ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವಉದ್ಯೋಗ ಆಕಾಂಕ್ಷಿಗಳಿಗೆ ಉಚಿತ ತರಬೇತಿ

ಧರ್ಮಸ್ಥಳದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವಉದ್ಯೋಗ ಆಕಾಂಕ್ಷಿಗಳಿಗೆ ಉಚಿತ ತರಬೇತಿ ನಡೆಯಲಿದೆ. ವಿವರ ಇಲ್ಲಿದೆ ವಯೋಮಿತಿ : 18 ರಿಂದ 45 ವರ್ಷ, ಬೇಕಾಗುವ ದಾಖಲೆಗಳು : ಆಧಾರ್ ಕಾರ್ಡ್, ರೇಷನ್ ಕಾರ್ಡ್ ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ, ಜೊತೆಗೆ ಸಂಸ್ಥೆಯು ಸಮವಸ್ತ್ರ ಉಚಿತವಾಗಿ ಕೊಡಲಾಗುವುದು, ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಂಚೆ ವಿಳಾಸ : ನಿರ್ದೇಶಕರು ರುಡ್ ಸೆಟ್ ಸಂಸ್ಥೆ ಸಿದ್ದವನ ಉಜಿರೆ,…

Read More

ಕಾರ್ಕಳ: ಅಣ್ಣನ ತಿಥಿ ಕಾರ್ಯದ ಸಿದ್ದತೆ ವೇಳೆ ಕರೆಂಟ್ ಶಾಕ್ ಹೊಡೆದು ತಂಗಿ ಸಾವು..!

ಕಾರ್ಕಳ:ಅಣ್ಣನ ತಿಥಿಗೆ ಪೂರ್ವ ಸಿದ್ಧತೆ ಮಾಡುತ್ತಿದ್ದ ವೇಳೆ ತಂಗಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ನಿಟ್ಟೆ ಪರಪ್ಪಾಡಿ ಎಂಬಲ್ಲಿ ನಡೆದಿದೆ. ಮೃತಪಟ್ಟ ಮಹಿಳೆ ಲಲಿತಾ ಬೋಂಡ್ರ ಎಂದು ಗುರುತಿಸಲಾಗಿದೆ. ನಿಟ್ಟೆ ಪರಪ್ಪಾಡಿಯ ರಾಘು ಬೋಂಡ್ರ ಎಂಬವರು ಕೆಲ ದಿನಳ ಹಿಂದೆ ಮೃತಪಟ್ಟಿದ್ದರು. ಅಣ್ಣನ‌ ತಿಥಿಯ ಪೂರ್ವ ಸಿದ್ಧತೆಗಾಗಿ ಬಂದಿದ್ದ ತಂಗಿ ಲಲಿತಾ ಬೋಂಡ್ರ ಅವರು ಗುರುವಾರ ರಾತ್ರಿ ಅಡುಗೆ ಪಾತ್ರೆಗಳನ್ನು ತೊಳೆಯುತ್ತಿದ್ದರು. ಅದೇ ಸಂದರ್ಭದಲ್ಲಿ ಮನೆ ಹೊರಾಂಗಣದಲ್ಲಿ ಅಳವಡಿಸಲಾಗಿದ್ದ ಶಾಮಿಯಾನದ ಕಬ್ಬಿಣದ ಕಂಬವನ್ನು ಹಿಡಿಯುತ್ತಿದ್ದಂತೆ ಅವರು ವಿದ್ಯುತ್…

Read More

‘ವಕ್ಫ್’ ವಿವಾದ ಬೆನ್ನಲ್ಲೆ, ‘ಖಬರಸ್ತಾನಗಳಿಗೆ’ ಸರ್ಕಾರಿ ಭೂಮಿ ನೀಡಲು ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ‘ವಕ್ಫ್’ ವಿವಾದದಿಂದ ವಿಪಕ್ಷಗಳು ಹಾಗೂ ರೈತರು ಪ್ರತಿಭಟನೆ ಹೋರಾಟ ನಡೆಸುತ್ತಿದ್ದು, ಸಚಿವ ಜಮೀರ್ ಅಹ್ಮದ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರ ಮಧ್ಯ ರಾಜ್ಯ ಸರ್ಕಾರ ಇದೀಗ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದು, ಮುಸ್ಲಿಮರಿಗೆ ಖಬರಸ್ಥಾನಗಳಿಗೆ ಸರ್ಕಾರಿ ಭೂಮಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೌದು ಖಬರಸ್ಥಾನಗಳಿಗೆ ಸರ್ಕಾರಿ ಕಂದಾಯ ಭೂಮಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ವಕ್ಫ್ ವಿವಾದ ಬೆನ್ನಲ್ಲೇ ಇದೀಗ ಈ ಒಂದು ವಿಚಾರ ಮುನ್ನೆಲ್ಲೆಗೆ ಬಂದಿದೆ. ರಾಜ್ಯ…

Read More

ಬಂಟ್ವಾಳ: ಅಡಿಕೆ ಮರದಿಂದ ಕಾಲು ಜಾರಿ ಬಿದ್ದು ಕಾರ್ಮಿಕ ಮೃತ್ಯು..!

