Headlines

ದೀಪಾವಳಿ ಹಬ್ಬದೊಳಗೆ ಸಿದ್ದರಾಮಯ್ಯ ಸರ್ಕಾರ ಪತನ ಫಿಕ್ಸ್ : MLC C.T ರವಿ ಸ್ಪೋಟಕ ಹೇಳಿಕೆ

ದೀಪಾವಳಿ ಹಬ್ಬದೊಳಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಎಂಎಲ್ ಸಿ ಸಿ.ಟಿ. ರವಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಾವಳಿ ಹಬ್ಬದೊಳಗೆ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ. ಸಂಕ್ರಾಂತಿ ದೂರವಾಯ್ತು, ದೀಪಾವಳಿಗೆ ಸರ್ಕಾರ ಪತನ ಖಚಿತ, ಹೊಸ ಸಿಎಂ ಹೊಸ ಸರ್ಕಾರದ ಬಗ್ಗೆ ಕಾಲವೇ ನಿರ್ಣಯ ಮಾಡಲಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ಟೈಂ ಬಾಂಬ್ ಫಿಕ್ಸ್ ಆಗಿದ್ದು, ಸಿದ್ದು ಸರ್ಕಾರದ ಪತನಕ್ಕೆ ಕಾಂಗ್ರೆಸ್…

Read More

ಕಾಪು: ಸರಣಿ ಅಪಘಾತ – ಮೂರು ಕಾರುಗಳು ಜಖಂ..!

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂರು ಕಾರುಗಳು ಜಖಂಗೊಂಡಿವೆ. ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಕಾರು ಹೆದ್ದಾರಿಯಲ್ಲಿ ನಿಂತಿದ್ದ ನೀರಿನಲ್ಲಿ ತೇಲಾಡಿದಂತಾಗಿ, ಚಾಲಕನ ನಿಯಂತ್ರಣ ತಪ್ಪಿ ಮುಂಭಾಗದಲ್ಲಿ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.‌ ಆ ಕಾರು ಮುಂದಕ್ಕೆ ಚಲಿಸಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡು ಕಾರುಗಳು ಹೆದ್ದಾರಿ ಬದಿಯ ಪೊದೆಗೆ ಹೋಗಿದ್ದು, ಮತ್ತೊಂದು ಕಾರು ರಸ್ತೆ ಬದಿಯಲ್ಲಿ ನಿಂತಿದೆ. ಈ ವೇಳೆ ಒಂದು ಕಾರು ಡಿವೈಡರ್‌ಗೆ ಡಿಕ್ಕಿ…

Read More

ಪ್ಯಾರಾಲಿಂಪಿಕ್ಸ್​ 2024: 29 ಪದಕಗಳೊಂದಿಗೆ ದಾಖಲೆ ಬರೆದ ಭಾರತ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಅದ್ಭುತ ಸಾಧನೆಯೊಂದಿಗೆ ಪಯಣ ಮುಗಿಸಿದೆ. ಕ್ರೀಡಾಕೂಟದ ಕೊನೆಯ ದಿನವಾದ ಇಂದು ಭಾರತ ದಾಖಲೆಯ 29 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚು ಸೇರಿವೆ. ಪ್ಯಾರಾಲಿಂಪಿಕ್ಸ್​ ಇತಿಹಾಸದಲ್ಲಿ ಭಾರತ ಇಷ್ಟು ಸಂಖ್ಯೆಯ ಪದಕಗಳನ್ನು ಗೆದ್ದಿದ್ದು, ಇದೇ ಮೊದಲು. ಇದಕ್ಕೂ ಮೊದಲು ಟೊಕಿಯೋ ಪ್ಯಾರಾಲಿಂಪಿಕ್​ನಲ್ಲಿ 19 ಪದಕಗಳನ್ನು ಗೆದ್ದಿದ್ದು, ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ.

