Headlines

ಮಂಗಳೂರು: ನ್ಯಾಟ್‌ಕಾಮ್ ಸಮಾವೇಶದಲ್ಲಿ ಡಿಫೆನ್ಸ್ ಲಿಕ್ಕರ್ ಪೂರೈಕೆ – ಪ್ರಕರಣ ದಾಖಲು

ಮಂಗಳೂರು: ನಗರದಲ್ಲಿ ಎರಡು ದಿನಗಳ ಕಾಲ ನಡೆದ ನ್ಯಾಟ್ ಕಾಮ್ ಸಮಾವೇಶದಲ್ಲಿ ಅಕ್ರಮವಾಗಿ ಡಿಫೆನ್ಸ್ ಲಿಕ್ಕರ್ ಪೂರೈಕೆಯಾಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಅಬಕಾರಿ ಪೊಲೀಸರು ತಿಳಿಸಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫರ್ಸನಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ವತಿಯಿಂದ ಎರಡು ದಿನಗಳ ನ್ಯಾಟ್ಕಾನ್ ಸಮಾವೇಶದ ಸಮಾರೋಪ ಶನಿವಾರ ನಡೆದಿತ್ತು. ರಾತ್ರಿ ಪಾರ್ಟಿಗೆ ಆಯೋಜಕರು ಅಬಕಾರಿ ಇಲಾಖೆಯಿಂದ ಸಿಎಲ್-5 (ಒಂದು ದಿನ) ಪರವಾನಿಗೆ ಪಡೆದಿದ್ದರು. ಆದರೆ ರಕ್ಷಣಾ (ಡಿಫೆನ್) ಇಲಾಖೆಯು ಗೋವಾದಿಂದ ಮದ್ಯಗಳನ್ನು ಅಕ್ರಮವಾಗಿ ತಂದು ವಿತರಣೆ ಮಾಡಿತ್ತು. ಅಬಕಾರಿ…

Read More

ಮಕ್ಕಳ ಕೈಗೆ ಮೊಬೈಲ್ ಕೊಡುವ ಎಲ್ಲಾ ಪೋಷಕರು ತಪ್ಪದೇ ಈ ಸುದ್ದಿ ಓದಿ..!

ಮಕ್ಕಳು ಮೊಬೈಲ್ ಫೋನ್ ನೋಡುವುದು ಪ್ರತಿ ಕುಟುಂಬಕ್ಕೂ ಸಂದಿಗ್ಧ ಪರಿಸ್ಥಿತಿಯಾಗುತ್ತಿದೆ. ಇಂದು ಚಿಕ್ಕ ಮಕ್ಕಳು ತಮ್ಮ ಫೋನ್ ಬಳಸುತ್ತಿರುವ ರೀತಿಯನ್ನು ಕಂಡು ಪ್ರತಿಯೊಬ್ಬ ಪೋಷಕರೂ ಚಿಂತಿತರಾಗಿದ್ದಾರೆ ಮತ್ತು ಈ ಪರಿಸ್ಥಿತಿ ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿದೆ. ಕೋವಿಡ್ ನಂತರ ಮಕ್ಕಳು ತಮ್ಮ ಫೋನ್‌ಗಳನ್ನು ಹೆಚ್ಚು ನೋಡುವ ಪ್ರವೃತ್ತಿ ಹೆಚ್ಚಾಗಿದೆ, ಮಕ್ಕಳು ತಮ್ಮ ಮನೆಗಳಲ್ಲಿ ಲಾಕ್ ಆಗಿರುವ ಸಮಯದಲ್ಲಿ, ಅವರು ಹೊರಗೆ ಹೋಗುವುದು ಮತ್ತು ಆಟವಾಡುವುದನ್ನು ಸಂಪೂರ್ಣವಾಗಿ ತಪ್ಪಿಸಿಕೊಂಡರು. ಇದರಿಂದ ಮಕ್ಕಳು ಮೊಬೈಲ್‌ನಲ್ಲಿಯೇ ಸಮಯ ಕಳೆಯುತ್ತಿದ್ದು, ಈಗ ಆ…

Read More

ಯಜಮಾನಿಯರಿಗೆ ಬಿಗ್ ಶಾಕ್ : ಈ ಮಹಿಳೆಯರಿಗೆ ಬರಲ್ಲ ಜುಲೈ ತಿಂಗಳ `ಗೃಹಲಕ್ಷ್ಮಿ’ ಹಣ!

