ಉಡುಪಿಯಲ್ಲಿ ಮೋದಿ ಭರ್ಜರಿ ರೋಡ್ ಶೋ: ಹೂ ಮಳೆಗೈದು ಸ್ವಾಗತಿಸಿದ ಜನ

ಉಡುಪಿ: ಪರ್ಯಾಯ ಪುತ್ತಿಗೆ ಮಠದಲ್ಲಿ ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಉಡುಪಿಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಿದ್ದು, ಕೃಷ್ಣನೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ, ಆದಿ ಉಡುಪಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಸಚಿವ ದಿನೇಶ್ ಗುಂಡೂರಾವ್ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಆದಿ ಉಡುಪಿಯಿಂದ ಪ್ರಧಾನಿ ಮೋದಿ ರೋಡ್ ಶೋ ಆರಂಭವಾಗಿದ್ದು, ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ರೋಡ್ ಶೋ ನಡೆದಿದೆ….

Read More

ದೆಹಲಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮನ

ಮಂಗಳೂರು : ಉಡುಪಿಗೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದೂ, ಇದೀಗ ನವದೆಹಲಿಯಿಂದ ಮೋದಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮೀಸಿದ್ದಾರೆ. ಅಲ್ಲಿಂದ ಹೇಳಿಕ್ಯಾಪ್ಟರ್ ನಲ್ಲಿ ಉಡುಪಿಗೆ ತೆರಳಲಿದ್ದಾರೆ. ನಂತರ ಉಡುಪಿಯಲ್ಲಿ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ ಮತ್ತು ‘ಸುವರ್ಣ ಕನಕನ ಕಿಂಡಿ’ ಉದ್ಘಾಟಿಸಲಿದ್ದಾರೆ. ಪ್ರಧಾನಿ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ನಿಗದಿಗಿಂತಲೂ 40 ನಿಮಿಷ ಮುಂಚಿತವಾಗಿ ಅಂದರೆ, ಬೆಳಗ್ಗೆ 11.40ರ ಬದಲಿಗೆ 11 ಗಂಟೆಗೇ ಅವರು ಉಡುಪಿ ತಲುಪಲಿದ್ದಾರೆ. ಅವರ ಎಲ್ಲಾ…

Read More

ಬೆಳ್ತಂಗಡಿ: 16ರ ಹರೆಯದ ಬಾಲಕಿ ಗರ್ಭಿಣಿ..!! ದೂರು ದಾಖಲು

ಬೆಳ್ತಂಗಡಿ: ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿ ಅಪ್ರಾಪ್ತೆಯನ್ನು ಗರ್ಭಿಣಿಯಾಗಿಸಿದ ಬಗ್ಗೆ ಬಾಲಕಿ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮ್ಜತ್ ಖಾನ್ (18) ಪ್ರಕರಣದ ಆರೋಪಿ. 16ರ ಹರೆಯದ ಬಾಲಕಿ ವೇಣೂರು ಸನಿಹದ ಸಂಬಂಧಿಕರ ಮನೆಗೆ ಬಂದಿದ್ದಾಳೆ. ಈ ವೇಳೆ ಅತ್ತೆಯ ಮಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕಮಾಡಿದ್ದಾನೆ. ಇದಾದ ಬಳಿಕ ಬಾಲಕಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ಹೇಳಿ ಕದ್ದುಮುಚ್ಚಿ ನಿರಂತರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎನ್ನಲಾಗಿದೆ. ಬಾಲಕಿ ಅನಾರೋಗ್ಯದ…

Read More

ಪುತ್ತೂರು: ಬಿಜೆಪಿಯಿಂದ ನಿರ್ಲಕ್ಷ್ಯಕ್ಕೊಳಗಾದ ಮೂವರು ನಾಯಕರಿಗೆ ಮಣೆ ಹಾಕಿದ ಪುತ್ತಿಲ ಪರಿವಾರ..!!

