ಮಂಗಳೂರು : ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣ – ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ..!

ಮಂಗಳೂರು: ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2021ರಲ್ಲಿ ಉಳಾಯಿಬೆಟ್ಟು ಪರಾರಿಯ ರಾಜ್ ಟೈಲ್ಸ್ ಫ್ಯಾಕ್ಟರಿಯ ಬಳಿ 8ವರ್ಷದ ಬಾಲಕಿಯನ್ನು ಜಯಸಿಂಗ್, ಮುಕೇಶ್ ಸಿಂಗ್, ಮನೀಶ್ ತಿರ್ಕಿ ಮೂವರು ಆರೋಪಿಗಳು ಅತ್ಯಾಚಾರವೆಸಗಿ ಹತ್ಯೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಕ್ಸೊ ಪ್ರಕರಣದಡಿ ಈ ಮೂವರನ್ನು ಬಂಧಿಸಲಾಗಿತ್ತು. ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ…

Read More

ಮಂಗಳೂರು: ಅಕ್ರಮ ಮರಳುಗಾರಿಕೆ – ದೋಣಿಗಳು ವಶಕ್ಕೆ

ಮಂಗಳೂರು: ನಗರದ ಗುರುಪುರ ಅಡ್ಡೂರು ಸಮೀಪದ ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಅಧಿಕಾರಿಕಾರಿಗಳು ದಾಳಿ ನಡೆಸಿದ್ದು ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಸ್ಥಳದಲ್ಲಿದ್ದ 9 ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಸ್ಥಳದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲು ಉಪಯೋಗಿಸುತ್ತಿದ್ದ 7 ದೋಣಿಗಳನ್ನು ನೀರಿನ ಅಡಿಯಲ್ಲಿ ಮುಳುಗಿಸಿಟ್ಟಿರುವುದು ದಾಳಿ ಸಂದರ್ಭದಲ್ಲಿ ಪತ್ತೆಯಾಗಿದೆ. ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್‌ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್‌…

Read More

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್..!

ಮಾನಸಿಕ ಆರೋಗ್ಯವನ್ನು ಸುರಕ್ಷಿತವಾಗಿಡುವ ಉದ್ದೇಶದಿಂದ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಸ್ಟ್ರೇಲಿಯಾದಲ್ಲಿ ಸಾಮಾಜಿಕ ಮಾಧ್ಯಮ ಬಳಸಲು ಅನುಮತಿ ನೀಡಲಾಗುವುದಿಲ್ಲ ಎಂದು ಪ್ರಧಾನಿ ಆಂಥೋನಿ ಅಲ್ಬನೀಸ್ ಘೋಷಣೆ ಮಾಡಿದ್ದಾರೆ. ಮಕ್ಕಳು ಸೋಶಿಯಲ್ ಮೀಡಿಯಾ ಬಳಸಿದರೆ ಅದಕ್ಕೆ ಆಯಾ ಕಂಪನಿಗಳೇ ನೇರ ಹೊಣೆ. ಇಲ್ಲಿ ಪಾಲಕರನ್ನು, ಯುವಕರನ್ನು ನಾವು ಹೊಣೆ ಮಾಡುತ್ತಿಲ್ಲ. ಮಕ್ಕಳ ಸೋಶಿಯಲ್ ಮೀಡಿಯಾ ಪ್ರವೇಶವನ್ನು ತಡೆಗಟ್ಟಲು ಸೋಶಿಯಲ್ ಮೀಡಿಯಾ ವೇದಿಕೆಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳು ನಮ್ಮ ಮಕ್ಕಳಿಗೆ ಹಾನಿ ಮಾಡುತ್ತಿವೆ. 15 ವರ್ಷಕ್ಕಿಂತ ಕಡಿಮೆ…

Read More

ಪುತ್ತೂರು: ಲಕ್ಕಿ ಡ್ರಾ ಬಹುಮಾನ ನಂಬಿ ಹಣ ಕಳೆದುಕೊಂಡ ಕೂಲಿ‌ ಕಾರ್ಮಿಕ..!

