ಅನ್ಯಾಯವಾಗಿ ಬೀದಿ ಪಾಲಾದೆ, ನ್ಯಾಯ ಕೊಡಿ- ಮಹಿಳೆ ಮಂಜಿ ಕುಲಾಲ್
ಉಡುಪಿ : ನನ್ನ ಗಂಡ ತೀರಿಕೊಂಡಿದ್ದು, ನನ್ನ ಗಂಡನ ಆಸ್ತಿ ಭೂಮಿ ಅನ್ಯಾಯವಾಗಿ ಕುಟುಂಬದ ಪಾಲಾಗಿ ನಾನು ಬೀದಿ ಪಾಲಾಗಿದ್ದೇನೆ. ನನಗೆ ಆಶ್ರಯ ನೀಡಿ ಎಂದು ದುಃಖಿಸಿದ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಸಖಿ ಸೆಂಟರಿಗೆ ದಾಖಲಿಸಿದ ಮಾನವೀಯ ಘಟನೆ ನಡೆದಿದೆ. ಮಹಿಳೆ ಮಂಜಿ ಕುಲಾಲ್(75) ಗಂಡ ಕಾಲ ಕುಲಾಲ್ ರಾಗಿಜೆಡ್ಡು ಬೆಳ್ಳಾಳ ಕುಂದಾಪುರ ಮೂಲದವರಾಗಿದ್ದು, ಉಡುಪಿ ಕರಾವಳಿ ಬೈಪಾಸ್ ರಸ್ತೆ ಬಳಿ ದುಃಖಿಸುತ್ತಿದ್ದ ಮಾಹಿತಿ ಪಡೆದ ವಿಶು ಶೆಟ್ಟಿ ರಕ್ಷಿಸಿದ್ದಾರೆ. ಮಹಿಳೆಯು ತನ್ನ ಒಪ್ಪಿಗೆ…

