Headlines

ಉಡುಪಿ: ಮೂರೂವರೆ ವರ್ಷದ ಕಂದಮ್ಮನಿಗೆ ಮನಸೋಇಚ್ಚೆ ಹಲ್ಲೆ- ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗು

ಉಡುಪಿ: ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ ನಡೆದಿದ್ದು, ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 3 ವರ್ಷ 9 ತಿಂಗಳ ಮಗುವನ್ನು ಪೋಷಕರು ಗುರುವಾರ ಬೆಳಿಗ್ಗೆ ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆತಂದಿದ್ದರು. ಮಗುವಿಗೆ ಹುಷಾರಿಲ್ಲ ಎಂದು ಚಿಕಿತ್ಸೆ ಕೊಡಿಸಲು ಕರೆತಂದಿದ್ದ ತಾಯಿ ಮಗುವಿನ ಮೈ ಮೇಲೆ ತೀವ್ರ ತರಹದ ಗಾಯ ಆಗಿರುವುದನ್ನು ಗಮನಿಸಿದ್ದಾರೆ. ಬಳಿಕ ಡಿಹೆಚ್‌ಓ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆಸ್ಪತ್ರೆಗೆ…

Read More

ಪ್ರಧಾನಿ ಮೋದಿ ಮನೆಗೆ ಹೊಸ ಅತಿಥಿ ಆಗಮನ: ಕರುವಿಗೆ ‘ದೀಪ್ ಜ್ಯೋತಿ’ ಎಂದು ಹೆಸರಿಟ್ಟ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 7, ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ಹೊಸ ನಿವಾಸಿ ಇದ್ದಾರೆ – ಅದರ ಹೆಸರು ‘ದೀಪಜ್ಯೋತಿ’ ಎಂಬ ಕರು. ಪ್ರಧಾನಿಯವರ 7, ಲೋಕ ಕಲ್ಯಾಣ ಮಾರ್ಗ್ ನಿವಾಸದ ಆವರಣದಲ್ಲಿ ‘ಗೋಮಾತೆ (ಹಸು) ಕರುವಿಗೆ ಜನ್ಮ ನೀಡಿದೆ’ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ನಿವಾಸದಲ್ಲಿ ಕರುವಿನೊಂದಿಗೆ ಸಮಯ ಕಳೆಯುವ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. “ನಮ್ಮ ಧರ್ಮಗ್ರಂಥಗಳಲ್ಲಿ ಇದನ್ನು ಹೇಳಲಾಗಿದೆ – ‘ಗಾವ್ ಸರ್ವಸುಖ್ ಪ್ರದಾಹ್’. ಲೋಕ…

Read More

ಬಂಟ್ವಾಳ: ಮನೆ ಬಾಗಿಲಿನ ಚಿಲಕ ಮುರಿದು 3.54 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ನಗದು ಕಳ್ಳತನ.!

ಬಂಟ್ವಾಳ ಸಮೀಪ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದ ಕಳ್ಳರು ಲಕ್ಷಾಂತರ ಮೌಲ್ಯದ ನಗ ನಗದು ಕಳವುಗೈದಿದ್ದಾರೆ. ಪುದು ಗ್ರಾಮದ ಪೆರಿಯಾರ್‌ನ ಮನೆಯೊಂದರಲ್ಲಿ ಕಳ್ಳತನ ನಡೆದಿದೆ. ಒಟ್ಟು 3.54 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ನಗದು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪೆರಿಯಾರ್‌ ಬಾಲ್ಪಬೊಟ್ಟು ನಿವಾಸಿ ಮಹಮ್ಮದ್‌ ಇಕ್ಬಾಲ್‌ ಅವರ ಮನೆಯಿಂದ ಕಳವು ನಡೆದಿದೆ. ಕ್ಯಾಟರಿಂಗ್‌ ಕೆಲಸ ಮಾಡುತ್ತಿರುವ ಅವರು ಸೆ. 8ರಂದು ಮನೆಗೆ ಬೀಗ ಹಾಕಿ ಪತ್ನಿ ಜತೆ…

Read More

ಸುರತ್ಕಲ್: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು..!

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಸಮೀಪದ ತಡಂಬೈಲು ಸುಪ್ರೀಂ ಹಾಲ್ ಜಂಕ್ಷನ್ ಬಳಿ ತಡೆರಹಿತ ಬಸ್ ಡಿಕ್ಕಿಯಾಗಿ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರನ್ನು ಉತ್ತರ ಕರ್ನಾಟಕ ಮೂಲದ ಭೀಮಪ್ಪ (40)ಎಂದು ಗುರುತಿಸಲಾಗಿದೆ. ಮೃತ ಭೀಮಪ್ಪ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಉಡುಪಿ ಕಡೆ ನಮ್ಮ ಮಂಗಳೂರು ಕಡೆಗೆ ಹೋಗುತ್ತಿದ್ದ ತಡೆರಹಿತ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಭೀಮಪ್ಪ ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರಿ ಪೊಲೀಸರು…