ಪುತ್ತೂರು: ಇಂದುನಡೆದ ದಿಢೀರ್ ಬೆಳವಣಿಗೆಯಲ್ಲಿ ಪುತ್ತೂರು ಬಿಜೆಪಿ ಮಂಡಲದಲ್ಲಿ ಮೇಜರ್ ಸರ್ಜರಿ ನಡೆದಿತ್ತು. ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನಗರ ಮಂಡಲಗಳಿಗೆ ತಲಾ ಇಬ್ಬರಂತೆ, ಒಟ್ಟು ನಾಲ್ವರು ಹೊಸ ಪ್ರಧಾನ ಕಾರ್ಯದರ್ಶಿಗಳನ್ನು ಬಿಜೆಪಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈ ನಡೆ ಮೂಲಕ ಕಳೆದ ಒಂದು ವರ್ಷಕ್ಕೂ ಅಧಿಕ ಕಾಲದಿಂದ ಪಕ್ಷದ ಅಯಕಟ್ಟಿನ ಹುದ್ದೆ  ಅಲಂಕರಿಸಿದ್ದ  ಮೂವರು ನಾಯಕರಿಗೆ ಪರೋಕ್ಷವಾಗಿ ಗೇಟ್‌ ಪಾಸ್‌ ನೀಡಲಾಗಿತ್ತು. ಬಿಜೆಪಿಯಿಂದ ನಿರ್ಲಕ್ಷ್ಯಕ್ಕೊಳಗಾದ ನಾಯಕರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಮಣೆ…

Read More

ಮಂಗಳಾದೇವಿ ನೂತನ “ಕುಲಾಲ ಭವನ” ಉದ್ಘಾಟನಾ ಸಮಾರಂಭದಲ್ಲಿ “ಲಯನ್ ಅನಿಲ್ ದಾಸ್” ರವರಿಗೆ ಮುಂಬೈ ಕುಲಾಲ ಸಂಘ ವತಿಯಿಂದ ಸನ್ಮಾನ

ಮಂಗಳೂರು: ಕುಲಾಲ ಸಂಘ ಮುಂಬಯಿ ವತಿಯಿಂದ ಮಂಗಳಾದೇವಿ ದೇವಸ್ಥಾನದ ಸನಿಹ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯ ಹೊಂದಿದ ಬಹುಕೋಟಿ ವೆಚ್ಚದ ‘ಕುಲಾಲ ಭವನ ನವೆಂಬರ್ 23 ರವಿವಾರ ಉದ್ಘಾಟನೆಗೊಂಡಿತು. ಈ ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಹಾಗೂ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಗಳ ಒಕ್ಕೂಟ ಇದರ ಜಿಲ್ಲಾ ಅಧ್ಯಕ್ಷರಾದ ಲಯನ್ ಅನಿಲ್ ದಾಸ್ ರವರನ್ನು ಮುಂಬೈ ಸಂಘದ ಅಧ್ಯಕ್ಷರಾದ ಶ್ರೀ ರಘು ಮೂಲ್ಯ. ಶ್ರೀ ದೇವದಾಸ್ ಕುಲಾಲ್, ಶ್ರೀ ಸುನಿಲ್ ರಾಜು ಸಾಲಿಯಾನ್ ,…

Read More

ಜ. 04ರಂದು ಮಂಗಳೂರಿನ ಪುರಭವನದಲ್ಲಿ “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾರ್ಯಕ್ರಮ

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ಮಂಗಳೂರು ಇದರ ಸಹಯೋಗದಲ್ಲಿ “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾಯ೯ಕ್ರಮ ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ಜ. 04ರಂದು ನಡೆಯಲಿದೆ. ಬೆಳಿಗ್ಗೆ 09 ಗಂಟೆಗೆ ಪದಗ್ರಹಣ ನಡೆಯಲಿದ್ದು, ಬಳಿಕ ಮಧ್ಯಾಹ್ನ 12.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ನಡುಬೊಟ್ಟು…

Read More

ಮಣಿಪಾಲ: ಮೊಬೈಲ್ ಹ್ಯಾಕ್ ಮಾಡಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ

ಮಣಿಪಾಲ: ವೈದ್ಯೆಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆ ಹಾಗೂ ಕ್ರೆಡಿಟ್ ಕಾರ್ಡ್‌ನಿಂದ ಲಕ್ಷಾಂತರ ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ ಕಸ್ತೂರ್ಬಾ ಕಾಲೇಜಿನಲ್ಲಿ ತೃತಿಯ ವರ್ಷದ ಎಂಡಿ ವಿದ್ಯಾಭ್ಯಾಸ ಮಾಡುತ್ತಿರುವ ಡಾ. ಎನ್.ಶ್ವೇತಾ ರೆಡ್ಡಿ ಎಂಬವರಿಗೆ ನ.18ರಂದು ಬ್ಯಾಂಕಿನ ಏಜೆಂಟ್ ಎಂದು ಕರೆ ಮಾಡಿ ಕ್ರೆಡಿಟ್ ಕಾರ್ಡ್ ಪ್ರೊಟೆಕ್ಷಷನ್ ಸರ್ವಿಸ್ ಅವಧಿ ಮುಗಿದಿದೆ ಎಂದು ತಿಳಿಸಿದ್ದು, ಬಳಿಕ ಕರೆ ಮಾಡಿ ಗೂಗಲ್‌ನಲ್ಲಿ ಐ ಮೊಬೈಲ್ ಲೈಟ್ ಆ್ಯಪ್ ಎಂಬುದಾಗಿ…