Read More

ಕದ್ರಿ ಪಾರ್ಕ್ ನಲ್ಲಿ ‘ಅಪರೇಷನ್ ಹೆಬ್ಬಾವು’; ಭಾರಿ ಗಾತ್ರದ ಹಾವನ್ನು ಕಂಡು ಬೆಚ್ಚಿ ಬಿದ್ದ ಜನ

ಮಂಗಳೂರು: ಹಬ್ಬದ ಜೊತೆಯಲ್ಲಿ ವೀಕೆಂಡ್‌ ಮೂಡ್‌ನಲ್ಲಿಇಂದು ಮುಂಜಾನೆ ಕದ್ರಿ ಪಾರ್ಕ್‌ಗೆ ಬಂದ ಜನರು ಆ ಒಂದು ಅತಿಥಿಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಮರದ ಮೇಲೆ ಹೆಬ್ಬಾವೊಂದು ಮಲಗಿದ್ದು ಜನರ ಈ ಆತಂಕಕ್ಕೆ ಕಾರಣವಾಗಿತ್ತು. ತಕ್ಷಣ ಈ ವಿಚಾರವನ್ನು ಕದ್ರಿ ಪಾರ್ಕ್‌ ನಿರ್ವಾಹಕನ ಗಮನಕ್ಕೆ ತಂದಿದ್ದಾರೆ. ಬಳಿಕ ಅಗ್ನಿಶಾಮಕ ದಳದ ವಾಹನದ ಮೂಲಕ ಹೆಬ್ಬಾವಿನ ರಕ್ಷಣೆಗೆ ಮುಂದಾಗಿದ್ದಾರೆ. ಆದ್ರೆ, ಮರದ ಮೇಲೆ ಕೊಂಬೆಯಲ್ಲಿ ಸುತ್ತಿ ಮಲಗಿದ್ದ ಹೆಬ್ಬಾವನ್ನು ರಕ್ಷಣೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಹೀಗಾಗಿ ಪಿಲಿಕುಳದಿಂದ ನುರಿತ ಉರಗತಜ್ಞ ಭುವನ್…

Read More

ಯೂಟ್ಯೂಬ್ ನೋಡಿ ನಕಲಿ ವೈದ್ಯನಿಂದ ಸರ್ಜರಿ: ಬಾಲಕ ಮೃತ್ಯು

ಯೂಟ್ಯೂಬ್ ನೋಡಿ ನಕಲಿ ವೈದ್ಯ ಸರ್ಜರಿ ಮಾಡಿದ ಪರಿಣಾಮ 17 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಸರನ್ ಎಂಬಲ್ಲಿ ನಕಲಿ ವೈದ್ಯ ಯೂಟ್ಯೂಬ್ ವಿಡಿಯೋವನ್ನು ಅನುಸರಿಸಿ ಬಾಲಕನ ಪಿತ್ತಕೋಶದಲ್ಲಿರುವ ಕಲ್ಲನ್ನು ತೆಗೆಯುವುದಕ್ಕೆ ಆಪರೇಷನ್ ಮಾಡಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಬಾಲಕನನ್ನು ಪಾಟ್ನಾದ ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದಾರೆ. ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದು, ದೇಹವನ್ನು ಆಸ್ಪತ್ರೆಯಲ್ಲಿ ಬಿಟ್ಟು ವೈದ್ಯರು ಹಾಗೂ ಜೊತೆಗಿದ್ದವರು ಪರಾರಿಯಾಗಿದ್ದಾರೆ. ಬಾಲಕನು ಪದೇ ಪದೇ ವಾಂತಿ ಮಾಡುತ್ತಿದ್ದ. ಆದ್ದರಿಂದ…

Read More

ಮಂಗಳೂರು:ಮಾದಕ ವಸ್ತು ಸೇವನೆ- ಓರ್ವನ ಬಂಧನ

ಮಂಗಳೂರು : ಮಾದಕ ವಸ್ತು ಸೇವಿಸಿದ್ದ ಓರ್ವ ಯುವಕನನ್ನು ನಗರದ ಹೊರವಲಯದ ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕಸಬಾ ಬೆಂಗ್ರೆ ಬದ್ರಿಯಾ ಮಸೀದಿ ಬಳಿಯ ನಿವಾಸಿ ಮುಹಮ್ಮದ್ ಅಝರ್ (31) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯ ಪಿಎಸೈ ಜ್ಞಾನಶೇಖರರು ಕರ್ತವ್ಯದಲ್ಲಿದ್ದವೇಳೆ ಸಂಜೆ ಕಸಬಾ ಬೆಂಗ್ರೆ ಗ್ರಾಮದ ಗ್ರಂಡ್ ಬಳಿ ಯುವಕನೋರ್ವ ನಶೆಯಲ್ಲಿ ಇದ್ದಂತೆ ಕಂಡುಬಂದಿದ್ದು ಕೂಡಲೇ ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅಮಲು ಪದಾರ್ಥ ಸೇವಿಸಿರುವುದು ದೃಢ ಪಟ್ಟಿದೆ….

