2 ದಿನ ಭಾರೀ ಮಳೆ ಮುನ್ಸೂಚನೆ : `IMD’ಯಿಂದ `ರೆಡ್ ಅಲರ್ಟ್’ ಘೋಷಣೆ!

ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ ಎರಡು ದಿನಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಕರಾವಳಿ ಮತ್ತು ಒಳನಾಡಿನಲ್ಲಿ ಭಾರೀ ಮಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ಸೋಮವಾರವೂ ಈ ಪ್ರದೇಶಗಳಲ್ಲಿ ವಿಪರೀತ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದೇ ಸಮಯದಲ್ಲಿ, 24 ಮತ್ತು…

Read More

ಸುಳ್ಯ : ಕೆಎಸ್ಆರ್ ಟಿಸಿ ಬಸ್ ನಲ್ಲಿ ಹಿಂದೂ ಯುವತಿಗೆ ಕಿರುಕುಳ ನೀಡಿದ ಮುಸ್ಲಿಂ ಯುವಕನಿಗೆ ಧರ್ಮದೇಟು

ಸುಳ್ಯ : ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕುಳಿತಿದ್ದ ಹಿಂದೂ ಯುವತಿಗೆ ಕಿರುಕುಳ ನೀಡಿದ ಮುಸ್ಲಿಂ ಯುವಕನಿಗೆ ತಂಡವೊಂದು ಹಲ್ಲೆ ಮಾಡಿದ ಘಟನೆ ಸುಳ್ಯ ಪೈಜಾರು ಎಂಬಲ್ಲಿ ನಡೆದಿದೆ.ಕಿರುಕುಳ ನೀಡಿದ ಯುವಕನನ್ನು ಕಾಸರಗೋಡಿನ ಅಡೂರು ನಿವಾಸಿ ಮಹಮ್ಮದ್ ನಿಯಾಝ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಸುಬ್ರಹ್ಮಣ್ಯ ಕ್ಕೆ ಬರುತ್ತಿದ್ದ ಸರಕಾರಿ ಬಸ್ ನಲ್ಲಿ ಬರುತ್ತಿದ್ದ ಯುವತಿಗೆ ಮಹಮ್ಮದ್ ನಿಯಾಝ್ ಕಿರುಕುಳ ನೀಡಿದ್ದಾನೆ. ಈ ವೇಳೆ ಸುಬ್ರಹ್ಮಣ್ಯ ದಲ್ಲಿ ಬಸ್ ನಿಂದ ಇಳಿದ ಬಳಿಕ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿದ್ದ…

Read More

BREAKING: ಬೆಂಗಳೂರಿನಲ್ಲಿ ಮಹಾಲಕ್ಷ್ಮೀ ಭೀಕರ ಕೊಲೆ ಕೇಸ್ : ಆರೋಪಿಯ ಗುರುತು ಪತ್ತೆ!

ಬೆಂಗಳೂರು : ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ಮಹಿಳೆಯ ಭೀಕರ ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ಆರೋಪಿಯ ಗುರುತು ಪತ್ತೆಯಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಲಕ್ಷ್ಮೀ ಕೊಲೆ ಪ್ರಕರಣ ಸಂಬಂಧ ಇದೀಗ ಆರೋಪಿಯ ಗುರುತು ಪತ್ತೆಯಾಗಿದ್ದು, ಆರೋಪಿಯ ಹುಡುಕಾಟ ಮುಂದುವರೆದಿದೆ. ಆರೋಪಿ ಹೊರರಾಜ್ಯದವನಗಿದ್ದು, ಬೆಂಗಳೂರಿನಲ್ಲೇ ವಾಸವಾಗಿದ್ದ ಎಂದು ತಿಳಿಸಿದ್ದಾರೆ. ಬೆಂಗಳೂರಿನ ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ, 50ಕ್ಕೂ ಹೆಚ್ಚು ತುಂಡು…

Read More

ತಿರುಪತಿ ಪ್ರಸಾದದಲ್ಲಿ ಅಪವಿತ್ರ – ಶೃಂಗೇರಿ ಮಹಾಸ್ವಾಮಿಗಳಿಂದ ಉಪವಾಸ, ಮೌನ ವ್ರತ

ಬೆಂಗಳೂರು: ತಿರುಪತಿ ಪ್ರಸಾದದ ವಿಷಯದಲ್ಲಿ ನಡೆದ ಅಪವಿತ್ರ ಶುದ್ಧಿಗಾಗಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರಭಾರತಿ ಮಹಾಸ್ವಾಮಿಗಳು ಉಪವಾಸ ಹಾಗೂ ಮೌನ ವ್ರತ ಮಾಡಲಿದ್ದಾರೆ. ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನಾಂಶ ಹಾಗೂ ಮೀನಿನ ಎಣ್ಣೆ ಕಲಬೆರಕೆ ಅಪವಿತ್ರ ಶುದ್ಧಿಗಾಗಿ ಶ್ರೀಗಳು ಮೂರು ದಿನಗಳ ಕಾಲ ಉಪವಾಸ ಹಾಗೂ ಮೌನ ವ್ರತ ಕೈಗೊಳ್ಳಲಿದ್ದಾರೆ. ಆಗಿರುವ ಅಪಚಾರಕ್ಕೆ ಸಾರ್ವಜನಿಕರು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಶ್ರೀಗಳು ಕರೆ ನೀಡಿದ್ದಾರೆ. ಯಾವುದೇ ಪುರೋಹಿತರ ಅಗತ್ಯವಿಲ್ಲದೇ ಸಾರ್ವಜನಿಕರು ಮನೆಯಲ್ಲಿಯೇ ಮೂರು ರೀತಿಯ ಸರಳ ಪ್ರಾಯಶ್ಚಿತ್ತ ವಿಧಾನ…