ರಾಜ್ಯ ಸರ್ಕಾರದಿಂದ ಆದಾಯ ತೆರಿಗೆ ಪಾವತಿಸುತ್ತಿದ್ದರೂ, ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳೂ 2000 ಪಡೆಯುತ್ತಿದ್ದಂತ 1.78 ಲಕ್ಷ ಯಜಮಾನಿಯರಿಗೆ ಹಣ ಪಾವತಿ ಮಾಡದಂತೆ ತಡೆ ಹಿಡಿಯಲಾಗಿದೆ. ಈ ಮೂಲಕ ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್ ನೀಡಲಾಗಿದೆ. ಗೃಹ ಲಕ್ಷ್ಮೀ ಯೋಜನೆಯ ನಿಯಮಾನುಸಾರ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಈ ಯೋಜನೆಯಡಿ ಪ್ರಯೋಜನ ಸಿಗುವುದಿಲ್ಲ. ಆದರೂ ಯೋಜನೆಗೆ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೂ 1.78 ಲಕ್ಷ ಮಹಿಳೆಯರು ನೋಂದಾಯಿಸಿಕೊಂಡು, 2000 ಪಡೆಯುತ್ತಿದ್ದಂತ ಶಂಕೆ…

Read More

ಕಾರ್ಕಳ: ಮೃತರ ಹೆಸರಿನಲ್ಲಿದ್ದ 4 ಕೋಟಿ ರೂ ಷೇರು ಮಾರಾಟ ಮಾಡಿ ವಂಚನೆ – ಪ್ರಕರಣ ದಾಖಲು

ಕಾರ್ಕಳ: ಮೃತರ ಹೆಸರಿನಲ್ಲಿದ್ದ ಷೇರುಗಳನ್ನು ಮಾರಾಟ ಮಾಡಿ ಸ್ವಂತಕ್ಕೆ ಉಪಯೋಗಿಸಿಕೊಂಡು ವಂಚಿಸಿರುವ ಬಗ್ಗೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಲಲಿತಾ ರಾವ್‌ ಅವರ ಪತಿ ಅಶೋಕ್‌ ಕಾರ್ಕಳದಲ್ಲಿ ವಾಸವಾಗಿದ್ದವರು. ಇವರು 2020ರ ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಕಾರ್ಕಳದಲ್ಲಿ ಮೃತಪಟ್ಟಿದ್ದರು. ಮೃತರ ಪತ್ನಿ ಮತ್ತು ಮಕ್ಕಳು ಅಮೆರಿಕದಲ್ಲಿ ಇದ್ದ ಕಾರಣ ಅಶೊಕ್‌ ಅವರ ಅಂತಿಮ ಸಂಸ್ಕಾರವನ್ನು ಮೃತರ ಸಹೋದರನ ಮಗ ನವೀನ್‌ ನಡೆಸಿದ್ದರು. ಅಶೋಕ್‌ ಜುಲೈ 13ರಂದು ಮೃತಪಟ್ಟಿದ್ದರೂ ಮೃತರ ಅಣ್ಣ…

Read More

ಮುಂಬರುವ ಹಬ್ಬಗಳ ಸಂದರ್ಭದಲ್ಲಿ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನೇ ಖರೀದಿಸಿ: ಪ್ರಧಾನಿ ಮೋದಿ ಕರೆ