Read More

ಮಂಗಳೂರು: ಮಹಿಳೆಯ ಕೊಲೆ ಪ್ರಕರಣ – ದಂಪತಿ ಸಹಿತ ಮೂವರ ಮೇಲಿನ ಕೊಲೆ ಆರೋಪ ಸಾಬೀತು

ಮಂಗಳೂರು: ಐದು ವರ್ಷಗಳ ಹಿಂದೆ ನಗರದಲ್ಲಿ ಶ್ರೀಮತಿ ಶೆಟ್ಟಿ ಎಂಬವರನ್ನು ಕೊಲೆಗೈದು ಮೃತದೇಹವನ್ನು 29ತುಂಡುಗಳನ್ನಾಗಿ ಬೇರ್ಪಡಿಸಿ ಬೇರೆಬೇರೆ ಕಡೆಗಳಲ್ಲಿ ಎಸೆದ ಪ್ರಕರಣದಲ್ಲಿ ಮೂವರ ಮೇಲಿನ ಆರೋಪ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ‌‌. ಆದರೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಲಾಗಿದೆ. ನಗರದ ವೆಲೆನ್ಸಿಯಾ ಸಮೀಪದ ಸೂಟರ್‌ಪೇಟೆಯ ಜೋನಸ್ ಸ್ಯಾಟ್ಸನ್(40), ವಿಕ್ಟೋರಿಯಾ ಮಥಾಯಿಸ್ (47) ಹಾಗೂ ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ಶಿಕ್ಷೆಗೊಳಗಾದ ಆರೋಪಿಗಳು. ಈ ಪೈಕಿ ಜೋನಸ್ ಮತ್ತು ವಿಕ್ಟೋರಿಯಾ ಜೈಲಿನಲ್ಲೇ ಶಿಕ್ಷೆ…

Read More

ಬಂಟ್ವಾಳ: ಆಕಸ್ಮಿಕವಾಗಿ ವಿದ್ಯುತ್ ಪ್ರಹರಿಸಿ ಎಲೆಕ್ಟ್ರಿಷಿಯನ್ ಸಾವು..!

ಬಂಟ್ವಾಳ: ಆಕಸ್ಮಿಕವಾಗಿ ವಿದ್ಯುತ್ ಪ್ರಹರಿಸಿ ಎಲೆಕ್ಟ್ರೀಷಿಯನ್ ವೋರ್ವರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ, ಉರ್ಕುಂಜ ಎಂಬಲ್ಲಿ ನಡೆದಿದೆ. ಉಳಿ ಗ್ರಾಮದ ನೆಕ್ಕಿಲ ಪಲ್ಕೆ ನಿವಾಸಿ ಸದಾನಂದ ಗೌಡ ಅವರ ಪುತ್ರ ದೇವದಾಸ್ (35) ಮೃತಪಟ್ಟ ದುರ್ದೈವಿ.ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿರುವ ದೇವದಾಸ್ ಗುರುವಾರ ಸಂಜೆ ಉಳಿ ಗ್ರಾಮದ, ಉರ್ಕುಂಜ ಎಂಬಲ್ಲಿ ಮನೆಯೊಂದರ ವಯರಿಂಗ್ ಕೆಲಸ ಮಾಡಿ, ಮನೆಯ ಹೊರಗಡೆಯಲ್ಲಿದ್ದ ಮೈನ್ ಸ್ವಿಚ್ ಬಳಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರಹರಿಸಿದೆ. ಪರಿಣಾಮ ಕೆಳಗೆ ಬಿದ್ದು ಗಾಯಗೊಂಡಿದ್ದರು ಎನ್ನಲಾಗಿದೆ….

Read More

BREAKING: ಪೋರ್ಟ್ ಬ್ಲೇರ್ ಇನ್ಮುಂದೆ ‘ಶ್ರೀ ವಿಜಯ ಪುರಂ’: ಕೇಂದ್ರ ಸರ್ಕಾರದಿಂದ ಮರುನಾಮಕರಣ

ನವದೆಹಲಿ: ಪೋರ್ಟ್ ಬ್ಲೇರ್ ಹೆಸರನ್ನು ‘ಶ್ರೀ ವಿಜಯ ಪುರಂ’ ಎಂದು ಮರುನಾಮಕರಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪ್ರಕಟಿಸಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿಯನ್ನು ಮರುನಾಮಕರಣ ಮಾಡುವ ನಿರ್ಧಾರವು ಭಾರತವನ್ನು “ವಸಾಹತುಶಾಹಿ ಮುದ್ರೆಗಳಿಂದ” ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನದಿಂದ ಸ್ಫೂರ್ತಿ ಪಡೆದಿದೆ ಎಂದು ಅವರು ಹೇಳಿದರು. “ಪ್ರಧಾನಿ ನರೇಂದ್ರ ಮೋದಿ ಜಿ ಅವರ ದೃಷ್ಟಿಕೋನದಿಂದ ಪ್ರೇರಿತರಾಗಿ, ದೇಶವನ್ನು ವಸಾಹತುಶಾಹಿ ಮುದ್ರೆಗಳಿಂದ ಮುಕ್ತಗೊಳಿಸಲು, ಇಂದು ನಾವು ಪೋರ್ಟ್ ಬ್ಲೇರ್ ಅನ್ನು…