ಪುತ್ತೂರು: ಲಕ್ಕಿ ಡ್ರಾದಲ್ಲಿ ಮೊಬೈಲ್ ಬಹುಮಾನವಿದೆ ಎಂಬ ಅಪರಿಚಿತನ ಮಾತನ್ನು ನಂಬಿ ಪುಣಚದ ಕೂಲಿ ಕಾರ್ಮಿಕರೊಬ್ಬರು ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ. ಸಂತ್ರಸ್ತ ಕೂಲಿ ಕಾರ್ಮಿಕರ ಮೊಬೈಲ್‌ಗೆ ಅಪರಿಚಿತನೊಬ್ಬ ಕರೆ ಮಾಡಿ ತಮ್ಮ ಮೊಬೈಲ್‌ ನಂಬರ್‌‌ ಲಕ್ಕಿ ಡ್ರಾದಲ್ಲಿ ಆಯ್ಕೆಯಾಗಿದ್ದು, ಅದರಲ್ಲಿ ತಮಗೆ ಮೊಬೈಲ್‌ ಬಹುಮಾನ ಬಂದಿದೆ. ವಿಳಾಸ ಕಳುಹಿಸಿದ್ದಲ್ಲಿ ಮೊಬೈಲ್‌ ತಲುಪಿಸುತ್ತೇವೆ ಎಂದು ತಿಳಿಸಿದ್ದಾನೆ. ಆದರೆ ಅವರು ತನಗೆ ಮೊಬೈಲ್‌ ಬೇಡ ಎಂದು ಹೇಳಿ ಕರೆ ಕಡಿತ ಮಾಡಿದ್ದರು. ಆದರೆ ಮತ್ತೆ ಕರೆ ಮಾಡಿದ ಅಪರಿಚಿತ…

Read More

ಕಾರ್ಕಳ: ಮಗುವಿನಿಂದ ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಖಿನ್ನತೆಗೊಳಗಾಗಿ ಶಿಕ್ಷಕಿ ಆತ್ಮಹತ್ಯೆ..!

ಕಾರ್ಕಳ: ಹುಟ್ಟಿದ ಮಗುವಿನಿಂದ ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಖಿನ್ನತೆಗೊಳಗಾಗಿ ಶಿಕ್ಷಕಿಯೊರ್ವರು ಆತ್ಮಹತ್ಯೆ ಮಾಡಕೊಂಡ ಘಟನೆ ಈದು ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಈದು ಗ್ರಾಮದ ನಿವಾಸಿ ಪ್ರಸನ್ನಾ (29) ಎಂದು ಗುರುತಿಸಲಾಗಿದೆ. ಮೂಡುಬಿದಿರೆಯ ನಿವಾಸಿ ಪ್ರಸನ್ನಾ ಕಾರ್ಕಳ ತಾಲೂಕು ಈದು ಗ್ರಾಮದ ರಾಜೇಶ್ ಎಂಬವರೊಂದಿಗೆ 2022ರಲ್ಲಿ ಮದುವೆಯಾಗಿತ್ತು. ರಾಜೇಶ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಸನ್ನಾ ಹೊಸ್ಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಮದುವೆಯಾಗಿ 10 ತಿಂಗಳ ಹೆಣ್ಣು…

