Headlines

ಉಡುಪಿ: 8 ಜನರನ್ನು ಮದುವೆಯಾಗಿ ವಂಚನೆ..! ಹಣಹೊಂದಿರುವ ಗಂಡಸರೇ ಈಕೆಯ ಟಾರ್ಗೆಟ್

ಉಡುಪಿ: ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಎಂದು ಹೇಳಿಕೊಂಡು ಹಲವರನ್ನು ಮದುವೆಯಾಗಿ ವಂಚಿಸಿದ ಪ್ರಕರಣ ಬಳ್ಳಾರಿಯಲ್ಲಿ ನಡೆದಿದೆ. ಅಲ್ಲದೇ ಹಲವಾರು ಜನರಿಗೆ ಲೋನ್ ಕೊಡಿಸುವುದಾಗಿ ಮಹಿಳೆ ಕೋಟಿ ಕೋಟಿ ರೂ. ವಂಚಿಸಿದ್ದಾಳೆ ಎಂದು ತಿಳಿದು ಬಂದಿದೆ. ಉಡುಪಿ ನಿವಾಸಿ ತಬುಸುಮ್ ತಾಜ್ (40) ಎಂಬಾಕೆ ಇದುವರೆಗೂ 8 ಜನರನ್ನು ಮದುವೆಯಾಗಿ ವಂಚಿಸಿದ್ದಾಳೆ ಎಂದು ತಿಳಿದು ಬಂದಿದೆ. ಮದುವೆಯಾಗಿ ಹೆಂಡತಿಯಿಂದ ಅಂತರ ಕಾಯ್ದುಕೊಂಡ ಹಣಹೊಂದಿರುವ ಗಂಡಸರನ್ನೇ ಈಕೆ ಟಾರ್ಗೆಟ್ ಮಾಡುತ್ತಿದ್ದಳು. ಹೀನಾ ಎಂಟರ್‍ಪ್ರೈಸಸ್ ಎಂಬ ಆಫೀಸ್ ಮಾಡಿಕೊಂಡು…

Read More

ಪ್ರಣವ್ ಫೌಂಡೇಶನ್ ಮತ್ತು ಆರ್ ವಿ ಟ್ರಸ್ಟ್ ಬೆಂಗಳೂರು ಇವರ ವತಿಯಿಂದ ನಾಯಿಲಾ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ಓಂ ಶ್ರೀ ಗೆಳೆಯರ ಬಳಗ (ರಿ) ನಾಯಿಲ ನರಿಕೊಂಬು ಇವರ ಕೋರಿಗೆ ಮೇರೆಗೆ ಪ್ರಣವ್ ಫೌಂಡೇಶನ್ ಮತ್ತು ಆರ್ ವಿ ಟ್ರಸ್ಟ್ ಬೆಂಗಳೂರು ಇವರ ವತಿಯಿಂದ ದ.ಕ ಜಿ.ಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಾಯಿಲಾ ನರಿಕೊಂಬು ಬಂಟ್ವಾಳ ತಾಲೂಕಿನ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ನೀಡಲಾಯಿತು. ವಿತರಣೆ ಸಮಯದಲ್ಲಿ ಸಂಘದ ಅಧ್ಯಕ್ಷರು ಕಿರಣ್ ಅಟ್ಲೂರು, ಉಪಾಧ್ಯಕ್ಷರು ರಾಜೇಶ್ ಕೋಟ್ಯಾನ್ ,ಕಾರ್ಯದರ್ಶಿ ರಾಜೇಶ್ ಮರ್ದೋಳಿ, ಮತ್ತು ಸಂಘದ ಸದಸ್ಯರು ಹಾಗೂ ನೈಲಾ ಶಾಲೆಯ ಎಸ್. ಡಿ. ಎಂ….