ನವದೆಹಲಿ: ಮುಂಬರುವ ಹಬ್ಬಗಳ ಸಂದರ್ಭದಲ್ಲಿ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನು ಖರೀದಿಸುವಂತೆ ಪ್ರಧಾನಿ ಮೋದಿ ಜನತೆಗೆ ಮನವಿ ಮಾಡಿದ್ದಾರೆ. ಇಂದು ಮನ್ ಕೀ ಬಾತ್ ನ 114ನೇ ಎಪಿಸೋಡ್ ನಲ್ಲಿ ಮಾತನಾಡಿದಂತ ಅವರು, ಮನ್ ಕೀ ಬಾತ್ ಗೆ 10 ವರ್ಷ ಆಗಿದ್ದನ್ನು ನೆನೆದು ಭಾವುಕರಾದರು. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ಹತ್ತು ವರ್ಷಗಳನ್ನು ಪೂರೈಸಿದೆ….

Read More

ಅಕ್ಟೋಬರ್ 3 ರಿಂದ ಮಂಗಳೂರು ದಸರಾ ವೈಭವ ಪ್ರಾರಂಭ

ಮಂಗಳೂರು: ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ ಮಂಗಳೂರು ದಸರಾ ವೈಭವ ಪ್ರಾರಂಭವಾಗಲಿದೆ. ಅಕ್ಟೋಬರ್ 3 ರಂದು ನವದುರ್ಗೆಯರು ಹಾಗೂ ಶಾರದಾಮಾತೆಯ ಪ್ರತಿಷ್ಠಾಪನೆಯೊಂದಿಗೆ ದಸರಾ ಮಹೋತ್ಸವ ಪ್ರಾರಂಭವಾಗಲಿದೆ. ಕುದ್ರೋಳಿಯಲ್ಲಿ ಅಕ್ಟೋಬರ್ 3 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನವದುರ್ಗೆ ಹಾಗೂ ಶಾರದಾಮಾತೆಯ ಪ್ರತಿಷ್ಠಾಪನೆ ನಡೆಯಲಿದೆ. ಅಕ್ಟೋಬರ್ 13 ರಂದು ಸಂಜೆ 4 ಗಂಟೆಯಿಂದ ಶಾರಾದಾ ಮಾತೆ ಹಾಗೂ ನವದುರ್ಗೆಯರ ಶೋಭಾಯಾತ್ರೆ ನಡೆಯಲಿದೆ. ಮಂಗಳೂರು ದಸರಾ ವೈಭವದ 11 ದಿನವೂ ಕುದ್ರೋಳಿ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮಗಳು…

Read More

ಮುಲ್ಕಿ: ಕಾಲೇಜು ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ

ಮುಲ್ಕಿ: ಡೆತ್ ನೋಟ್ ಬರೆದಿಟ್ಟು ಬಾಲಕಿಯೊಬ್ಬಳು ಪ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಲ್ಕಿ ಸಮೀಪದ ಅತಿಕಾರಿಬೆಟ್ಟು ರೈಲ್ವೆ ಗೇಟ್ ಬಳಿಯ ಕ್ವಾಟರ್ಸ್ ನಲ್ಲಿ ಶನಿವಾರ ಸಂಜೆ ನಡೆದಿದೆ. ಕೊಂಕಣ ರೈಲ್ವೆ ಗೇಟ್ ಸಿಬ್ಬಂದಿ ಮಹೇಶ್ ನಾಯಕ್ ಎಂಬುವರ ಪುತ್ರಿ ಉಜ್ವಲ (17) ಮೃತ ಬಾಲಕಿ. ಬಾಲಕಿ ಉಜ್ವಲ ಮುಲ್ಕಿ ವಿಜಯ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕಾಲೇಜಿನಲ್ಲಿ ನಡೆದ ಮೀಟಿಂಗ್ ಮುಗಿಸಿಕೊಂಡು ಮನೆ ಕಡೆ ಬಂದಿದ್ದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಈಕೆ…

Read More

ಪುತ್ತೂರು: ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ ಪ್ರಕರಣ – ಬ್ಯಾಂಕ್ ಸಿಬ್ಬಂದಿ ವಿರುದ್ಧ ಮಾನಭಂಗಕ್ಕೆ ಯತ್ನದ ಪ್ರತಿದೂರು

