ತೊಕ್ಕೊಟು: ರೈಲ್ವೆ ಹಳಿ ಮೇಲೆ ಜಲ್ಲಿಕಲ್ಲು..! ಕಿಡಿಗೇಡಿಗಳ ಹೇಯ ಕೃತ್ಯದಿಂದ ತಪ್ಪಿದ ಬಾರಿ ಅನಾಹುತ
ಉಳ್ಳಾಲ ತೊಕ್ಕೊಟು ಸಮೀಪದ ರೈಲು ಹಳಿಯ ಮೇಲೆ ಕಿಡಿಗೇಡಿಗಳು ಜಲ್ಲಿ ಕಲ್ಲುಅನ್ನು ಇಟ್ಟಿರುವ ಘಟನೆಯೊಂದು ಶನಿವಾರ ರಾತ್ರಿ ನಡೆದಿದ್ದು, ರೈಲು ಸಂಚರಿಸುವಾಗ ಉಂಟಾದ ಶಬ್ದಕ್ಕೆ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಶನಿವಾರ ರಾತ್ರಿ ಕೇರಳದಿಂದ ಮಂಗಳೂರು ಕಡೆಗೆ ರೈಲು ಸಂಚರಿಸಿದ ವೇಳೆ ದೊಡ್ಡ ಪ್ರಮಾಣದ ಸದ್ದು ಕೇಳಿಸಿದೆ. ಇದರಿಂದ ಸ್ಥಳೀಯರ ಮನೆಗಳಲ್ಲಿ ಕಂಪನದ ಅನುಭವ ಉಂಟಾಗಿದ್ದು, ಜನರು ಭಯಕ್ಕೆ ಕಾರಣವಾಗಿದೆ. ಬಾರಿ ಸದ್ದು ಉಂಟಾಗಿದ್ದರಿಂದ ಸ್ಥಳೀಯರು ಟಾರ್ಚ್ ಹಿಡಿದು ಹಳಿ ಸಮೀಪ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ….

