ಮಂಗಳೂರು: ಪ್ರಯಾಣಿಕರ ಕಣ್ಮುಂದೆಯೇ ಖಾಸಗಿ ಬಸ್ ಸಿಬ್ಬಂದಿಗಳ ಮಾರಾಮಾರಿ..!
ವಿಟ್ಲ-ಮಂಗಳೂರು ಮಧ್ಯೆ ಸಂಚರಿಸುವ ಸೆಲಿನಾ ಬಸ್ ಮತ್ತು ಪುತ್ತೂರು-ಮಂಗಳೂರು ಮಧ್ಯೆ ಸಂಚರಿಸುವ ಧರಿತ್ರಿ ಬಸ್ ಸಿಬ್ಬಂದಿಗಳು ಪ್ರಯಾಣಿಕರ ಕಣ್ಮುಂದೆಯೇ ಪರಸ್ಪರ ಬಡಿದಾಡುತ್ತಾ ಭೀತಿಯ ವಾತಾವರಣ ಸೃಷ್ಟಿಸಿದ್ದಾರೆ. ಒಂದು ಬಸ್ ಚಾಲಕ ಉಗುಳುವಾಗ ಇನ್ನೊಂದು ಬಸ್ ಚಾಲಕನ ಮೈಗೆ ಬಿತ್ತೆಂಬ ನೆಪದಲ್ಲಿ ಪರಸ್ಪರ ಬಡಿದಾಡಿ ಕೊಂಡಿದ್ದಾರೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಖಾಸಗಿ ಬಸ್ ಸಿಬ್ಬಂದಿಗಳ ಅಟ್ಟಹಾಸ ಮಿತಿಮೀರಿದ್ದು ಸಭ್ಯ ಪ್ರಯಾಣಿಕರು ಓಡಾಡಲು ಹಿಂಜರಿಯುತ್ತಿದ್ದಾರೆ. ಪೊಲೀಸರು, ಆರ್ ಟಿ ಒ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಖಾಸಗಿ ಬಸ್…