ಬಂಟ್ವಾಳ: ಅಡಿಕೆ ಮರದಿಂದ ಅಡಿಕೆ ಕೀಳುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೂಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ಬೋಳಂಗಡಿಯಲ್ಲಿ ನಡೆದಿದೆ. ಮೃತಪಟ್ಟ ಕಾರ್ಮಿಕನನ್ನು ಬೋಳಂಗಡಿ ಮಜಲ್ ಮನೆ ನಿವಾಸಿ ಜೋನ್ ಲೋಬೊ(45) ಎಂದು ಗುರುತಿಸಲಾಗಿದೆ. ಜೋನ್ ಲೋಬೊ ಅವರು ಬೋಳಂಗಡಿ ಪದ್ಮನಾಭ ಪ್ರಭು ಎಂಬವರ ತೋಟದಲ್ಲಿ ಅಡಿಕೆ ಕೀಳುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಡಿಕೆ ಮರದಿಂದ ಬಿದ್ದಿದ್ದಾರೆ. ತಕ್ಷಣ ಅವರನ್ನು ‌ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದ್ರೂ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪತ್ನಿ…

Read More

ಕಡಬ : ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು – ಬೀದಿಪಾಲದ ವೃದ್ಧ ದಂಪತಿಗಳು..!

ಕಡಬ: ಕಡಬ ಸಮೀಪ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲಿನ ಸರಕಾರಿ ಜಮೀನಿನಲ್ಲಿ ಹಲವು ವರ್ಷಗಳಿಂದ ವಾಸ್ತವ್ಯವಿದ್ದ ರಾಧಮ್ಮ ಮತ್ತು ಮುತ್ತುಸ್ವಾಮಿ ಎಂಬ ವೃದ್ಧ ದಂಪತಿಯ ಗುಡಿಸಲನ್ನು ನ್ಯಾಯಾಲಯದ ಆದೇಶ ಎನ್ನುವ ಕಾರಣ ಮುಂದಿಟ್ಟುಕೊಂಡು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದು, ದಂಪತಿ ಬೀದಿಗೆ ಬೀಳುವಂತಾಗಿದೆ. ಕಡಬ ತಹಶೀಲ್ದಾರ್‌ ಪ್ರಭಾಕರ ಖಜೂರೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಕಡಬ ಕಂದಾಯ ನಿರೀಕ್ಷಕ ಪೃಥ್ವಿರಾಜ್‌, ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ ಭಂಡಾರಿ ಉಪಸ್ಥಿತರಿದ್ದರು. ಉಪ್ಪಿನಂಗಡಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು. ಮೂಲತಃ ಚಿತ್ರದುರ್ಗ ಜಿಲ್ಲೆಯ ಹಟ್ಟಿ…

Read More

ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ದಿ| ಬಿ.ಉಮೇಶ್ ಕುಲಾಲ್ ಮಂಚಿ ರವರ ಪುಣ್ಯ ಸ್ಮರಣೆ

ವೇಣೂರು: ತಾರೀಕು 14/11/2024 ಬೆಳ್ತಂಗಡಿ ಗುಂಡೂರಿ ಗ್ರಾಮ, ಶ್ರೀಗುರುಚೈತನ್ಯಸೇವಾಶ್ರಮ ಗುಂಡೂರಿ ಬೆಳ್ತಂಗಡಿ ತಾಲೂಕು ಇಲ್ಲಿ ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಹಿರಿಯ ಸಮಾಜಸೇವಕ ನಿವೃತ್ತ ಸರಕಾರಿ ಉದ್ಯೋಗಿ ದಿವಂಗತ ಬಿ.ಉಮೇಶ್ ಕುಲಾಲ್ ಮಂಚಿ ರವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮೃತರು ತನ್ನ 19 ನೇ ವಯಸ್ಸಿನಲ್ಲಿ ಸರಕಾರಿ ಶ್ಯಾನುಭೋಗರಾಗಿ ದುಡಿದು ನಂತರ ಗ್ರಾಮಲೆಕ್ಕಿಗರಾಗಿ ಸರಕಾರಿ ಸೇವೆ ಸಲ್ಲಿಸಿದ್ದಾರೆ. ಈ ಸಂಧರ್ಭದಲ್ಲಿ ಅದೆಷ್ಟೋ ಬಡಕುಟುಂಬಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸಿಗುವಂತೆ ಪ್ರಾಮಾಣಿಕ ಪ್ರಯತ್ನಪಟ್ಟವರು….

