಅನೈತಿಕ ಕೃತ್ಯ…

Read More

ವಿನೇಶ್‌ ಫೋಗಟ್‌ ಅನರ್ಹ : ಬಲವಾಗಿ ವಿರೋಧಿಸುವಂತೆ ಪಿ.ಟಿ.ಉಷಾಗೆ ಪ್ರಧಾನಿ ಮೋದಿ ಸೂಚನೆ

ನವದೆಹಲಿ: ಒಲಿಂಪಿಕ್ಸ್ ಕ್ರೀಡಾಕೂಟದಿಂದ ವಿನೇಶ್‌ ಫೋಗಟ್‌ ಅನರ್ಹಗೊಳಿಸಿರುವುದಕ್ಕೆ ಪ್ರಬಲ ವಿರೋಧವನ್ನು ದಾಖಲಿಸಿ ಪ್ರಕರಣವನ್ನು ಖುದ್ದಾಗಿ ನಿಗಾ ವಹಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಅವರಿಗೆ ಸೂಚನೆ ನೀಡಿದ್ದಾರೆ. ಭಾರತೀಯ ಕುಸ್ತಿಪಟು ವಿನೇಶ್‌ ಫೋಗಟ್‌ ನಿನ್ನೆ ಮೂರು ಪಂದ್ಯಗಳನ್ನು ಗೆದ್ದು ಫೈನಲ್‌ ಪ್ರವೇಶಿಸಿದ್ದರು. ಇಂದು ಅಮೆರಿಕದ ಹಿಲ್ಡೆಬ್ರಾಂಡ್ಟ್ ಸಾರಾ ಆನ್‌ ರೊಂದಿಗೆ ಅಂತಿಮ ಪಂದ್ಯಾವಳಿಯಲ್ಲಿ ಸ್ಪರ್ಧಿಸುವ ಮುನ್ನ ದೇಹತೂಕ ಹೆಚ್ಚಾದ ಕಾರಣಕ್ಕೆ ಅನರ್ಹಗೊಂಡಿದ್ದಾರೆ. ಇದನ್ನು ಬಲವಾಗಿ ವಿರೋಧಿಸುವಂತೆ ಪ್ರಧಾನಮಂತ್ರಿ ಪಿ.ಟಿ.ಉಷಾ ಅವರಿಗೆ ಸೂಚಿಸಿದ್ದಾರೆ.ವಿಶ್ವ…

Read More

ಹಿಂದೂಗಳ ಮನೆ ಮೇಲೆ ಭೀಕರ ದಾಳಿ, ಕೊಲೆಗೂ ಪ್ರಯತ್ನ: ಬಾಂಗ್ಲಾದೇಶ ಪೂರ್ತಿ ಧಗಧಗ..

ಹಿಂದೂಗಳ ಮನೆ ಮೇಲೆ ನೆರೆಯ ಬಾಂಗ್ಲಾದೇಶದಲ್ಲಿ ಈಗ ಹಿಂಸಾತ್ಮಕ ದಾಳಿ ಆರಂಭ ಆಗಿದ್ದು ಹಿಂದೂಗಳ ಹತ್ಯೆಗೂ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಇದೀಗ ದೇಶ ಬಿಟ್ಟು ಓಡಿ ಬಂದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಈ ಸಮಯದಲ್ಲೇ ಧಗಧಗ ಹೊತ್ತಿ ಉರಿಯುತ್ತಿರುವ ಬಾಂಗ್ಲಾದೇಶದಲ್ಲಿ, ಹಿಂದೂಗಳ ಮನೆ ಮೇಲೆ ಹಿಂಸಾತ್ಮಕ ದಾಳಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಾಂಗ್ಲಾದೇಶ ಇವತ್ತು ಸ್ವಾತಂತ್ರ್ಯ ಪಡೆದು ನೆಮ್ಮದಿಯಾಗಿ ಸ್ವತಂತ್ರ ದೇಶವಾಗಿ ಜೀವನವನ್ನು ನಡೆಸುತ್ತಿದೆ ಎಂದರೆ ಅದಕ್ಕೆ…