Read More

ಮೂಡಬಿದ್ರೆ ಹಿಂದೂ ಯುವತಿಯನ್ನು ಅಡ್ಡ ಹಾಕಿ ಹಲ್ಲೆ, ಪ್ರೀತಿಸಲು ಬೆದರಿಸಿ ಕಿರುಕುಳ- ಅರ್ಶದ್ ಬಂಧನ

ಮೂಡುಬಿದ್ರಿ: ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಯುವತಿಯೊಬ್ಬಳಿಗೆ ಹಲ್ಲೆಗೈದ ಘಟನೆ ಮೂಡುಬಿದಿರೆ ಪೊಲೀಸ್ ಠಾಣೆ ರಸ್ತೆಯಲ್ಲಿ ಗುರುವಾರ ರಾತ್ರಿ 8:00 ಗಂಟೆಗೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಇರುವೈಲಿನ ಅರ್ಶದ್ (21) ಎಂಬವನಾಗಿದ್ದಾನೆ. ಮೂಡುಬಿದ್ರಿಯ ಕೋಟೆಬಾಗಿಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಕೋಟೆಬಾಗಿಲಿನ ಯುವತಿಯೊಬ್ಬಳು ಪರಿಚಯವಾಗಿದ್ದು, ಮುಂದೆ ಅವರಿಬ್ಬರ ನಡುವೆ ಹಲವು ಬಾರಿ ಫೋನ್ ಸಂಭಾಷಣೆ ನಡೆದಿತ್ತೆಂಬ ವಿಚಾರವೂ ಬಯಲಾಗಿದೆ. ಕೋಟೆಬಾಗಿಲಿನ ಯುವತಿ ಮೂಡಬಿದ್ರಿ ಆಳ್ವಾಸ್ ಆಸ್ಪತ್ರೆ ರಸ್ತೆಯ ಬ್ಯೂಟಿ ಪಾರ್ಲರ್…

Read More

ವಿ ಆರ್ ಯುನೈಟೆಡ್ ಮ್ಯಾಂಗಲೋರ್ ಕಬಡ್ಡಿ ಪ್ರೀಮಿಯರ್ ಲೀಗ್ ಸೀಸನ್ 2 ಉದ್ಘಾಟನೆ

ವಿ ಆರ್ ಯುನೈಟೆಡ್ ಮ್ಯಾಂಗಲೋರ್ ಕಬಡ್ಡಿ ಪ್ರೀಮಿಯರ್ ಲೀಗ್ ಸೀಸನ್ 2 ಇದರ ಫುಡ್ ಫೆಸ್ಟಿವಲ್ ಹಾಗೂ ಕ್ರೀಡಾಂಗಣದ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ. ಶ್ರೀ ವಿಶ್ವಾಸ್ ದಾಸ್. ಚಿಲಿಂಬಿ, ಲಯನ್ ಅನಿಲ್ ದಾಸ್ ಮಂಗಳೂರು, ಡಾಕ್ಟರ್ ಅನಂತ ಪ್ರಭು, ನಗರ ಪಾಲಿಕೆ ಸದಸ್ಯ ಕಿರಣ್ ಕುಮಾರ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಶಾನವಾಜ್, ಲಾಂಚು ಉಳ್ಳಾಲ್, ದೀಪಕ್ ಪಿಲಾರ್, ಮುಂತಾದ ಗಣ್ಯರು ಭಾಗವಹಿಸಿದ್ದರು….

