ವಾಹನ ಮಾಲೀಕರಿಗೆ ಬಿಗ್ ರಿಲೀಫ್ : HSRP ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಗಡುವು.!
ಬೆಂಗಳೂರು: ರಾಜ್ಯ ಸರ್ಕಾರದಿಂದ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ಮತ್ತೆ ವಿಸ್ತರಿಸಿ ಆದೇಶಿಸಿದೆ. ಈ ಮೂಲಕ ವಾಹನ ಮಾಲೀಕರಿಗೆ ಬಿಗ್ ರಿಲೀಫ್ ಅನ್ನು ನೀಡಿದೆ. ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು, ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ( High Security Registration Plates-HSRP)ಯನ್ನು ವಾಹನಗಳಿಗೆ ಅಳವಡಿಸಿಕೊಳ್ಳಲು ದಿನಾಂಕ 17-08-2024ರವರೆಗೆ ಅವಕಾಶ ನೀಡಲಾಗಿತ್ತು. ಇಂತಹ ಅವಧಿಯನ್ನು ದಿನಾಂಕ 30-11-2024ರವರೆಗೆ ವಿಸ್ತರಿಸಿ ಆದೇಶಿಸಿರುವುದಾಗಿ ತಿಳಿಸಿದೆ. ಈ ಆದೇಶವು ದಿನಾಂಕ 17-08-2023ರಂದು ಹೊರಡಿಸಿದಂತ ಅಧಿಸೂಚನೆಯ ನಿಯಮಗಳಿಗೆ…

