Headlines

 ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣ-ಮತ್ತಿಬ್ಬರು ಆರೋಪಿಗಳ ಬಂಧನ

ಉಡುಪಿ: ಕಾರ್ಕಳದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಗೋವಿಂದಪಲ್ಲಿ ನಿವಾಸಿ ಗಿರಿರಾಜು ಜಗಾಧಾಬಿ (31), ಉಡುಪಿ ಜಿಲ್ಲೆ ಕಾಪು ತಾಲ್ಲೂಕಿನ ಶಂಕರಪುರದ ಜಾನ್‌ ನೊರೋನ್ಹಾ (30) ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಪೊಲೀಸ್‌ ವಶಕ್ಕೆ ನೀಡಿದೆ.ಈ ಪ್ರಕರಣಕ್ಕೆ ಸಂಬಂಧಿಸಿ ಅಲ್ತಾಫ್, ಕ್ಸೇವಿಯರ್ ರಿಚರ್ಡ್ ಕ್ವಾಡ್ರಸ್ ಮತ್ತು ಅಭಯ್‌ ಎಂಬುವವರನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ಒಟ್ಟು ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.    

Read More

ಮಂಗಳೂರು: ಟ್ರೇಡಿಂಗ್ ಕಂಪೆನಿಯಲ್ಲಿ ಮಹಿಳಾ ಸಿಬ್ಬಂದಿಯಿಂದ 48 ಲಕ್ಷ ವಂಚನೆ – ದೂರು ದಾಖಲು

ಮಂಗಳೂರು: ಶ್ರೀಮಡಪ್ಪುರಾಯಿಲ್ ಶರ್ಫುದ್ದೀನ್ ಟ್ರೇಡಿಂಗ್ ಕಂಪೆನಿಯ ಮಹಿಳಾ ಲೆಕ್ಕಪರಿಶೋಧಕಿ 48 ಲಕ್ಷ ರೂ‌ ಹಣಕಾಸು ವಂಚನೆಗೈದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಶ್ರೀಮಡಪ್ಪುರಾಯಿಲ್ ಶರ್ಫುದ್ದೀನ್ ಟ್ರೇಡಿಂಗ್ ಕಂಪೆನಿಯ ಹಣಕಾಸು ವ್ಯವಹಾರಗಳನ್ನು ಲೆಕ್ಕಪರಿಶೋಧಕಿ ಪುಷ್ಪಲತಾ ನೋಡಿಕೊಳ್ಳುತ್ತಿದ್ದರು. ಮಾಲಕ ಮತ್ತು ಆಡಿಟರ್ ಕಂಪೆನಿಯ ಹಣಕಾಸು ವ್ಯವಹಾರಗಳ ಸಮಗ್ರ ಪರಿಶೀಲನೆ ನಡೆಸಿದಾಗ ಕಳೆದ ಮೂರು ವರ್ಷಗಳಿಂದ ದೊಡ್ಡ ಹಣಕಾಸು ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ. 2024ರ ಜ.11ರಿಂದ 2024ರ ಆ.20ರವರೆಗೆ, 48,83,405 ರೂ. ಹಣ ಕಂಪೆನಿಯ…

Read More

ಕಾರ್ಕಳ ಅತ್ಯಾಚಾರ ಪ್ರಕರಣ: ಹಿಂ.ಜಾ.ವೇ. ಕಾರ್ಯಕರ್ತ ಆರೋಪಿ ಎಂದು ಫೋಟೋ ಬಳಕೆ- ಪೊಲೀಸ್‌ ಠಾಣೆಗೆ ದೂರು

ಕಾರ್ಕಳ : ಅತ್ಯಾಚಾರ ಪ್ರಕರಣದ ಆರೋಪಿಗೆ ಡ್ರಗ್ಸ್‌ ನೀಡಿದ ಮೂರನೆಯ ಆರೋಪಿ ಅಭಯ್ ಎಂದು ನನ್ನ ಫೋಟೋ ಬಳಸಿ ವಾಟ್ಸಪ್‌ನಲ್ಲಿ ಸುದ್ದಿ ಹಬ್ಬಿಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಅರವಿಂದ ಅವರು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಅಭಯ್‌ನ ಬಂಧನವಾದ ಬಳಿಕ  ಕಣ್ಣೀರಿನ ನ್ಯಾಯಕ್ಕಾಗಿ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ 9900442728 ವಾಟ್ಸಾಪ್‌ ಸಂಖ್ಯೆಯಿಂದ ನನ್ನ ಫೋಟೋ ಬಳಸಿ ಸಂದೇಶ ರವಾನಿಸಿರುತ್ತಾರೆ. ಆ. 26ರಂದು ಕಾರ್ಕಳದಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ…

