Headlines

ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್‌ ಬಾವಾ ಸಹೋದರನ ಶವ ಪತ್ತೆ..!

ಮಂಗಳೂರು: ಕೂಳೂರು ಸೇತುವೆ ಬಳಿ ಕಾರು ನಿಲ್ಲಿ ಕಣ್ಮರೆಯಾಗಿದ್ದ ಸಾಮಾಜಿಕ ಮುಂದಾಳು, ಉದ್ಯಮಿ ಮುಮ್ತಾಝ್ ಅಲಿ ಅವರ ಮೃತದೇಹ ಕೂಳೂರಿನ ಫಲ್ಗುಣಿ ನದಿಯಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಮೃತದೇಹ ಪತ್ತೆಯಾದ ಕೂಡಲೇ ಅದನ್ನು ರಕ್ಷಣೆ ಮಾಡಿ ನಗರದ ಖಾಸಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ರವಿವಾರ ಬೆಳಗ್ಗೆ ಉಡುಪಿ – ಮಂಗಳೂರಿನ ಕೂಳೂರು ಸೇತುವೆಯ ಮೇಲೆ ಮುಮ್ತಾಝ್ ಅವರ ಕಾರು ಪತ್ತೆಯಾಗಿತ್ತು. ಅಲ್ಲದೆ, ಕಾರಿನ ಮುಂಭಾಗದ ಬಲ‌ಬದಿ ಅಪಘಾತ ನಡೆದಿರುವ ಕುರುಹುಗಳು ಪತ್ತೆಯಾಗಿತ್ತು. ಮುಮ್ತಾಝ್ ಅಲಿ ಅವರನ್ನು ನಿರಂತರವಾಗಿ…

Read More

ಗುರುಪುರ ಫಲ್ಗುಣಿ ನದಿಗೆ ಹಾರಿದ ರಮೇಶ್ ಕುಲಾಲ್ ರವರ ಮೃತದೇಹ ಪತ್ತೆ…!

ಮಂಗಳೂರು: ಬಡಗ ಎಡಪದವು ಚಟ್ಟೆಪಾದೆಯ ದಡ್ಡಿ ರೋಡ್‌ನ ನಿವಾಸಿ ರಮೇಶ್ ಕುಲಾಲ್ ಗುರುಪುರ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿದ್ದು ಇಂದು ಮೃತದೇಹ ಪತ್ತೆಯಾಗಿದೆ. ಬಡಗ ಎಡಪದವು ಚಟ್ಟೆಪಾದೆಯ ದಡ್ಡಿ ರೋಡ್‌ನ ರಮೇಶ್ ಕುಲಾಲ್ (48) ಶನಿವಾರ ರಾತ್ರಿ 8ಕ್ಕೆ ಬಸ್ಸಿನಲ್ಲಿ ಗುರುಪುರ ಸೇತುವೆ ಬಳಿ ಆಗಮಿಸಿ ಸೇತುವೆ ಮೇಲೆ ಮೊಬೈಲ್ ಮತ್ತು ಚಪ್ಪಲಿಯನ್ನಿಟ್ಟು ನದಿಗೆ ಹಾರಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ನಾಪತ್ತೆಯಾದ ವ್ಯಕ್ತಿಗಾಗಿ ಹುಡುಕಾಟ ನಡೆಸಿದರು. ರಮೇಶ್ ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದಾರೆ ಎಂದು…

Read More

ಗುರುಪುರ ಫಲ್ಗುಣಿ ನದಿಗೆ ಹಾರಿರುವ ಶಂಕೆ: ಬಡಗ ಎಡಪದವು ನಿವಾಸಿ ರಮೇಶ್ ಕುಲಾಲ್ ನಾಪತ್ತೆ..!

ಮಂಗಳೂರು: ವ್ಯಕ್ತಿಯೊಬ್ಬರು ಗುರುಪುರ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿದ್ದು ಈ ಬಗ್ಗೆ  ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಡಗ ಎಡಪದವು ಚಟ್ಟೆಪಾದೆಯ ದಡ್ಡಿ ರೋಡ್‌ನ ರಮೇಶ್ ಕುಲಾಲ್ (48) ಶನಿವಾರ ರಾತ್ರಿ 8ಕ್ಕೆ ಬಸ್ಸಿನಲ್ಲಿ ಗುರುಪುರ ಸೇತುವೆ ಬಳಿ ಆಗಮಿಸಿ ಸೇತುವೆ ಮೇಲೆ ಮೊಬೈಲ್ ಮತ್ತು ಚಪ್ಪಲಿಯನ್ನಿಟ್ಟು ನದಿಗೆ ಹಾರಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ನಾಪತ್ತೆಯಾದ ವ್ಯಕ್ತಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.  ರಮೇಶ್ ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಬಜ್ಪೆ ಪೊಲೀಸ್…

Read More

ಮಂಗಳೂರು: ಖಾಸಗಿ ಬಸ್ಸಿಗೆ “ಇಸ್ರೇಲ್ ಟ್ರಾವೆಲ್ಸ್ “ಹೆಸರು – ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ

ಮುಲ್ಕಿ ಮೂಡುಬಿದ್ರೆ ರೂಟ್‌ನಲ್ಲಿ ಸಂಚರಿಸುತ್ತಿರುವ ಕಟೀಲು ಮೂಲದ ಲೆಸ್ಟರ್ ಟ್ರಾವೆಲ್ಸ್ ತಮ್ಮ ನೂತನ ಬಸ್ಸಿಗೆ “ಇಸ್ರೇಲ್” ಎಂಬ ನಾಮಫಲಕ ಹಾಕಿದ್ದು ವಿವಾದಕ್ಕೆ ಕಾರಣವಾಗಿ ಒಂದು ವರ್ಗದ ಸಂಘಟನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಬಸ್ಸಿನ ಯಜಮಾನ ಏಕಾಏಕಿ ಮರುದಿನವೇ ಬತ್ತಿನ ನಾಮಫಲಕವನ್ನು ಜೆರುಸಲೇಮ್‌ಗೆ ಬದಲಾಯಿಸಿದ್ದಾರೆ. ಬ್ರಿಟಿಷರು ಬಿಟ್ಟು ಹೋದ ಇಸ್ರೇಲ್ ಭಾಗಕ್ಕಾಗಿ ಪ್ಯಾಲೆಸ್ತೀನ್ ಹಾಗೂ ಇಸ್ರೇಲ್ ನಡುವೆ ಆಗಾಗ ಸಂಭವಿಸುತ್ತಿದ್ದು, ಈ ಬಗ್ಗೆ ಭಾರತದಲ್ಲಿ ರಾಜಕೀಯ ಚರ್ಚೆ ಕೂಡ ಕಳೆದ ಬಾರಿ ವಿಪರೀತಕ್ಕೆ…

Read More

ಅರುಣ್ ಉಳ್ಳಾಲ್ ಮೇಲೆ ಕೇಸು ದಾಖಲಿಸಿದ  ಕೆಲವು ಕ್ರಿಶ್ಚಿಯನ್ ಸಂಸ್ಥೆಗಳ ನಡವಳಿಕೆ ಖಂಡನೀಯ- ಸತೀಶ್ ಕುಂಪಲ

ಮಂಗಳೂರು : ಅರುಣ್ ಉಳ್ಳಾಲ್ ಮೇಲೆ ಕೇಸು ದಾಖಲಿಸಿದ  ಕೆಲವು ಕ್ರಿಶ್ಚಿಯನ್ ಸಂಸ್ಥೆಗಳ ನಡವಳಿಕೆ ಖಂಡನೀಯವಾಗಿವೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಇತ್ತೀಚೆಗೆ ಉಳ್ಳಾಲದಲ್ಲಿ ಅನೇಕ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿಯ ಜೊತೆಗೆ ಧರ್ಮ ಶಿಕ್ಷಣದ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವ ಅತ್ಯಂತ ಮುಗ್ಧ ಸ್ವಭಾವದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಅರುಣ್ ಉಳ್ಳಾಲ್ ರವರು ನವದಂಪತಿಗಳ ಸಮಾವೇಶದಲ್ಲಿ ಹಿಂದೂ ವಿಚಾರ ಪದ್ಧತಿಗಳ ಮತ್ತು…

Read More

ಮಂಗಳೂರು ಕುಡುಪು ಬಳಿ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ನ ದಾಸ್ ಓಲ್ಡ್ ಏಜ್ ಹೆಲ್ತ್ ಕೇರ್ ಹೋಮ್ ಶುಭಾರಂಭ

ಮಂಗಳೂರು: ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ನ ಮೂಲಕ ಕಳೆದ 12 ವರ್ಷಗಳಿಂದ ಸೇವಾ ಕ್ಷೇತ್ರದಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಟ್ರಸ್ಟ್ ನ ವತಿಯಿಂದ ನಡೆಸಲ್ಪಡುವ ಎರಡನೇ ಸೇವಾ ಯೋಜನೆ ದಾಸ್ ಒಲ್ಡ್ ಏಜ್ ಹೆಲ್ತ್ ಕೇರ್ ಹೋಂ ಇದೀಗ ಕುಡುಪುವಿನ ಕಮಲ ನಿವಾಸ ಕಟ್ಟಡದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನ್ ದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಮಾಣಿಲ ಇವರ ದಿವ್ಯ ಆಶೀರ್ವಚನದೊಂದಿಗೆ ಹಾಗೂ ಜಿಲ್ಲಾ ಲಯನ್ಸ್ ಗವರ್ನರ್ ಶ್ರೀ ಬಿ ಎಂ ಭಾರತಿರವರ ದಿವ್ಯ…

Read More

ಸುಳ್ಯ: ಆಸ್ಪತ್ರೆಯಿಂದ ವಾರಂಟ್ ಆರೋಪಿ ಪರಾರಿ..!