Read More

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಲೆಕ್ಟ್ರಿಕ್ ಅಟೋರಿಕ್ಷಾಗಳ‌ ಮುಕ್ತ ಸಂಚಾರಕ್ಕೆ ದ.ಕ. ಜಿಲ್ಲಾಧಿಕಾರಿ ಅನುಮತಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಲೆಕ್ಟ್ರಿಕ್ ಆಟೋರಿಕ್ಷಾಗಳು ಹಾಗೂ ಮೆಥನಾಲ್ ಮತ್ತು ಇಥೆನಾಲ್ ಬಳಸಿ ಸಂಚರಿಸುವ ಆಟೋರಿಕ್ಷಾಗಳಿಗೆ ಮುಕ್ತವಾಗಿ ಸಂಚರಿಸಲು ಅನುಮತಿ ನೀಡಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಆದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಆಟೋರಿಕ್ಷಾಗಳೊಂದಿಗೆ ಇ- ಆಟೋರಿಕ್ಷಾಗಳು ಹಾಗೂ ಮೆಥನಾಲ್ ಮತ್ತು ಇಥನಾಲ್ ಬಳಸಿ ಸಂಚರಿಸುವ ಆಟೋರಿಕ್ಷಾಗಳಿಗೆ ವಲಯ 1 ರಲ್ಲಿ ನೀಲಿ ಬಣ್ಣದ ಹಾಗೂ ವಲಯ 2 ರಲ್ಲಿ ಹಳದಿ ಬಣ್ಣದ ಸ್ಟಿಕ್ಕರ್ ಅಥವಾ ಗುರುತಿನ ಸಂಖ್ಯೆಗಳನ್ನು ಪೋಲೀಸ್ ಇಲಾಖೆಯಿಂದ ಪಡೆದು ಅಂಟಿಸಲು ಜಿಲ್ಲಾಧಿಕಾರಿಗಳ ದಿನಾಂಕ…

Read More

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಪ್ರಶ್ನಿಸಿದ್ದ ಅರ್ಜಿ ವಜಾ

ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ಬಗ್ಗೆ ಕರ್ನಾಟಕದಲ್ಲಿ ಚರ್ಚೆಗಳು ನಡೆಯುತ್ತಿದೆ. ರಾಜ್ಯ ಸರ್ಕಾರ ಈ ಕುರಿತ ತೀರ್ಮಾನಕ್ಕೆ ತಾತ್ಕಾಲಿಕ ತಡೆ ನೀಡಿದೆ. ಈ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಕರ್ನಾಟಕದಲ್ಲಿ ಕೈಗಾರಿಕೆಗಳು-ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳ ಉದ್ಯೋಗಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ (ಕನ್ನಡಿಗರಿಗೆ) ಉದ್ಯೋಗ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಪ್ರಶ್ನಿಸಿ ಬಿಲೇಕಹಳ್ಳಿಯ ಸೋಮೇಶ್ವರ ಲೇಔಟ್‌ನ ಲೆಕ್ಕ ಪರಿಶೋಧಕಿ…

Read More

ಮಂಗಳೂರು : 13ರ ಹರೆಯದ ಬಾಲಕಿಯ ಬರ್ಬರ ಹತ್ಯೆ..! ಬೆಚ್ಚಿಬಿದ್ದ ಗ್ರಾಮಸ್ಥರು

ಮಂಗಳೂರು : ಜೋಕಟ್ಟೆಯಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಬರ್ಬರ ಹತ್ಯೆ ನಡೆದಿದೆ. ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸವಾಗಿದ್ದು ಅವರ ಮನೆಯಲ್ಲಿ ಕಳೆದ 4 ದಿನಗಳ ಹಿಂದೆ ತಮ್ಮನ ಮಗಳಾದ 13 ವರ್ಷದ ಬಾಲಕಿಯು ಕೈ ನೋವಿನ ಚಿಕಿತ್ಸೆ ಪಡೆಯಲು ಬೆಳಗಾವಿಯಿಂದ ಬಂದು ಉಳಿದುಕೊಂಡಿದ್ದಳು . ಇಂದು ಮಂಗಳವಾರ ಜೋಕಟ್ಟೆಯ ಬಾಡಿಗೆ ಮನೆಯಿಂದ ಮನೆಯಲ್ಲಿರುವವರೆಲ್ಲಾ ಕೆಲಸಕ್ಕೆ ಹೋದ ನಂತರ ಬೆಳ್ಳಿಗ್ಗೆ ಸರಿ ಸುಮಾರು 10.30 ಗಂಟೆಗೆ ಅಪ್ರಾಪ್ತ ಮೃತ ಬಾಲಕಿಯ ತಾಯಿಯು…

Read More