Read More

ಉಡುಪಿ : ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ

ಉಡುಪಿ: ಉಡುಪಿಯ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ಕಟ್ಟಡಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಆಸ್ಪತ್ರೆಯ ಕಟ್ಟಡದ ಮೇಲ್ಭಾಗ ಧಗ ಧಗನೆ ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಉಡುಪಿ ಜಿಲ್ಲೆಯ ದೊಡ್ಡನಗುಡ್ಡೆ ಬಬ್ಬುಸ್ವಾಮಿ ದೇಗುಲದ ಬಳಿಯಿರುವ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ ಕಟ್ಟಡದ ನವೀಕರಣ ನಡೆಯುತ್ತಿರುವುದರಿಂದ ಆಸ್ಪತ್ರೆಯಲ್ಲಿ ರೋಗಿಗಳು ಇರಲಿಲ್ಲ. ಕಟ್ಟಡದ ಮೇಲ್ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಕಟ್ಟಡ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಕಟ್ಟಡದಲ್ಲಿದ್ದ ಇಬ್ಬರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ…

Read More

ಮಂಗಳೂರು: ಕಂಠಪೂರ್ತಿ ಕುಡಿದು ಚಿಕಿತ್ಸೆ ನೀಡಲು ಬಂದ ಪಿಜಿ ವೈದ್ಯ !

ಮಂಗಳೂರು : ವೈದ್ಯನೊಬ್ಬ ಕಂಠಪೂರ್ತಿ ಕುಡಿದು ರೋಗಿಗೆ ಚಿಕಿತ್ಸೆ ನೀಡಲು ಬಂದ ಘಟನೆ ಕರ್ತವ್ಯದಲ್ಲಿ ಮಂಗಳೂರಿನ ಎ.ಜೆ.ಮೆಡಿಕಲ್ ಕಾಲೇಜು-ಆಸ್ಪತ್ರೆಯಲ್ಲಿ ನಡೆದಿದೆ. ಕರ್ತವ್ಯದಲ್ಲಿ ನಿರತರಾಗಿರುವಾಗ ಕಂಠಪೂರ್ತಿ ಕುಡಿದು ಬಂದ ಪಿಜಿ ವೈದ್ಯ ಡಾ. ಶ್ರೀಕಾಂತ್‌ನನ್ನು ರೋಗಿಯ ಕಡೆಯವರು ತರಾಟೆಗೆ ತೆಗೆದುಕೊಂಡಿದ್ದಾರೆ. ರಾತ್ರಿ ಓಪಿಡಿಯಲ್ಲಿ ಕರ್ತವ್ಯದಲ್ಲಿ ನಿರತನಾಗಿದ್ದಾಗಲೇ ವೈದ್ಯ ಕುಡಿದು ಬಂದಿದ್ದು, ಎಣ್ಣೆ ಏಟಿಗೆ ಎಲ್ಲೋ ಬಿದ್ದು ಬಟ್ಟೆಗಳು ಕೂಡಾ ಗಲೀಜಾಗಿದ್ದವು. ನಂತರ ಪಾನಮತ್ತ ವೈದ್ಯನನ್ನು ಆಸ್ಪತ್ರೆಯ ಸಿಬ್ಬಂದಿಗಳು ಹೊರ ಕಳುಹಿಸಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…

Read More

ಬೀದಿ ನಾಯಿಗಳಿಗೆ ಮೈಕ್ರೋ ಚಿಪ್​ ಅಳವಡಿಕೆ: ಪ್ರಾಯೋಗಿಕವಾಗಿ ಯೋಜನೆ ಜಾರಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪಶ್ಚಿಮ ವಲಯದ ಮತ್ತಿಕೆರೆ ಮತ್ತು ಮಲ್ಲೆಶ್ವರದ ಬಡಾವಣೆಗಳಲ್ಲಿರುವ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್​ ಅಳವಡಿಸಲಾಗುತ್ತಿದೆ ಎಂದು ಬಿಬಿಎಂಪಿಯ ಆರೋಗ್ಯ ಹಾಗೂ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್​ ವಿಕಾಸ್​ ಕಿಶೋಶ್​ ಹೇಳಿದ್ದಾರೆ. ಬಿಝ್​ ಆರ್ಬಿಟ್​ ಸಂಸ್ಥೆ ಸಹಯೋಗದೊಂದಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್​ ಅಳವಡಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಹಿಂದೆ ಲಸಿಕೆ ಹಾಕಿದ ಬೀದಿನಾಯಿಗಳಿಗೆ ಬಣ್ಣ ಬಳಸಿ ಗುರುತಿಸಲಾಗುತ್ತಿದೆ. ಒಂದು ವಾರ…