ಸುಳ್ಯ: ಪ್ರಕರಣವೊಂದರ ವಾರಂಟ್ ಆರೋಪಿಯೋರ್ವ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಆಸ್ಪತ್ರೆಯಿಂದಲೇ ಪರಾರಿಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯದ ಕಲ್ಲುಗುಂಡಿ ಎಂಬಲ್ಲಿ ಕೆಲ ವರ್ಷಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯಾದ ತಮಿಳುನಾಡು ಮೂಲದ ಕಾರ್ತಿಕ್ ಪರಾರಿಯಾಗಿರುವ ಆರೋಪಿ ಎಂದು ತಿಳಿದು ಬಂದಿದೆ. ಆರೋಪಿಯನ್ನು ಸುಳ್ಯದ ಇಬ್ಬರು ಪೊಲೀಸ್ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಸುಳ್ಯದ ಸರಕಾರಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಕರೆದೊಯ್ದಿದ್ದು, ಈ ವೇಳೆ ಒರ್ವ ಸಿಬ್ಬಂದಿ ಚೀಟಿ ಮಾಡಿಸಲು ತೆರಳಿದ್ದ ಸಂದರ್ಭದಲ್ಲಿ ಇನ್ನೋರ್ವ ಸಿಬ್ಬಂದಿಯೊಂದಿಗಿದ್ದ ಆರೋಪಿ…

Read More

BREAKING NEWS: ಮುಡಾ ಕಡತ ನಾಪತ್ತೆ ಪ್ರಕರಣ: ಮತ್ತೊಂದು ದೂರು ದಾಖಲಿಸಿದ ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮತ್ತೊಂದು ದೂರು ದಾಖಲಿಸಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಮುಡಾ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬೈರತಿ ಸುರೇಶ್ ಹಾಗೂ ಹಿಂದಿನ ಲೋಕಾಯುಕ್ತ ಸಜಿತ್ ವಿರುದ್ಧ ದೂರು ದಾಖಲಿಸಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಲಿಖಿತ ದೂರು ನೀಡಿದ್ದಾರೆ.

Read More

ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ನಾಪತ್ತೆ!

ಮಂಗಳೂರು: ಮಾಜಿ ಶಾಸಕ, ರಾಜಕಿಯ ನಾಯಕ  ಮೊಯಿದೀನ್ ಬಾವಾ ಸೋದರ ಮುಮ್ತಾಜ್ ಅಲಿ  ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದಾರೆ.ಅವರ ಐಷರಾಮಿ ಕಾರು ಮಂಗಳೂರಿನ ಕೂಳೂರು ಸೇತುವೆಯಲ್ಲಿ ಅಪಘಾತವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್ ಹಾಗೂ ಅಗ್ನಿಶಾಮಕ ದಳ  ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಮುಮ್ತಾಜ್ ಅಲಿ ಚಲಾಯಿಸುತ್ತಿದ್ದ  ಬಿಎಂ ಡಬ್ಲ್ಯೂ ಕಾರು ಸೇತುವೆ ಮೇಲೆ ಮುಂಭಾಗ ಅಪಘಾತ ನಡೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ  ಮೊಬೈಲ್ ಫೋನ್  ಸ್ವಿಚ್ಡ್ ಆಫ್ ಆಗಿದೆ….

Read More

ಉಳ್ಳಾಲ: ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ..!

ಉಳ್ಳಾಲ: ನಾಪತ್ತೆಯಾಗಿದ್ದ ಅವಿವಾಹಿತ ವ್ಯಕ್ತಿಯ ಮೃತದೇಹ ಪಕ್ಕದ ಪಾಳು ಬಿದ್ದ ಬಾವಿಯಲ್ಲಿ ಇಂದು ಪತ್ತೆಯಾದ ಘಟನೆ ಕೊಲ್ಯ ,ಕುಜುಮಗದ್ದೆಯಲ್ಲಿ ನಡೆದಿದೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೊಲ್ಯ,ಕುಜುಮಗದ್ದೆ ನಿವಾಸಿ ಪ್ರಸಾದ್ (44) ಮೃತ ದುರ್ದೈವಿ. ಮೂಲತ: ಜಪ್ಪು,ಗೋರ್ದಂಡು ನಿವಾಸಿಯಾದ ಪ್ರಸಾದ್ ಕಳೆದ ಕೆಲ ವರುಷಗಳಿಂದ ಕುಟುಂಬ ಸಮೇತ ಕುಜುಮಗದ್ದೆಯಲ್ಲಿ ನೆಲೆಸಿದ್ದರು.ಪೈಂಟರ್ ವೃತ್ತಿ ನಡೆಸುತ್ತಿದ್ದ ಪ್ರಸಾದ್ ಅವರು ಅವಿವಾಹಿತರಾಗಿದ್ದು ಕೆಲ ದಿನಗಳಿಂದ ಖಿನ್ನತೆಗೊಳಗಾಗಿದ್ದರೆಂದು ಹೇಳಲಾಗಿದೆ ಮನೆಯಲ್ಲಿ ಮೊಬೈಲ್ ಫೋನ್ ಬಿಟ್ಟು ಹೋದ ಪ್ರಸಾದ್ ಅವರು ಮತ್ತೆ ಸಂಪರ್ಕಕ್ಕೆ ಸಿಗದೆ ನಿನ್ನೆ…

Read More