Read More

ಮಂಗಳೂರು: ಚಡ್ಡಿ ಗ್ಯಾಂಗ್‌ನ ಕಥೆ ಕಟ್ಟಿದ ಮಹಿಳೆ – ಪೊಲೀಸ್ ತನಿಖೆಯಲ್ಲಿ ಸತ್ಯ ಬಯಲು

ಮಂಗಳೂರು: ರಾತ್ರಿ ನನ್ನ ಮನೆಗೆ ಚಡ್ಡಿ ಗ್ಯಾಂಗ್ ದರೋಡೆಕೋರರು ಬಂದಿದ್ದಾರೆ. ತಲವಾರು ತೋರಿಸಿ ಬೆದರಿಸಿ, ಹಣ, ಒಡವೆ ಕೇಳಿದ್ದಾರೆ. ಗ್ಯಾಂಗ್‌ನಲ್ಲಿ ನಾಲ್ವರು ಇದ್ದರು, ನಾನು ಕಿಟಕಿಯ ಮೂಲಕ ಅವರ ಫೋಟೋ ತೆಗೆದಿದ್ದೇನೆ ಎಂದು ಹೇಳಿಕೊಂಡು ಮಹಿಳೆಯೋರ್ವರು ಆ ಫೋಟೋವನ್ನು ವೈರಲ್ ಮಾಡುವ ಕುಖ್ಯಾತ ಚಡ್ಡಿ ಗ್ಯಾಂಗ್ ದರೋಡೆಕೋರರೇ ಬಂದಿದ್ದಾರೆ ಎನ್ನುವ ಹಾಗೆ ಕಥೆ ಕಟ್ಟಿ ಜನರಲ್ಲಿ ಭಯ ಹುಟ್ಟಿಸಿದ ಘಟನೆ ಕೆಯ್ಯೂರಿನಲ್ಲಿ ನವೆಂಬರ್‌ 6ರಂದು ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ ಸರ್ಕಲ್ ಇನ್ಸ್‌ಪೆಕ್ಟರ್ ರವಿ.ಬಿ.ಎಸ್ ಅವರು ಮಹಿಳೆಯ…

Read More

ಮಂಗಳೂರು: ಮೂರನೇ ವರ್ಷದ “ಸ್ಟ್ರೀಟ್ ಫುಡ್ ಫಿಯೇಸ್ಟಾ” ಜನವರಿ15 ರಿಂದ 19ರವರೆಗೆ

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಡೆಯುವ ಮೂರನೇ ಆವೃತ್ತಿಯ ಸ್ಟ್ರೀಟ್‌ ಫುಡ್ ಫಿಯೇಸ್ಟಾ 2025 ಜ.15 – 19 ರವರೆಗೆ ಐದು ದಿನಗಳ ಕಾಲ ನಡೆಯಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು. ನಗರದ ವಿ.ಟಿ‌.ರಸ್ತೆಯ ಚೇತನಾ ಬಾಲವಿಕಾಸ ಕೇಂದ್ರದಲ್ಲಿ ಮಾತನಾಡಿದ ಅವರು, ಸ್ಟ್ರೀಟ್‌ ಫುಡ್ ಫಿಯೇಸ್ಟಾ ಮಣ್ಣಗುಡ್ಡ ಗುರ್ಜಿ ಜಂಕ್ಷನ್‌ನಿಂದ ಪ್ರಾರಂಭವಾಗಿ ಉರ್ವ ಕೆನರಾ ಹೈಸ್ಕೂಲ್ ಮುಂಭಾಗದ ರಸ್ತೆಯಾಗಿ ಮನಪಾದವರೆಗೆ, ಮತ್ತೊಂದೆಡೆ ಮಂಗಳಾ ಕ್ರೀಡಾಂಗಣ ಬದಿಯ ರಸ್ತೆಯಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತವಾಗಿ ಪಬ್ಬಾಸ್‌ವರೆಗೆ ಇರಲಿದೆ….