Read More

ಮೋದಿ ರೋಡ್ ಶೋ ವೇಳೆ ಕಡ್ಡಾಯವಾಗಿ ನಿಯಮ ಪಾಲಿಸಲು ಸೂಚನೆ

ನ. 28ರಂದು ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ಕೆಲವೊಂದು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆ ಹೊರಡಿಸಿದೆ. * ರೋಡ್ ಶೋ ಕಾರ್ಯಕ್ರಮಕ್ಕೆ ಬರುವವರು ಬೆಳಗ್ಗೆ 10.30ರ ಒಳಗಾಗಿ ಆಗಮಿಸಿ ನಿಗದಿತ ಸ್ಥಳ ಸೇರಬೇಕು. ತಡವಾಗಿ ಬಂದವರಿಗೆ ನಿರ್ಬಂಧ ವಿಧಿಸಲಾಗುತ್ತದೆ. * ರೋಡ್ ಶೋ ಮಾರ್ಗದ ಎರಡೂ ಬದಿಯಲ್ಲಿ ಅಳವಡಿಸಲಾಗಿರುವ ಪೊಲೀಸ್ ಬ್ಯಾರಿಕೇಡ್ ದಾಟಬಾರದು. * ರೋಡ್ ಶೋ ಮಾರ್ಗದಲ್ಲಿ ನೀರಿನ ಬಾಟಲ್, ಬ್ಯಾಗ್‌ಗಳು, ಹೂವಿನ ಬೊಕ್ಕೆ,…

Read More

ಉಳ್ಳಾಲ: ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂ. ವಂಚನೆ-6 ಆರೋಪಿಗಳು ಬಂಧನ

ಉಳ್ಳಾಲ: ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಓರ್ವ ತಲೆಮರೆಸಿಕೊಂಡ ಘಟನೆ ತೊಕ್ಕೊಟ್ಟಿನ ಹಣಕಾಸು ಸಂಸ್ಥೆಯೊಂದರಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ವಿಕ್ರಮ್, ಹರೇಕಳದ ಇಸ್ಮಾಯಿಲ್, ಮುಹಮ್ಮದ್ ಮಿಸ್ಬಾ, ಕಾಟಿಪಳ್ಳದ ಉಮರ್ ಫಾರೂಕ್, ಉಳ್ಳಾಲ ಮೇಲಂಗಡಿಯ ಇಮ್ತಿಯಾಝ್, ಮಂಚಿಲದ ಝಹೀಮ್ ಅಹ್ಮದ್ ಬಂಧಿತರಾಗಿದ್ದು, ಹೆಜಮಾಡಿಯ ನೌಫಾಲ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಕೊಣಾಜೆ ವಿವಿ ರಸ್ತೆಯಲ್ಲಿರುವ ಹಣಕಾಸು ಸಂಸ್ಥೆಯೊಂದಕ್ಕೆ ನ.22ರಂದು ಸಂಜೆ ಸುಮಾರು 5 ಗಂಟೆ…

Read More

ಧರ್ಮಸ್ಥಳ: ಭಕ್ತರ ಚಿನ್ನಾಭರಣ ಕದಿಯುತ್ತಿದ್ದ ಇಬ್ಬರು ಕಳ್ಳಿಯರ ಬಂಧನ..!!

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳೆಯರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಸುಮಾರು 5.32 ಲಕ್ಷ ರೂ ಮೌಲ್ಯದ 76 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯ ಹುಬ್ಬಳಿ ನಗರದ 2ನೇ ಕ್ರಾಸ್ ಗಂಗಾಧರ ನಗರ ನಿವಾಸಿ ತಾಯಿ ಬೀಬಿಜಾನ್ (59) ಮತ್ತು ಮಗಳು ಮಸಾಭಿ ಅಲಿಯಾಸ್‌ ಆರತಿ (34) ಸೆರೆಯಾದ ಕಳ್ಳಿಯರು. ಆಂಧ್ರ ಪ್ರದೇಶದ ನೆಲ್ಲೂರು ನಿವಾಸಿ ಜೆ.ಲತಾ ಅವರು ಕುಟುಂಬ ಸಮೇತ ಕಳೆದ ಮೇ 3ರಂದು ಶ್ರೀ ಕ್ಷೇತ್ರ…

Read More