Read More

ಮನೆಯಲ್ಲೇ ಮಾಡಿ ಮಕ್ಕಳಿಗೆ ಇಷ್ಟವಾಗುವ ಬ್ರೆಡ್ ಪಿಜ್ಜಾ

ಪಿಜ್ಜಾ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಮಕ್ಕಳ ನೆಚ್ಚಿನ ಆಹಾರದಲ್ಲಿ ಇದು ಒಂದು. ಮನೆಯಲ್ಲಿಯೇ ಮಕ್ಕಳಿಗೆ ಬ್ರೆಡ್ ಪಿಜ್ಜಾ ಮಾಡಿಕೊಡಿ. ಇದನ್ನು ತಯಾರಿಸುವುದು ಬಹಳ ಸುಲಭ ಬ್ರೆಡ್ ಪಿಜ್ಜಾಗೆ ಬೇಕಾಗುವ ಸಾಮಗ್ರಿ : ಬ್ರೌನ್ ಬ್ರೆಡ್ 4 ಚೀಸ್ : 2 ಕ್ಯಾಪ್ಸಿಕಂ :1/2 ಕಪ್ ಸ್ವೀಟ್ ಕಾರ್ನ್ : 1/2 ಕಪ್ ಪಿಜ್ಜಾ ಸಾಸ್ : ½ ಕಪ್ ಬೆಣ್ಣೆ : 2 ಚಮಚ ಕರಿಮೆಣಸಿನ ಪುಡಿ :…

Read More

ಮುಡಾ ಹಗರಣ: ಮಾಜಿ ಅಧ್ಯಕ್ಷನ ಅಕ್ರಮ ಹಗರಣ ಬೆಳಕಿಗೆ

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್ ಪಿ ರಾಜೀವ್ ಅವರು ಒಂದೇ ದಿನದಲ್ಲಿ 848 ನಿವೇಶನಗಳ ಖಾತೆಗಳನ್ನು ಮಾಡಿಕೊಂಡಿದ್ದ ಅಕ್ರಮ ಬಯಲಾಗಿದೆ. ಹೌದು ಮುಡಾ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ ಅಕ್ರಮ ಬಯಲಾಗಿದ್ದು, ಒಂದೇ ದಿನದಲ್ಲಿ 848 ನಿವೇಶನಗಳ ಖಾತೆ ಮಾಡಿಕೊಂಡಿದ್ದ ಮಾಜಿ ಅಧ್ಯಕ್ಷ ರಾಜೀವ್, 2022 ಫೆಬ್ರವರಿ 22ರಂದು ಈ ಒಂದು ಅಕ್ರಮ ನಡೆದಿದೆ. ಈ ಒಂದು ಅಕ್ರಮದ…

Read More

ಗಣೇಶ ಹಬ್ಬಕ್ಕೆ ಮಾತ್ರವಲ್ಲ, ಇಫ್ತಾರ್ ಕೂಟಕ್ಕೂ ರೂಲ್ಸ್ ಮಾಡಿ

ಬೆಂಗಳೂರು: ರಾಜ್ಯ ಸರ್ಕಾರ ಈ ಬಾರಿ ಗಣೇಶ ಹಬ್ಬದ ಪ್ರಸಾದ ತಯಾರಿಕೆಗೆ ಷರತ್ತು ವಿಧಿಸಿರುವುದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೆಂಡ ಕಾರಿದ್ದು, ಕೇವಲ ಗಣೇಶ ಹಬ್ಬಕ್ಕೆ ಮಾತ್ರ ಯಾಕೆ, ಮುಂದೆ ಇಫ್ತಾರ್ ಕೂಟಕ್ಕೂ ನಿಯಮ ಹೇರಬೇಕು ಎಂದಿದ್ದಾರೆ.  ಗಣೇಶೋತ್ಸವಗಳಲ್ಲಿ ಪ್ರಸಾದ ಸ್ವೀಕರಿಸಲು ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆದವರೇ ಆಗಬೇಕು ಎಂದು ರಾಜ್ಯ ಸರ್ಕಾರ ಷರತ್ತು ವಿಧಿಸಿತ್ತು. ಇದಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ…

Read More

ಬಂಟ್ವಾಳ: ಕಾರು ಭೀಕರ ಅಪಘಾತ..! ಪತ್ನಿ ಸಾವು, ಪತಿ ಗಂಭೀರ..!

ಬಂಟ್ವಾಳ: ನವ ದಂಪತಿಗಳಿಬ್ಬರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ ಸಂಭವಿಸಿ ನವವಿವಾಹಿತೆ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ನವವಿವಾಹಿತೆ ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸಗಂಭೀರ ಗಾಯಗೊಂಡ ಪತಿ ಅನಿಶ್ ಕೃಷ್ಣ ಎಂದು ಗುರುತಿಸಲಾಗಿದೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅನಿಶ್ ಕೃಷ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಿಸಿರೋಡ್‌‌ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ…

Read More