Read More

ಬಂಟ್ವಾಳ: ನಿಲ್ಲಿಸಿದ್ದ ವಾಹನ ಹಿಮ್ಮುಖವಾಗಿ ಚಲಿಸಿ ಮಗು ಸಾವು

ಬಂಟ್ವಾಳ: ನಿಲ್ಲಿಸಿದ್ದ ವಾಹನ ಹಿಮ್ಮುಖವಾಗಿ ಚಲಿಸಿ ಹಿಂಬದಿ ಆಟವಾಡುತ್ತಿದ್ದ ಮಗು ವಾಹನದಡಿ ಸಿಲುಕಿ ಸಾವನ್ನಪ್ಪಿದ ಘಟನೆ ಲೊರೆಟ್ಟೊಪದವಿನಲ್ಲಿ ಬುಧವಾರ ನಡೆದಿದೆ. ಫರಂಗಿಪೇಟೆ ಸಮೀಪದ ಪತ್ತನಬೈಲ್ ನಿವಾಸಿಯಾಗಿದ್ದ ಉನೈಸ್ ಮತ್ತು ಆಶೂರಾ ದಂಪತಿ ಪುತ್ರಿ ಮೂರುವರೆ ವರ್ಷದ ಆಶೀಕಾ ಮೃತ್ಯು.ಆಶೀಕಾ ಅವಳ ಅಜ್ಜಿ ಮನೆಯಾದ ಬಂಟ್ವಾಳದ ಲೊರೊಟ್ಟೋ ಪದವು ಸಮೀಪದ ಟಿಪ್ಪುನಗರದ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ನಿಲ್ಲಿಸಿದ್ದ ಟೆಂಪೋ ವಾಹನ ರಿವರ್ಸ್ ಬಂದಿದೆ. ಈ ವೇಳೆ ಮಗುವಿನ ಮೇಲೆ ವಾಹನ ಹಾದು ಹೋಗಿದೆ. ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದರೂ ಫಲಕಾರಿಯಾಗಲಿಲ್ಲ.ವಾಹನ ಯಾವ…

Read More

ಮಂಗಳೂರು: ಕುಖ್ಯಾತ ದನಗಳವು ಆರೋಪಿಗಳು ಅರೆಸ್ಟ್..!

ಮಂಗಳೂರು: ನಗರದ ಕಾವೂರು ಠಾಣಾ ವ್ಯಾಪ್ತಿಯಲ್ಲಿ ದನಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪೇಜಾವರ ಕೊಂಚಾರು ಕೊಳಂಬೆ, ಬದ್ರಿಯಾನಗರ ನಿವಾಸಿ ಪೈಜಲ್(40), ಉಳ್ಳಾಲ ಕೋಡಿ ನಿವಾಸಿ ಸುಹೈಬ್ ಅಕ್ತರ್ (24) ಬಂಧಿತ ಆರೋಪಿಗಳು. ಕಾವೂರು ಠಾಣಾ ಪೊಲೀಸರು ಕರ್ನಾಟಕ ಜಾನುವಾರು ಹತ್ಯ ಪ್ರತಿಬಂಧಕ ಮತ್ತು ಸಂರಕ್ಷಣಾ ಅದ್ಯಾದೇಶ- 2020 ಕಲಂ 303(1) ಬಿ ಎನ್ ಎಸ್ 2023 ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸಿ ಇಬ್ಬರನ್ನು ಬಂಧಿಸಿ ಕೃತ್ಯಕ್ಕೆ ಉಪಯೋಗಿಸಿರುವ ಕಾರು ಹಾಗೂ ಫ್ಯಾಸಿನೋ…

Read More

ಮಂಗಳೂರು: ಬಸ್‌ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸಲು ಗಡುವು

ಮಂಗಳೂರು: ನಗರದಲ್ಲಿ ಓಡಾಟ ನಡೆಸುವ ಸಿಟಿ ಬಸ್‌ಗಳನ್ನು ಹೊರತುಪಡಿಸಿ ಎಕ್ಸ್‌ಪ್ರೆಸ್, ಕಾಂಟ್ರಾಕ್ಟ್ ಕ್ಯಾರೇಜ್, ಸರ್ವಿಸ್ ಬಸ್‌ಗಳು ಕಡ್ಡಾಯವಾಗಿ ಬಾಗಿಲು ಅಳವಡಿಸಿ ಕಾರ್ಯಾಚರಣೆ ನಡೆಸುವಂತೆ ಮಂಗಳವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಗಡುವು ವಿಧಿಸಲಾಗಿದೆ. ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಸ್ವಯಂಚಾಲಿತ ಬಾಗಿಲನ್ನು ಹೊಂದಿರುವ ಬಸ್‌ಗಳು ಕಡ್ಡಾಯವಾಗಿ ಇಂದಿನಿಂದಲೇ ಈ…

Read More