Read More

ಮತ್ತೆ ಹೆಚ್ಚಾಗಲಿದೆ ನಂದಿನಿ ಹಾಲಿನ ಬೆಲೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ ಹೆಚ್ಚಳವಾಗಲಿದೆ. ಈ ಕುರಿತು ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಲಿನ ದರ ಏರಿಕೆ ಮಾಡುತ್ತೇವೆ. ಏರಿಕೆ ಮಾಡಿದ ಹಣ ಸಂಪೂರ್ಣ ರೈತರಿಗೆ ಹೋಗಬೇಕು ಎಂದರು. ನಮ್ಮ ಸರ್ಕಾರ ಯಾವಾಗಲೂ ರೈತರ ಪರ, ಹಾಲು ಉತ್ಪಾದಕರ ಪರ, ದಲಿತರು, ಬಡವರ ಪರ ಇರುತ್ತದೆ ಎಂದು ತಿಳಿಸಿದರು.ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಂದಿನಿ ಹಾಲಿನ ದರವನ್ನು ಜೂನ್‌ 25 ರಂದು ಪ್ರತಿ…

Read More

ಹಿಂದೂ ಸಮಾಜವನ್ನು ಕೆಣಕಬೇಡಿ: ಈದ್ ಮಿಲಾದ್ ದಿನ ನಾವೂ ದಾಳಿ ಮಾಡಿದ್ರೆ ಹೇಗಿರುತ್ತೆ..? ಶರಣ್‌ ಪಂಪ್‌ವೆಲ್‌ ಎಚ್ಚರಿಕೆ

ಮಂಗಳೂರು: ಹಿಂದೂ ಸಮಾಜ ಮನಸ್ಸು ಮಾಡಿದರೆ ನಿಮ್ಮ ಈದ್ ಮಿಲಾದ್ ಮೆರವಣಿಗೆ ಹೋಗಲು ಸಾಧ್ಯವಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಎಚ್ಚರಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ಸಂದರ್ಭ ನಡೆದ ಗಲಭೆಯನ್ನು ಖಂಡಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟ, ವಿಎಚ್‌ಪಿ – ಬಜರಂಗದಳದ ಆಶ್ರಯದಲ್ಲಿ ಇಲ್ಲಿನ ಮಲ್ಲಿಕಟ್ಟೆ–ಕದ್ರಿ ವೃತ್ತದ ಬಳಿ ಗುರುವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕಳೆದ ಸಲ ಶಿವಮೊಗ್ಗದಲ್ಲಿ ಈದ್ ಮಿಲಾದ್…

Read More

ಇಂದು ಮಂಗಳೂರು ನೆಹರೂ ಮೈದಾನದ ಹಿಂದೂ ಯುವ ಸೇನೆಯ ಗಣೇಶೋತ್ಸವದ ಶೋಭಯಾತ್ರೆ

ಮಂಗಳೂರು: ಹಿಂದೂ ಯುವ ಸೇನಾ ಆಶ್ರಯದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಆಚರಿಸಿಕೊಂಡು ಬಂದ 32 ನೇ ವರ್ಷದ ಮಂಗಳೂರು ಗಣೇಶೊತ್ಸವದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಸೆ.13 ರಂದು ಸಂಜೆ 6 ಕ್ಕೆ ನಡೆಯಲಿದ್ದು ಆಬಳಿಕ ಸಂಜೆ 7 ಕ್ಕೆ ಶ್ರೀ ವಿನಾಯಕನ ಶೋಭಯಾತ್ರೆ ಶಿವಾಜಿ ಮಂಟಪದಿಂದ ಹೊರಡಲಿದೆ. ಈ ಶೋಭಯಾತ್ರೆಯಲ್ಲಿ ಹಿಂದೂ ಯುವ ಸೇನಾ ವಿವಿದ ಶಾಖೆಗಳ ದೃಶ್ಯರೂಪಕ, ಸ್ತಬ್ದಚಿತ್ರಗಳು ಭಾಗವಹಿಸಲಿದೆ. ಶೋಭಯಾತ್ರೆಯು ಶಿವಾಜಿ ಮಂಟಪದಿಂದ ಹೊರಟು ಕ್ಲಾಕ್ ಟವರ್, ಸಿಗ್ಮಲ್ ವೃತ್ತ, ಕೆ.ಎಸ್…

Read More