ಸಾವನ್ನಪ್ಪಿದ್ದ ಮಹಿಳೆ: 3 ವರ್ಷದ ಬಳಿಕ ಪ್ರಿಯಕರನ ಜೊತೆ ಜೀವಂತ ಪ್ರತ್ಯಕ್ಷ..!
ಲಕ್ನೋ: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಸತ್ತ ಮಹಿಳೆ ಬದುಕಿ ಬಂದಿದ್ದಾಳೆ. ಆಕೆಯ ಹೆತ್ತವರು, ಸಂಬಂಧಿಕರು ಸತ್ತೋಗಿದ್ದಾಳೆ ಎಂದುಕೊಂಡಿದ್ರೆ, ಆಕೆ ಲವರ್ ಜೊತೆ ಜೀವಂತವಾಗಿ ಪ್ರತ್ಯಕ್ಷವಾಗಿದ್ದಾಳೆ. ಲಕ್ನೋದಲ್ಲಿ ಪ್ರಿಯತಮ ಸತ್ಯನಾರಾಯಣ್ ಗುಪ್ತಾ ಜೊತೆ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಳು. ಗೊಂಡಾ ಜಿಲ್ಲೆಯ ವಿನಯ್ ಜೊತೆ 2017 ರಂದು ಕವಿತಾ ಮದುವೆಯಾಗಿದ್ದರು. ನಾಲ್ಕು ವರ್ಷದವರೆಗೂ ಇಬ್ಬರ ಸಂಸಾರದಲ್ಲಿ ಸಣ್ಣ ಬಿರುಕು ಇರಲಿಲ್ಲ. ಆದ್ರೆ, 2021 ಮೇ5ರಂದು ಇದ್ದಕ್ಕಿದ್ಹಾಗೆ ಮನೆಯಿಂದ ಕವಿತಾ ನಾಪತ್ತೆಯಾಗಿದ್ದಳು. ತಕ್ಷಣ ವಿನಯ್ ಕುಮಾರ್ ಕವಿತಾ ಪೋಷಕರಿಗೆ ಪತ್ನಿ…

