ಪೊಲೀಸ್ ವ್ಯಾನ್ ನಲ್ಲಿ ಗಣೇಶ: ಪ್ರಧಾನಿ ಮೋದಿ, ಬಿಜೆಪಿ, VHP ಆಕ್ರೋಶ
ಬೆಂಗಳೂರು: ವಿಘ್ನಹರ್ತ ಅಥವಾ ಅಡೆತಡೆಗಳನ್ನು ನಿವಾರಿಸುವವನು ಎಂದು ಕರೆಯಲ್ಪಡುವ ಗಣೇಶನ ವಿಗ್ರಹವನ್ನು ಬೆಂಗಳೂರಿನಲ್ಲಿ ಪ್ರತಿಭಟನಾಕಾರರೊಂದಿಗೆ ಪೊಲೀಸ್ ವ್ಯಾನ್ ಒಳಗೆ ಕೂರಿಸಲಾಯಿತು. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ನಡೆದ ದಾಳಿಯನ್ನು ವಿರೋಧಿಸಿ ಬೆಂಗಳೂರಿನ ಟೌನ್ ಹಾಲ್ ಬಳಿ ಜಮಾಯಿಸಿದ ಬಂಧಿತ ಪ್ರತಿಭಟನಾಕಾರರನ್ನು ಸಾಗಿಸಲು ನಿಯೋಜಿಸಲಾಗಿದ್ದ ವಾಹನದೊಳಗೆ ವಿಗ್ರಹದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ. ಭಾರತೀಯ ಜನತಾ ಪಕ್ಷ ಮತ್ತು ವಿಶ್ವ ಹಿಂದೂ ಪರಿಷತ್ ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ “ಬಂಧಿತರಲ್ಲಿ ದೇವರು ಕೂಡ ಇದ್ದಾನೆ” ಎಂದು…