ಪುತ್ತೂರು:ಬಲ್ನಾಡು ಉಜಿರುಪಾದೆಯಲ್ಲಿ ಸಾಲ ಮರುಪಾವ ತಿಗೆ ಸಂಬಂಧಿಸಿ ಮನೆಗೆ ತೆರಳಿದ್ದ ಬ್ಯಾಂಕ್ ಸಿಬಂದಿಗಳಿಗೆ ಪಿಸ್ತೂಲ್‌ ತೋರಿಸಿಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿದೂರು ದಾಖಲಾಗಿದ್ದು, ಬ್ಯಾಂಕ್ ಸಿಬಂದಿ ವಿರುದ್ಧ ಮನೆಯಲ್ಲಿದ್ದ ಮಹಿಳೆ ಮಾನಭಂಗಕ್ಕೆ ಯತ್ನಿಸಿರುವ ದೂರು ನೀಡಿದ್ದಾರೆ. ಕಾರಿನಲ್ಲಿ ಬಂದ ಅಪರಿಚಿತರು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಸಾಲ ತೀರಿಸಲು ಸಾಧ್ಯವಿಲ್ಲದಿದ್ದರೆ ನಮ್ಮೊಂದಿಗೆ ಬನ್ನಿ ಎಂದು ಮಾನಭಂಗಕ್ಕೆ ಯತ್ನಿಸಿದ್ದಲ್ಲದೆ, ಈ ಬಗ್ಗೆ ದೂರು ನೀಡಿದರೆ ನೀವು ಪಿಸ್ತೂಲ್ ತೋರಿಸಿ ಬೆದರಿಸಿದ್ದೀರೆಂದು ನಿಮ್ಮ ವಿರುದ್ಧವೇ ದೂರು ನೀಡಿ ನಿಮ್ಮನ್ನು ಜೈಲಿಗೆ ಹಾಕಿಸುತ್ತೇವೆ…

Read More

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು..! ಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ 

ಮಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಪುತ್ತೂರು ತಾಲೂಕಿನ ಕೆಮ್ಮಾರ ಎಂಬಲ್ಲಿ ಶನಿವಾರ ಸಂಭವಿಸಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯಲ್ಲಿ ಸಂಭವಿಸಿದ ಅಪಘಾತದ ದೃಶ್ಯ ಸಿಸಿ‌ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆ ಬದಿಯ ಪಕ್ಕದಲ್ಲೇ ಇರುವ ತಂಗುದಾಣ ಬಳಿ ಕಾರು ಮಗುಚಿ ಬಿದ್ದಿದೆ. ಬಸ್ ನಿಲ್ದಾಣದ ಬಳಿ ಹೆಚ್ಚಿನ‌ ಪ್ರಯಾಣಿಕರಿಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಉರುಳಿ ಬಿದ್ದ ಕಾರನ್ನು ಸ್ಥಳೀಯರು ತಕ್ಷಣವೇ ಮೇಲಕ್ಕೆತ್ತಿ ಚಾಲಕನನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

Read More

ಮಂಗಳೂರು: ಹೊತ್ತಿ ಉರಿದ BMW ಕಾರು..!

ಮಂಗಳೂರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬಿಎಂಡಬ್ಲ್ಯು ಕಾರಿನಲ್ಲಿ ಇದ್ದಕಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಸಮೀಪ ಇಂದು ನಡೆದಿದೆ. ಇಂದು ಮಧ್ಯಾಹ್ನದ ವೇಳೆಗೆ ಈ ಅವಘಡ ಸಂಭವಿಸಿದ್ದು, ಕಾರಿನಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಕಾರು ಚಾಲಕ ಕಾರನ್ನು ನಿಲ್ಲಿಸಿದ್ದು ಕೂಡಲೇ ಕಾರಿನಲ್ಲಿದ್ದವರು ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಸುಟ್ಟು ಕರಕಲಾದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬೆಂಕಿ ಅವಘಡಕ್ಕೆ…

Read More