ಪ್ರತಿಭಾ ಕುಳಾಯಿ ಹೆಣ್ಣು ಮಕ್ಕಳ ಬೀದಿ ಭಜನೆ ಕುರಿತ ಹೇಳಿಕೆ: ಭರತ್ ಶೆಟ್ಟಿ ಪ್ರತಿಕ್ರೀಯೆ
ಮಂಗಳೂರು : ಬಿಲ್ಲವ ನಾಯಕಿ, ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿಯ ಹೆಣ್ಣು ಮಕ್ಕಳ ಬೀದಿ ಭಜನೆ ಕುರಿತ ಹೇಳಿಕೆಗೆ ಶಾಸಕ ಶಾಸಕ ಭರತ್ ಶೆಟ್ಟಿ ಅವರು ತೀಕ್ಷ ಪ್ರತಿಕ್ರೀಯೆ ನೀಡಿದ್ದಾರೆ. ಇದು ಸಮಾಜ ಒಡೆಯುವ ಪ್ರಯತ್ನವಾಗಿದ್ದು, ಹಿಂದೂ ಸಮಾಜವನ್ನು ಒಡೆಯಬೇಕೆಂಬ ಕುತಂತ್ರ ಇದರ ಹಿಂದೆ ಇದೆ ಎಂದು ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಿಂದೂ ಪರಂಪರೆಯಲ್ಲಿ ಸನಾತನ ಧರ್ಮದಲ್ಲಿ ದೇವರನ್ನ ಅರ್ಥ ಮಾಡ್ಕೊಳ್ಳಿಕ್ಕೆ, ದೇವರನ್ನು ಮುಟ್ಟಲು ಹಲವಾರು ಮಾರ್ಗಗಳಿವೆ. ಧ್ಯಾನ ಮಾರ್ಗ ಕರ್ಮದ ಮಾರ್ಗನೂ ಇದೆ…