Read More

ಉಡುಪಿ: ಅನಾಮಧೇಯ ಲಿಂಕ್‌ ಕ್ಲಿಕ್‌ ಮಾಡಿ ಲಕ್ಷಾಂತರ ರೂ ಕಳೆದುಕೊಂಡರು!

ಉಡುಪಿ: ಅನಾಮಧೇಯ ಲಿಂಕ್‌ ಕ್ಲಿಕ್‌ ಮಾಡಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ. ಮಾರ್ಕ್‌ ಪ್ರೇಮ ಕುಮಾರ್‌ ಅವರು ಫೇಸ್‌ಬುಕ್‌ನಲ್ಲಿ ಬ್ರೌಸಿಂಗ್‌ ಮಾಡುತ್ತಿದ್ದಾಗ ಕೋಟಾಕ್‌ ಸೆಕ್ಯೂರಿಟಿಯ ಲಿಂಕ್‌ ಅನ್ನು ಕ್ಲಿಕ್‌ ಮಾಡಿದ ಅನಂತರ ಯಾವುದೋ ಅನಾಮಧೇಯ ವಾಟ್ಸಪ್‌ ಗ್ರೂಪ್‌ಗೆ ಸೇರ್ಪಡೆಯಾಗಿದ್ದಾರೆ. ಈ ವೇಳೆ ಅದರಲ್ಲಿದ್ದ ವ್ಯಕ್ತಿಗಳು ಉತ್ತಮ ಸಂವಹನಕಾರರಾಗಿ ತಮ್ಮನ್ನು ಕೋಟಾಕ್‌ ಸೆಕ್ಯುರಿಟಿಸ್‌ ಪ್ರತಿನಿಧಿಗಳು ಎಂಬಂತೆ ಬಿಂಬಿಸಿಕೊಂಡಿದ್ದು ಅವರು ನೋಂದಾಯಿಸಿದ ಸೇಬಿ ನಂಬರ್‌ ಅನ್ನು ಮಾರ್ಕ್‌ ಪ್ರೇಮ ಕುಮಾರ್‌ ಅವರಿಗೆ ತೋರಿಸಿ ಲಿಂಕ್‌ ಕಳುಹಿಸಿದ್ದಾರೆ. ಅನಂತರ…

Read More

‘SSC’ ಯಿಂದ 50,000 ಕ್ಕೂ ಹೆಚ್ಚು ‘ಕಾನ್ಸ್ ಟೇಬಲ್’ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಉದ್ಯೋಗಾಕಾಂಕ್ಷಿಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC GD) ಭರ್ಜರಿ ಸಿಹಿಸುದ್ದಿ ನೀಡಿದ್ದು, 50,000 ಕ್ಕೂ ಹೆಚ್ಚು SSC GD ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ವೆಬ್‌ಸೈಟ್‌ನಲ್ಲಿನ ಅಧಿಕೃತ ಅಧಿಸೂಚನೆಯು 2024-2025 ನೇ ಸಾಲಿನ ಪರೀಕ್ಷೆಗಳ ತಾತ್ಕಾಲಿಕ ಕ್ಯಾಲೆಂಡರ್ ಪ್ರಕಾರ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) ಕಾನ್‌ಸ್ಟೆಬಲ್ (ಜಿಡಿ) ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಎಸ್‌ಎಸ್‌ಎಫ್, ರೈಫಲ್‌ಮ್ಯಾನ್ (ಜಿಡಿ), ಮತ್ತು ನಾರ್ಕೋಟಿಕ್ಸ್ 2025ರ ಕಾನ್‌ಸ್ಟೆಬಲ್ ಪರೀಕ್ಷೆಗೆ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸುವ ಕಂಟ್ರೋಲ್ ಬ್ಯೂರೋ ಸೂಚನೆಯನ್ನು…

Read More

ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ.?

