Headlines

ವಾಹನ ಸವಾರರೇ `HSRP’ ನಂಬರ್ ಪ್ಲೇಟ್ ಅಳವಡಿಸದಿದ್ದರೆ ಸೆ. 16 ರಿಂದ ದಂಡ ಫಿಕ್ಸ್!

 ರಾಜ್ಯದಲ್ಲಿ ಎಚ್​ಎಸ್​ಆರ್​ಪಿ ಅಳವಡಿಸಲು ಸೆಪ್ಟೆಂಬರ್ 15ರವರೆಗೆ ಅವಕಾಶ ನೀಡಲಾಗಿದೆ. HSRP ಗಳನ್ನು ಪಡೆಯದ ವಾಹನ ಮಾಲೀಕರು ಸೆ.16 ರಿಂದ ದಂಡವನ್ನು ಪಾವತಿಸಬೇಕಾಗಬಹುದು ಅಥವಾ ಇತರ ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆ. 2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಹಳೆ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ಸೆಪ್ಟೆಂಬರ್‌ 15ರವರೆಗೆ ಗಡುವು ವಿಸ್ತರಿಸಲಾಗಿದೆ. 2019ರ ಏಪ್ರಿಲ್‌ 1ಕ್ಕೂ ಮುನ್ನ…

Read More

ಶಕ್ತಿನಗರದ ವೈದ್ಯನಾಥ ಶಾಖೆಯ ವತಿಯಿಂದ 4ನೇ ವರ್ಷದ ಚಿತ್ರಕಲಾ ಸ್ಪರ್ಧೆ

ಮಂಗಳೂರು : ಗಣೇಶೋತ್ಸವದ ಪ್ರಯುಕ್ತ ಶಕ್ತಿನಗರದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿಯ ವೈದ್ಯನಾಥ ಶಾಖೆಯ ವತಿಯಿಂದ 3ನೇ ವರ್ಷದ ಚಿತ್ರಕಲಾ ಸ್ಪರ್ಧೆಯು ದಿನಾಂಕ ಸೆಪ್ಟೆಂಬರ್ 7 ರಂದು ನಡೆಯಿತು. ಅಂಗನವಾಡಿ ಎಲ್. ಕೆ. ಜಿ ಯಿಂದ ಹಿಡಿದು 12ನೇ ತರಗತಿ ವರೆಗಿನ ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಿತು. ಈ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 120ಕ್ಕೂ ಮಿಕ್ಕಿದ ಸ್ಪರ್ಧಾಳುಗಳು ಭಾಗವಹಿಸದ್ದರು. ಹಾಗೆಯೇ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿಯ ವತಿಯಿಂದ ಪ್ರತೀ ಆದಿತ್ಯವಾರ…

Read More

ನಟ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಬೆಂಗಳೂರು: ಕನ್ನಡತಿ ಸೀರಿಯಲ್ ಮೂಲಕ ಫೇಮಸ್ ಆದ ನಟ ಕಿರಣ್ ರಾಜ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಕಿರಣ್ ರಾಜ್ ಅವರು ವೃದ್ಧಾಶ್ರಮಕ್ಕೆ ಹೋಗಿ ಬರುತ್ತಿದ್ದರು. ಈ ವೇಳೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕಾರು ಚಾಲನೆ ಮಾಡುತ್ತಿದ್ದು, ಕಾರು ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಪೆಟ್ಟಾಗಿದ್ದು, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಸದ್ಯ ಕಿರಣ್ ರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು…

Read More

ಕಾರ್ಕಳ: ಸಾಣೂರು ವೇಶ್ಯಾವಾಟಿಕೆ ದಂಧೆ ಕೇಸ್; 3ನೇ ಆರೋಪಿ ಶಾಲಾ ಶಿಕ್ಷಕಿ!

ಕಾರ್ಕಳ: ಸಾಣೂರಿನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ಪ್ರಕರಣದಲ್ಲಿ ಭಾಗಿಯಾಗಿ ಆರೋಪಿಗಳ ಪೈಕಿ ಮೂರನೇ ಆರೋಪಿ ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ಸರ್ಕಾರಿ ಶಾಲೆಯೊಂದರ ಶಿಕ್ಷಕಿ ಎಂಬ ಅಘಾತಕಾರಿ ಮಾಹಿತಿ ಹೊರಬಿದ್ದಿದೆ. ಸಾಣೂರು ಗ್ರಾಮದ ಅವಿನಾಶ್ ಕಂಪೌಂಡ್ ನ ಪ್ರಮೀಳಾ ವಿಜಯಕುಮಾರ್ ಜೈನ್ ಎಂಬಾಕೆಗೆ ಸೇರಿದ ಮನೆಯಲ್ಲಿ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು ಎಂದು ಸಾರ್ವಜನಿಕರು ಆರೋಪಿಸಿದ್ದರು. ಖಚಿತ ಮಾಹಿತಿ ಮೇರೆಗೆ ಪ್ರಭಾರ ಎಎಸ್‌ಪಿ ಜಯಶ್ರೀ ಎಸ್.ಮಾನೆ ಅವರ ನೇತೃತ್ವದಲ್ಲಿ ಪೊಲೀಸರ ತಂಡವರು ಸೆಪ್ಟೆಂಬರ್…

Read More

ಅರುಣ್ ಕುಮಾರ್ ಪುತ್ತಿಲರವರ ವಿರುದ್ಧ FIR ಮತ್ತು ಮುಂದಿನ ತನಿಖಾ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ..!