Read More

ನಿಮ್ಮ ಕನಸುಗಳು ಇನ್ನು ಬ್ರೈಟ್ ಭಾರತ್ ನಲ್ಲಿ ಚಿಗುರೊಡೆಯಲಿ

ಬ್ರೈಟ್ ಭಾರತ್ ಟೀಮ್ ಜನ ಸಮಾನ್ಯರ ಕನಸುಗಳಿಗೆ ಬಣ್ಣ ತುಂಬಲಿದ್ದು, ಸಮಾಜದ ಕಟ್ಟ ಕಡೆಯ ಜನರಿಗೂ ಇದು ಆಶಾಕಿರಣವಾಗಲಿದೆ. ಖಂಡಿತಾ ತಮಗೂ ನಮ್ಮ ಜೊತೆಯಾಗುವ ಮೂಲಕ ನಿಮ್ಮ ಕನಸುಗಳಿಗೆ ಬ್ರೈಟ್ ತುಂಬಬಹುದು. ಪುತ್ತೂರಿನ ಇತಿಹಾಸದಲ್ಲಿ ಎಂದಿಗೂ ಕಂಡು ಕೇಳರಿಯದಂತ ಅಮೋಘ ಹೊಸ ಚಿಂತನೆಗಳೊಂದಿಗೆ ಬ್ರೈಟ್ ಭಾರತ್ ತಮ್ಮ ಮುಂದೆ ಬಂದಿದೆ. ಇದರ ನೂತನ ಯೋಜನೆಯಲ್ಲೊಂದಾದ ಸ್ಕೀಮ್ ಯೋಜನೆ, ಬಡ ಸಾಮಾನ್ಯ ಜನರಿಗೆ ಖಂಡಿತಾವಾಗಿಯೂ ಇದು ಉಪಯೋಗಿ ಯೋಜನೆಯಾಗಲಿದೆ. ಹಾಗಾದರೆ ಈ ಸ್ಕೀಮ್ ಯಾವ ರೀತಿ ಇರಲಿದೆ?ಮೇಲೆ ಪೋಸ್ಟರ್…

Read More

ಪುತ್ತೂರು: ಮನೆಯಲ್ಲಿ ವೇಶ್ಯಾವಾಟಿಕೆ- ಇಬ್ಬರು ಮಹಿಳೆಯರು ವಶಕ್ಕೆ..!

ಪುತ್ತೂರು : ಇಲ್ಲಿನ ಬನ್ನೂರು ಕರ್ಮಲದಲ್ಲಿರುವ ಪೊಲೀಸ್ ವಸತಿ ಗೃಹದ ಬಳಿಯೇ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸಿ ಮನೆಯಲ್ಲಿದ್ದ ಇಬ್ಬರು ಮಹಿಳೆಯರನ್ನು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ. ಬನ್ನೂರು ಕರ್ಮಲ ಪೊಲೀಸ್ ವಸತಿಗೃಹ ರಸ್ತೆಯ ಬಲಮುರಿ ವಿದ್ಯಾಗಣಪತಿ ದೇವಸ್ಥಾನದ ಬಳಿ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ದೂರು ಸಾರ್ವಜನಿಕ‌ರಿಂದ ಬಂದಿತ್ತು. ಆದ್ದರಿಂದ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ ಮೈಸೂರು ಮೂಲದ ಯುವತಿ ಮತ್ತು ಮಹಿಳೆಯೊಬ್ಬರು ಮಾತ್ರ…

Read More

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಸೌಜನ್ಯ ಹೆತ್ತವರು ಸಲ್ಲಿಸಿದ ಮರುತನಿಖೆ ಅರ್ಜಿಗಳು ವಜಾ..!

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಎಲ್ಲಾ ಮೂರು ಅರ್ಜಿಗಳನ್ನ ಕರ್ನಾಟಕ ಹೈಕೋರ್ಟ್ ವಜಾ ಗೊಳಿಸಿದೆ. ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಲಾಗಿದೆ. ಪ್ರಕರಣದಲ್ಲಿ ಸಂತೋಷ್ ರಾವ್ ಪಾತ್ರವಿಲ್ಲ ಎಂದು ಸೆಷನ್ಸ್ ಕೋರ್ಟ್ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ಈಗ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಮರು ತನಿಖೆ…

Read More

ಮಂಗಳೂರು: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ 3 ಮಂದಿಯ ಬಂಧನ..!

ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ಕಾರಿನಲ್ಲಿ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ನ್ನು ಸಾಗಾಟ/ಮಾರಾಟ ಮಾಡುತ್ತಿದ್ದವನನ್ನು ಪತ್ತೆ ಹಚ್ಚಿ 42 ಗ್ರಾಂ ಎಂಡಿಎಂಎ ನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಮಂಗಳೂರು ನಗರಕ್ಕೆ ಬೆಂಗಳೂರಿನಿಂದ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ನ್ನು ಖರೀದಿಸಿಕೊಂಡು ಹೊಸ ಮಾರುತಿ ಬಲೆನೋ ಕಾರಿನಲ್ಲಿ ಸಾಗಾಟ/ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ನಗರದ ಸುರತ್ಕಲ್ ಎನ್ಐಟಿಕೆ ಮುಕ್ಕ ಪರಿಸರದಲ್ಲಿ ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತುವನ್ನು ಹೊಂದಿಕೊಂಡು…

Read More

ಅರುಣ್ ಪುತ್ತಿಲ ವಿರುದ್ಧ ತೇಜೋವಧೆ ವರದಿ ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ..!

ಪುತ್ತೂರು : ಮಹಿಳೆಯೊಂದಿಗೆ ಮಾತನಾಡುತ್ತಿರುವ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣ್ ಕುಮಾ‌ರ್ ಪುತ್ತಿಲ ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಅರುಣ್ ಕುಮಾ‌ರ್ ಪುತ್ತಿಲ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನಾಗಿದ್ದು, ಸಮಾಜದಲ್ಲಿ ಓರ್ವ ಪ್ರತಿಷ್ಠಿತ ವ್ಯಕ್ತಿಯಾಗಿದ್ದು, ನ್ಯಾಯಾಲಯವು ಯಾವುದೇ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅರುಣ್ ಪುತ್ತಿಲರ ಕುರಿತಾಗಿ ಮಾನಹಾನಿ ಹಾಗೂ ತೇಜೋವಧೆ ಮಾಡುವ ವರದಿಗಳನ್ನು ಪ್ರಕಟಿಸದಂತೆ ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯ ಪ್ರತಿಬಂಧಕಾಜ್ಞೆ ನೀಡಿರುತ್ತದೆ.

Read More

ಮಂಗಳೂರು: ಬಸ್ ಸಂಚಾರದಲ್ಲಿದ್ದಾಗಲೇ ಕುಸಿದುಬಿದ್ದ ಚಾಲಕ..! ಬಸ್ ಡಿಕ್ಕಿ ಆಟೋ ಅಪ್ಪಚ್ಚಿ

ಮಂಗಳೂರು: ಸಂಚರಿಸುತ್ತಿದ್ದಾಗಲೇ ಸಿಟಿ ಬಸ್ ಚಾಲಕ ಶುಗರ್ ಲೋ ಆಗಿ ಕುಸಿದು ಬಿದ್ದ ಪರಿಣಾಮ ಬಸ್ ಮುಂಭಾಗದಲ್ಲಿ ಬರುತ್ತಿದ್ದ ಆಟೋ ಮತ್ತು ಕಾರಿಗೆ ಡಿಕ್ಕಿಯಾದರೂ ಸ್ವಲ್ಪದರಲ್ಲಿ ಭಾರೀ ಅನಾಹುತ ತಪ್ಪಿದ ಘಟನೆ ಹಂಪನಕಟ್ಟೆಯ ಮಿಲಾಗ್ರಿಸ್‌ ಬಳಿ ನಡೆದಿದೆ. ಮೋರ್ಗನ್ಸ್ ಗೇಟ್ – ಸ್ಟೇಟ್‌ಬ್ಯಾಂಕ್ ನಡುವೆ ಸಂಚರಿಸುವ ಪಿಟಿಸಿ ಎಂಬ ಖಾಸಗಿ ಬಸ್ ಗುರುವಾರ ಮಧ್ಯಾಹ್ನ ಕೊನೆಯ ಸ್ಟಾಪ್ ಸ್ಟೇಟ್‌ಬ್ಯಾಂಕ್ ಕಡೆಗೆ ಸಂಚರಿಸುತ್ತಿತ್ತು. ಬಸ್ ಮಿಲಾಗ್ರಿಸ್ ಸ್ಟಾಪ್‌ನಲ್ಲಿ ನಿಂತು ಹೊರಡಿತ್ತು. ಇನ್ನೇನು ಸಿಗ್ನಲ್ ತಲುಪುವ ಮೊದಲೇ ಬಸ್ ಚಾಲಕ…

Read More