ಕಣ್ಣಲ್ಲಿ ನೀರು ತರಿಸುವ ಈ ಪುಟ್ಟ ಈರುಳ್ಳಿ ಇಲ್ಲದ ಅಡುಗೆ ಮನೆ ಇರಲು ಸಾಧ್ಯವಿಲ್ಲ. ಬಹುತೇಕ ಅಡುಗೆ ಮನೆಯಲ್ಲಿ ಈರುಳ್ಳಿ ಇಲ್ಲದೆ ಅಡುಗೆ ತಯಾರಾಗೋದೇ ಇಲ್ಲ. ತನ್ನದೇ ಆದ ರುಚಿಯೊಂದಿಗೆ ಪ್ರಮುಖ ಸ್ಥಾನದಲ್ಲಿರುವ ಈ ಈರುಳ್ಳಿ ಬಾಯಿ ರುಚಿಗೆ ಮಾತ್ರವಲ್ಲದೆ ದೇಹಕ್ಕೂ ಪ್ರಯೋಜನಕಾರಿಯಾಗಿದೆ. ಚಿಕ್ಕ ಈರುಳ್ಳಿ ನೋಡಲು ಏನೂ ಇಲ್ಲ ಎಂದು ತಮಾಷೆಯಾಗಿ ಹೇಳಬಹುದು. ಆದರೆ ಪುಟ್ಟ ಈರುಳ್ಳಿಯನ್ನು ಅಷ್ಟು ಸುಲಭವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಇದು ದೇಹದ ಆಂತರಿಕ ಅಥವಾ ಬಾಹ್ಯ ಬಳಕೆಯಿಂದ ನಮ್ಮನ್ನು ವಿವಿಧ…

Read More

ಮತ್ತೊಂದು ಟ್ವಿಸ್ಟ್ : `CM ಸಿದ್ದರಾಮಯ್ಯ’ ಟಾರ್ಚ್ ಬಿಟ್ಟು ತೋರಿಸಿದ ಪತ್ರದಲ್ಲಿ ಪತ್ನಿಯ ಸಹಿಯೇ ನಕಲಿ!

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದರಂತೆ ಮಾಹಿತಿಗಳು ಬಹಿರಂಗವಾಗುತ್ತಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾಗೆ ಬರೆದ ಪತ್ರದಲ್ಲಿನ ಸಹಿಯೇ ನಕಲಿ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಕುರಿತು ಬಿಜೆಪಿ ಟ್ವೀಟ್ ಮಾಡಿದ್ದು, ನಾನೇ ಸತ್ಯ ಹರಿಶ್ಚಂದ್ರರ ಕೊನೆಯ ತುಂಡು ಎನ್ನುವ ರೀತಿ ಲಜ್ಜೆಬಿಟ್ಟು ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುವ ಭಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಗತ್ತಿನ ಮುಂದೆ ಸತ್ಯವನ್ನು ಮರೆಮಾಚಲು ಹೋಗಿ ಇದೀಗ ಬೆತ್ತಲಾಗಿದ್ದಾರೆ ಎಂದು ಹೇಳಿದೆ. ಮಾಹಿತಿ ಹಕ್ಕಿನಡಿ ಆರ್‌ಟಿಐ ಕಾರ್ಯಕರ್ತ ಪಡೆದ…