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಅತ್ಯಾಚಾರ ಆರೋಪದಡಿ ದಾಖಲಾಗಿರುವ ಎಫ್.ಐ.ಆರ್. ಮತ್ತು ನ್ಯಾಯಾಲಯದ ಮುಂದಿನ ತನಿಖಾ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅರುಣ್ ಕುಮಾ‌ರ್ ಪುತ್ತಿಲ ಅವರು ಬೆಂಗಳೂರಿನ ಹೊಟೇಲೊಂದರಲ್ಲಿ ಅತ್ಯಾಚಾರ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ನೀಡಿದ್ದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಅರುಣ್ ಪುತ್ತಿಲ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರುಣ್ ಪುತ್ತಿಲ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಪಿ. ಪಿ. ಹೆಗ್ಡೆ ಅವರು ಮಹಿಳೆಯ…

Read More

 ಶಾಸಕ ಯಶ್ಪಾಲ್ ವಿರುದ್ಧದ ಪ್ರಕರಣ ಹಿಂಪಡೆಯದಿದ್ದರೆ ರಾಜ್ಯವ್ಯಾಪಿ ಹೋರಾಟ – ಬಿಜೆಪಿ

ಉಡುಪಿ: ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುತ್ತೇವೆ ಎನ್ನುವ ಕಾಂಗ್ರೆಸ್ಸಿನ ಮಾತುಗಳೆಲ್ಲ ಕೇವಲ ಬೊಗಳೆಯಾಗಿದ್ದು ಮತೀಯವಾದಿಗಳ ಒತ್ತಡಕ್ಕೆ ಮಣಿದು ವಾಪಸ್ ಪಡೆದ ಸರ್ಕಾರ, ಅದನ್ನು ವಿರೋಧಿಸಿ ಪ್ರತಿಭಟಿಸಿದ ಶಿಕ್ಷಕರ ಮೇಲೆ ಕೇಸ್ ದಾಖಲಿಸಿ ಬೆದರಿಸುವ ತಂತ್ರ ಬಳಸುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದೆ. ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಣೆ ನೀಡಿರುವ ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧದ ಒಂದು ಪ್ರತಿಭಟನೆಯನ್ನೂ ಸಹಿಸಿಕೊಳ್ಳಲು ಆಗದ ನಿರಂಕುಶವಾದಿ ಮನಸ್ಥಿತಿ ಹೊಂದಿರುವುದು ಅವರು ಕುಳಿತ ಮುಖ್ಯಮಂತ್ರಿ ಸ್ಥಾನದ ಘನತೆಗೆ ಕುಂದು. ಪ್ರಾಂಶುಪಾಲರಿಗೆ…

Read More

ಮಂಗಳೂರು: ಕಾನ್‌ಸ್ಟೇಬಲ್‌ ಕೊಲೆ ಯತ್ನ ಪ್ರಕರಣ – ಇಬ್ಬರು ಅಪರಾಧಿಗಳಿಗೆ ಜೈಲು ಶಿಕ್ಷೆ, ದಂಡ

ಮಂಗಳೂರು: ಉಳ್ಳಾಲ ಠಾಣಾ ಕಾನ್‌ಸ್ಟೇಬಲ್‌ ಒಬ್ಬರನ್ನು ಕೊಲೆಗೆ ಯತ್ನಿಸಿದ್ದ ಇಬ್ಬರು ಅಪರಾಧಿಗಳಿಗೆ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10ವರ್ಷ ಜೈಲು ಶಿಕ್ಷೆ ಮತ್ತು ತಲಾ 16ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಉಳ್ಳಾಲದ ನಿವಾಸಿಗಳಾದ ಮುಸ್ತಾಕ್ (32) ಮತ್ತು ಜಾಕೀರ್ (36) ಶಿಕ್ಷೆಗೊಳಗಾದ ಅಪರಾಧಿಗಳು. ಪ್ರಕರಣದ 2ನೇ ಆರೋಪಿ ಯಾಸೀನ್ ಮತ್ತು 3ನೇ ಆರೋಪಿ ಅಶ್ರಫ್(50) ತಲೆಮರೆಸಿಕೊಂಡಿದ್ದಾರೆ. 2015ರ ಡಿ.17ರಂದು ರಾತ್ರಿ ನಾಲ್ವರು ಅಪರಾಧಿಗಳು ಉಳ್ಳಾಲದ ಸಾರ್ವಜನಿಕ ಸ್ಥಳದಲ್ಲಿ ಬಾಟಲಿಗಳನ್ನು ಎಸೆದು ಗಲಾಟೆ ಮಾಡುತ್ತಿದ್ದರು….

