ಮಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ – 6ಕೋಟಿಯ ಎಂಡಿಎಂಎನೊಂದಿಗೆ ನೈಜೀರಿಯಾ ಪ್ರಜೆ ಸೆರೆ
ಮಂಗಳೂರು: ಮಂಗಳೂರು ನಗರ ಸೇರಿದಂತೆ ಇತರ ರಾಜ್ಯಗಳಿಗೆ ಎಂಡಿಎಂಎ ಮಾದಕದ್ರವ್ಯ ಪೂರೈಕೆ ಮಾಡುತ್ತಿದ್ದ ನೈಜಿರಿಯಾ ಪ್ರಜೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ 6 ಕೋಟಿ ಮೌಲ್ಯದ 6.300 ಕೆಜಿ ಎಂಡಿಎಂಎಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಬೆಂಗಳೂರಿನ ದೊಮ್ಮಸಂದ್ರದ ವಿವೇಕಾನಂದ ನಗರದಲ್ಲಿ ವಾಸವಿರುವ ಪೀಟರ್ ಇಕೆಡಿ ಬೆಲೊನ್ವು(38) ಎಂಬ ನೈಜೀರಿಯಾ ಪ್ರಜೆ ಬಂಧಿತ ಆರೋಪಿ ಸೆಪ್ಟೆಂಬರ್ 29ರಂದು ನಗರದ ಪಂಪ್‌ವೆಲ್ ಬಳಿ ಎಂಡಿಎಂಎ ಮಾದಕದ್ರವ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ತೊಕ್ಕೊಟ್ಟು,…