Read More

ಉಡುಪಿ: ನ.16- 17 ಕುಂತಳನಗರದಲ್ಲಿ ‘ಬೃಹತ್ ಉದ್ಯೋಗ ಮೇಳ’

ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್, ಕುಂತಳನಗರ ಇದರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ವತಿಯಿಂದ ಎಂಆರ್‌ಜಿ ಗ್ರೂಪ್‌ನ ಪ್ರಾಯೋಜಕತ್ವದಲ್ಲಿ ಸತತ 3ನೇ ಬಾರಿಗೆ ಎರಡು ದಿನಗಳ ‘ಬೃಹತ್ ಉದ್ಯೋಗ ಮೇಳ’ ವನ್ನು ಇದೇ ನವೆಂಬರ್ 16 ಮತ್ತು 17ರಂದು ಮಣಿಪುರ ಗ್ರಾಮದ ಕುಂತಳನಗರದ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ ಎಂದು ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ತಿಳಿಸಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

Read More

ರೀಲ್ಸ್ ಗಾಗಿ ನಡು ರಸ್ತೆಯಲ್ಲೇ ‘ಪೆಟ್ರೋಲ್ ಬಾಂಬ್’ ಸ್ಪೋಟ : ವಿದ್ಯಾರ್ಥಿಗಳ ಪುಂಡಾಟಕ್ಕೆ ಬೆಚ್ಚಿದ ಜನ..!

ಹಾಸನ : ಇಂದಿನ ಯುವ ಜನತೆಯಂತೂ ಸಂಪೂರ್ಣವಾಗಿ ರೀಲ್ಸ್ ಎನ್ನುವ ಮಾಯಾಲೋಕದಲ್ಲಿ ಮುಳುಗಿ ಬಿಟ್ಟಿದೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಲೈಕ್ಸ್ ಹಾಗೂ ಕಮೆಂಟ್ಸ್ ಗೋಸ್ಕರ ಹುಚ್ಚಾಟಕ್ಕೆ ಇಳಿದಿದ್ದಾರೆ. ಇದೀಗ ಹಾಸನದಲ್ಲಿ ಹಂತದ್ದೇ ಘಟನೆ ನಡೆದಿದ್ದು ಪೆಟ್ರೋಲ್ ಬಾಂಬ್ ಸ್ಪೋಟಿಸಿ ಇನ್ಸ್ಟ್ರಾಗ್ರಾಮ್ ನಲ್ಲಿ ವಿಡಿಯೋ ಕೂಡ ಅಪ್ಲೋಡ್ ಮಾಡಿರುವ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಹೌದು ನಡು ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಸ್ಪೋಟಿಸಿ ವಿದ್ಯಾರ್ಥಿಗಳು ಇದೀಗ ಪುಂಡಾಟ ನಡೆಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪೆಟ್ರೋಲ್ ಬಾಂಬ್ ಸ್ಪೋಟದ ವಿಡಿಯೋ ಕೂಡ…

Read More

ಮಂಗಳೂರು: ಕಾಲೇಜಿನಲ್ಲಿ ಕುಸಿದು ಬಿದ್ದು ಉಪನ್ಯಾಸಕಿ ಯೋರ್ವರು ಮೃತ್ಯು

ಮಂಗಳೂರು: ನಗರದ ಕಾಲೇಜಿನಲ್ಲಿ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದ ಉಪನ್ಯಾಸಕಿ ಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರು ನಗರದ ಸಂತ ಅಲೋಶಿಯಸ್‌ ಕಾಲೇಜಿನ ಉಪನ್ಯಾಸಕಿ, ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್‌(23) ಎಂದು ತಿಳಿಯಲಾಗಿದೆ. ಫುಡ್ ಅಲರ್ಜಿ ಕಾರಣ ಗ್ಲೋರಿಯಾ ಕಳೆದ ಶುಕ್ರವಾರ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಕಾಲೇಜಿನಲ್ಲಿ ಏಕಾಏಕಿ ಕುಸಿದುಬಿದ್ದಿದ್ದರು. ಅವರನ್ನು ಕೂಡಲೇ ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ನುರಿತ ವೈದ್ಯರ ತಂಡ ತಿಳಿಸಿದ್ದರು. ಅನಾಫಿಲ್ಯಾಕ್ಟಿಕ್‌ ರಿಯಾಕ್ಷನ್‌…

Read More

ಬೆಳ್ತಂಗಡಿ: ಅಸೌಖ್ಯದಿಂದ ವಿದ್ಯಾರ್ಥಿ, ಕಬಡ್ಡಿ ಕ್ರೀಡಾಪಟು ಸಾವು..!

ಬೆಳ್ತಂಗಡಿ: ಅಲ್ಪಕಾಲದ ಅಸೌಖ್ಯದಿಂದ ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿ ಚಿನ್ಮಯ್‌ ಗೌಡ ಪಿ.ಕೆ ನಿನ್ನೆ (ನ.12) ನಿಧನರಾಗಿದ್ದಾರೆ. ಮಂಡ್ಯ ಮೂಲದ ಚಿನ್ಮಯ್‌ ಗೌಡ, ಹಾಸ್ಟೆಲ್‌ನಲ್ಲಿ ವಾಸವಿದ್ದು, ಅಲ್ಲಿಂದಲೇ ಕಾಲೇಜಿಗೆ ಹೋಗುತ್ತಿದ್ದರು. ಉತ್ತಮ ಕಬಡ್ಡಿ ಕ್ರೀಡಾಪಟುವಾಗಿದ್ದ ಚಿನ್ಮಯ್‌ , ಕಾಲೇಜಿಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು. ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಚಿನ್ಮಯ್‌ ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Read More