Read More

ಪಕ್ಕದ ಮನೆಯ ಮಗು ಕೊಂದು ವಾಷಿಂಗ್ ಮಷಿನ್ ನಲ್ಲಿ ಶವ ಇಟ್ಟ ಮಹಿಳೆ

ತಮಿಳುನಾಡಿನಲ್ಲಿ ಮಹಿಳೆಯ ಕ್ರೌರ್ಯವೊಂದು ಬೆಳಕಿಗೆ ಬಂದಿದ್ದು, ಪಕ್ಕದ ಮನೆಯ ಮಗುವನ್ನು ಕೊಂದು ವಾಷಿಂಗ್ ಮಷಿನ್ ನಲ್ಲಿ ಶವ ಇಟ್ಟ ಪ್ರಕರಣ ನಡೆದಿದೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಮಧುರೈ ಪ್ರದೇಶದಲ್ಲಿ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಧಾಪುರಂ ಪೊಲೀಸರು 40 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಆರೋಪಿ ಮಹಿಳೆಯ ಹೆಸರು ತಂಗಮ್ಮಾಳ್. ಇವರ ಮಗ ಕೆಲ ಸಮಯದ ಹಿಂದೆ ತೀರಿಕೊಂಡಿದ್ದಾನೆ. ಮಹಿಳೆಯ ಮನೆಯವರು ತಮ್ಮ ನೆರೆಹೊರೆಯವರೊಂದಿಗೆ ಜಗಳವಾಡಿದರು. ಕೊಲೆಯಾದ ಮಗುವಿನ ಹೆಸರು ಸಂಜಯ್. ಮನೆಯ ಹೊರಗೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ….

Read More

ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ : ಈ ದಾಖಲೆಗಳಿದ್ರೆ ಸಿಗಲಿದೆ 5 ಲಕ್ಷ ಬಡ್ಡಿ ರಹಿತ ಸಾಲ!

ನವದೆಹಲಿ: ಲಖ್ಪತಿ ದೀದಿ ಯೋಜನೆ ಗ್ರಾಮೀಣಾಭಿವೃದ್ಧಿ ಸಚಿವಾಲಯದ (ಎಂಒಆರ್ಡಿ) ಕಾರ್ಯಕ್ರಮವಾಗಿದ್ದು, ಇದು ಸ್ವಸಹಾಯ ಗುಂಪುಗಳ (ಎಸ್‌ಎಚ್ಜಿ) ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಅರ್ಹತೆ: ಲಖಪತಿ ದೀದಿ SHG ಯ ಸದಸ್ಯರಾಗಿರಬೇಕಾಗಿದ್ದು , ಅವರ ಕುಟುಂಬದ ವಾರ್ಷಿಕ ಆದಾಯ ಕನಿಷ್ಠ 1,00,000 ರೂ. ಈ ಆದಾಯವನ್ನು ಕನಿಷ್ಠ ನಾಲ್ಕು ಕೃಷಿ ಋತುಗಳು ಅಥವಾ ವ್ಯವಹಾರ ಚಕ್ರಗಳಲ್ಲಿ ಲೆಕ್ಕಹಾಕಲಾಗುತ್ತದೆ, ಸರಾಸರಿ ಮಾಸಿಕ ಆದಾಯ 10,000 ರೂ ಆಗಿದೆ. ಕಾರ್ಯಕ್ರಮ ಗುರಿಗಳು: ಈ ಕಾರ್ಯಕ್ರಮವು ಮಹಿಳೆಯರಿಗೆ ಯೋಗ್ಯ ಜೀವನ ಮಟ್ಟವನ್ನು…

Read More

‘ಕರ್ನಾಟಕ ಬಿಜೆಪಿ ಕಚೇರಿ’ ಸ್ಪೋಟಿಸಲು ಪ್ಲಾನ್ ಮಾಡಿದ್ರು: NIA ರಾಮೇಶ್ವರಂ ಕೆಫೆ ಕೇಸ್ ‘ಚಾರ್ಚ್ ಶೀಟ್’ನಲ್ಲಿ ಬಯಲು

ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಸ್ಪೋಟ ಕೇಸ್ ಸಂಬಂಧ ಎನ್‌ಐಎ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ. ಆ ಚಾರ್ಜ್ ಶೀಟ್ ನಲ್ಲಿ ರಾಮೇಶ್ವರಂ ಕೆಫೆ ದಿನವೇ ಕರ್ನಾಟಕ ಬಿಜೆಪಿ ಕಚೇರಿಯನ್ನು ಸ್ಪೋಟಿಸಲು ಪ್ಲಾನ್ ಮಾಡಿದ್ರು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಸ್ಪೋಟಕ ಪ್ರಕರಣ ಸಂಬಂಧ ಎನ್‌ಐಎಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳಾದಂತ ಅಬ್ದುಲ್ ಮಿತನ್ ತಾಹಾ, ಮುಸಾವೀರ್ ಹುಸೇನ್, ಮಾಜ್ ಮುನೀರ್ ಅಹ್ಮದ್ ಹಾಗೂ…

Read More