Read More

ವಿಶ್ವ ಹಿಂದೂ ಪರಿಷತ್ ಷಷ್ಠಿಪೂರ್ತಿ ಸಂಭ್ರಮ: ಸಮ್ಮೇಳನ ಸಹಿತ ವಿವಿಧ ಕಾರ್ಯಕ್ರಮಗಳ ಆಯೋಜನೆ

ಮಂಗಳೂರು: “ಭಾರತೀಯ ಧರ್ಮ, ಸಂಸ್ಕೃತಿ ಹಿಂದೂ ಜೀವನ ಮೌಲ್ಯಗಳು, ನಂಬಿಕೆ ಮತ್ತು ಸ್ವಾಭಿಮಾನವನ್ನುರಕ್ಷಿಸಲು ಪ್ರಾರಂಭಗೊಂಡ ವಿಶ್ವದ ಅತೀ ದೊಡ್ಡ ಸಂಘಟನೆ ವಿಶ್ವ ಹಿಂದೂ ಪರಿಷತ್. 1964 ಆಗಸ್ಟ್ 29ರಂದು ಮುಂಬೈಯ ಸಾಂದೀಪಿನಿ ಆಶ್ರಮದಲ್ಲಿ ಪ್ರಾರಂಭಗೊಂಡ ವಿಶ್ವ ಹಿಂದೂ ಪರಿಷತ್ತಿಗೆ ಈ ವರ್ಷ ಷಷ್ಠಿಪೂರ್ತಿ ಸಂಭ್ರಮ. ಕಳೆದ 60 ವರ್ಷಗಳಲ್ಲಿ ಜಗತ್ತಿನ ಹಿಂದುಗಳನ್ನು ಸಂಘಟಿಸುವ ಕಾರ್ಯದೊಂದಿಗೆ ಹಿಂದೂ ಧರ್ಮದ ಆಚರಣೆ, ಪ್ರಚಾರ, ರಕ್ಷಣೆಯ ಉದ್ದೇಶವನ್ನು ಇಟ್ಟುಕೊಂಡು, ಕೆಲಸಕಾರ್ಯಗಳನ್ನು ಮಾಡುತ್ತ ಬಂದಿದೆ“ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ…

Read More

ಉಪ್ಪಿನಂಗಡಿ: ಕಳ್ಳತನ ಪ್ರಕರಣ- ಗರುಡ ಗ್ಯಾಂಗ್ ನಟೋರಿಯಸ್ ಸದಸ್ಯನ ಬಂಧನ

ಉಪ್ಪಿನಂಗಡಿ: ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಗರುಡ ಗ್ಯಾಂಗ್‌ನ ಸದಸ್ಯ ಹಾಗೂ ಅಂತರ್ ಜಿಲ್ಲಾ ಕಳ್ಳತನ ಪ್ರಕರಣಗಳ ಆರೋಪಿಯೋರ್ವನನ್ನು ಉಪ್ಪಿನಂಗಡಿ ಪೊಲೀಸರು ಆ. 27ರಂದು ಬಂಧಿಸಿದ್ದಾರೆ. ಕಡಬ ತಾಲೂಕು ಐತ್ತೂರು ಗ್ರಾಮದ ಕಾಯರ್ತಡ್ಕ ನಿವಾಸಿ ಝಕಾರಿಯಾ ಎಂಬವರ ಪುತ್ರ ಅಬ್ದುಲ್ ಹಮೀದ್ (27) ಬಂಧಿತ ಆರೋಪಿ. 2023ರ ಅಕ್ಟೋಬರ್ 10ರಂದು ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಉಪಯೋಗಿಸುವ ಕೆ.ಎನ್.ಆರ್. ಸಂಸ್ಥೆಯ ಕಬ್ಬಿಣದ ಶೀಟ್‌ಗಳನ್ನು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಕೌಕ್ರಾಡಿ…

Read More

ವಿವಾದ : ಶಿಕ್ಷಣ ಇಲಾಖೆಯ ಪ್ರಶಸ್ತಿ ಪತ್ರದಲ್ಲಿ `ಯೇಸು ಕ್ರಿಸ್ತ’ ಹಾಗೂ `ಮೇರಿ’ ಫೋಟೋ!

ಶಿಕ್ಷಣ ಇಲಾಖೆಯು ಕ್ರೀಡಾ ಕೂಟದ ಪ್ರಶಸ್ತಿ ಪತ್ರದಲ್ಲಿ ಕ್ರೈಸ್ತ ಧರ್ಮದ ಆಧಾರಕರ ಚಿತ್ರವನ್ನು ಬಳಸುವ ಮೂಲಕ ಇದೀಗ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವಿತರಿಸಲಾದ ಪ್ರಶಸ್ತಿ ಪತ್ರದಲ್ಲಿ ಯೇಸು ಕ್ರಿಸ್ತ ಹಾಗೂ ಮೇರಿ ಫೋಟೋ ಹಾಕಲಾಗಿದ್ದು, ಪ್ರಶಸ್ತಿ ಪತ್ರದಲ್ಲಿ ಕ್ರೈಸ್ತ ಧರ್ಮದ ಯೇಸು ಕ್ರಿಸ್ತ ಹಾಗೂ ಮೇರಿ ಫೋಟೋಗಳನ್ನು ಮುದ್ರಿಸಲಾಗಿದ್ದು, ಇದು ಹಿಂದೂ ವಿರೋಧಿ ನಡೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಕಿಡಿ ಶಾಲೆಗಳ…

Read More