Read More

ಕಾರವಾರದಲ್ಲಿ ಉದ್ಯಮಿ ಬರ್ಬರ ಕೊಲೆ

ಕಾರವಾರ:  ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳ ಗುಂಪೊಂದು ತಲ್ವಾರ್ ನಿಂದ ಕಡಿದು ಕೊಲೆ ಮಾಡಿದ ಘಟನೆ ಕಾರವಾರದ ಹಣಕೋಣ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ ನಡೆದಿದೆ.ಕೊಲೆಯಾದವರನ್ನು ಉದ್ಯಮಿ ವಿನಾಯಕ ನಾಯ್ಕ ಯಾನೆ ರಾಜು ನಾಯ್ಕ (58) ಎಂದು ಗುರುತಿಸಲಾಗಿದೆ.ಮಹಾರಾಷ್ಟ್ರದ ಪುಣೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಆಮದು, ರಫ್ತು ವಹಿವಾಟು ನಡೆಸುತ್ತಿರುವ ಉದ್ಯಮಿ ತನ್ನ ಊರಾದ ಹಣಕೋಣಕ್ಕೆ ವಾರದ ಹಿಂದೆ ಬಂದಿದ್ದರು. ಭಾನುವಾರ ಪುಣೆಗೆ ಹೊರಡಲು ಸಿದ್ದರಾಗಿದ್ದರು. ನಸುಕಿನ ಜಾವ 5.30ರ ಸುಮಾರಿಗೆ ಅವರ ಹತ್ಯೆ ಮಾಡಲಾಗಿದೆ. ‘ನಾಲ್ಕರಿಂದ ಐದು ಜನರಿದ್ದ ಗುಂಪೊಂದು…

Read More

ಕ್ಯಾನ್ಸರ್ ತಡೆಗಟ್ಟಲು ಮುಂದಾದ ಕ್ವಾಡ್ ದೇಶಗಳ ನಾಯಕರು

ಕ್ವಾಡ್ ಶೃಂಗಸಭೆಯಲ್ಲಿ ಕ್ಯಾನ್ಸರ್ ಪತ್ತೆ, ಚಿಕಿತ್ಸೆ ಮತ್ತು ಅದನ್ನು ತಡೆಗಟ್ಟುವ ಸಲುವಾಗಿ ಮಹತ್ವದ ಯೋಜನೆಯೊಂದನ್ನು ಘೋಷಿಸಿದ್ದು, ಈ ಯೋಜನೆಯ ಬಗ್ಗೆ ಕ್ವಾಡ್ ದೇಶಗಳ ನಾಯಕರು ಮಾಹಿತಿ ನೀಡಿದ್ದಾರೆ. ವಿಶ್ವದಾದ್ಯಂತ ಕ್ಯಾನ್ಸರ್ ಕೊನೆಗೊಳಿಸಲು ಕ್ವಾಡ್ ಕ್ಯಾನ್ಸರ್ ಮೂನ್‌ಶಾಟ್ ಉಪಕ್ರಮವನ್ನು ಅನಾವರಣಗೊಳಿಸಲು ನಾನು ಹೆಮ್ಮೆಪಟ್ಟುಕೊಳ್ಳುತ್ತೇನೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.ಇಂಡೋ-ಫೆಸಿಪಿಕ್ ಪ್ರದೇಶದಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಕ್ವಾಡ್ ರಾಷ್ಟ್ರಗಳ ನಾಯಕರು ಬದ್ಧತೆ ಪ್ರದರ್ಶಿಸಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದಾದ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಇಂಡೋ –ಫೆಸಿಫಿಕ್‌ ನಲ್ಲಿ 1.5 ಲಕ್ಷ…

Read More

ಚೆನ್ನೈನಲ್ಲಿ ಭಾರತದ ಬೋನಿಗೆ ಬಿದ್ದ ಬಾಂಗ್ಲಾ ಹುಲಿಗಳು; 6 ಬಲಿ ಪಡೆದ ರವಿಚಂದ್ರನ್ ಅಶ್ವಿನ್

ಚೆನ್ನೈ: ರವಿಚಂದ್ರನ್ ಅಶ್ವಿನ್ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಬಾಂಗ್ಲಾದೇಶ ಎದುರು ಚೆನ್ನೈ ಟೆಸ್ಟ್‌ ಪಂದ್ಯದಲ್ಲಿ 280 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿದ ರವಿಚಂದ್ರನ್ ಅಶ್ವಿನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. 515 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು 234 ರನ್‌ಗಳಿಗೆ ಸರ್ವಪತನ ಕಂಡಿದೆ ಇಲ್ಲಿನ ಎಂ ಎ…

Read More